ಮಹಾರಾಷ್ಟ್ರ-ಕರ್ನಾಟಕ ಗಡಿ ಸಂಘರ್ಷ: ಗಡಿಯಲ್ಲಿನ ಗಲಭೆ, ಪ್ರತಿಭಟನೆಗಳ ಬಗ್ಗೆ ನಿಗಾ ವಹಿಸಲು ಐಪಿಎಸ್ ಅಧಿಕಾರಿ ನೇಮಕಕ್ಕೆ ಸೂಚನೆ: ಸಿಎಂ ಬೊಮ್ಮಾಯಿ

ಮಹಾರಾಷ್ಟ್ರ-ಕರ್ನಾಟಕ ಗಡಿ ಸಂಘರ್ಷ ವಿಚಾರವಾಗಿ  ಗಡಿಯಲ್ಲಿನ ಗಲಭೆ, ಪ್ರತಿಭಟನೆಗಳ ಬಗ್ಗೆ ನಿಗಾ ವಹಿಸಲು ಐಪಿಎಸ್ ಅಧಿಕಾರಿ ನೇಮಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮಗಳ ಎದುರು ಮಾತನಾಡಿದ ಸಿಎಂ ಬೊಮ್ಮಾಯಿ
ಮಾಧ್ಯಮಗಳ ಎದುರು ಮಾತನಾಡಿದ ಸಿಎಂ ಬೊಮ್ಮಾಯಿ

ನವದೆಹಲಿ: ಮಹಾರಾಷ್ಟ್ರ-ಕರ್ನಾಟಕ ಗಡಿ ಸಂಘರ್ಷ ವಿಚಾರವಾಗಿ  ಗಡಿಯಲ್ಲಿನ ಗಲಭೆ, ಪ್ರತಿಭಟನೆಗಳ ಬಗ್ಗೆ ನಿಗಾ ವಹಿಸಲು ಐಪಿಎಸ್ ಅಧಿಕಾರಿ ನೇಮಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಜೊತೆ ಗಡಿ ವಿವಾದ ಕುರಿತು ಇಂದು (ಡಿ.14) ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2004 ರಿಂದ ಏನೆಲ್ಲ ಆಯ್ತು ಎಂದು ಸಭೆಯಲ್ಲಿ ವಿವರಿಸಿದ್ದೇನೆ. ಮಹಾರಾಷ್ಟ್ರದವರು ತಮ್ಮ ವಾದ ಮುಂದಿಟ್ಟರು. ಎರಡು ವಾದವನ್ನು ಕೇಳಿದ ಬಳಿಕ ಕೆಲವು ನಿರ್ದೇಶನ ನೀಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳಿಗೂ ಅವರು ಮನವಿ ಮಾಡಿದ್ದಾರೆ. ರಾಜಕೀಯ ಹೊರೆತಾಗಿ ಒಂದಾಗಿ ಇರುವ ಬಗ್ಗೆ ಹೇಳಿದ್ದಾರೆ ಎಂದು ಹೇಳಿದರು.

ಅಂತೆಯೇ 'ಸುಪ್ರೀಂ ಆದೇಶದವರೆಗೂ ಯಾವುದೇ ನಿರ್ಧಾರ ಸಾಧ್ಯವಿಲ್ಲ, ಸಣ್ಣಪುಟ್ಟ ಸಮಸ್ಯೆಗಳ ತಟಸ್ಥ ಸಮಿತಿಯಲ್ಲೇ ಪರಿಹರಿಸಿಕೊಳ್ಳಬೇಕು.. ಜನರ ನಡುವೆ ಏನು ಸಮಸ್ಯೆ ಇಲ್ಲ. ಈ ಬಗ್ಗೆ ಯಾರು ಕೂಡ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಸುಪ್ರೀಂಕೋರ್ಟ್ ಈ ಬಗ್ಗೆ ಆದೇಶ ನೀಡಲಿದೆ. ಸಣ್ಣ ಪುಟ್ಟ ವಿಚಾರಗಳ ಸಮಸ್ಯೆಗಳಿದ್ದರೆ ತಟಸ್ಥ ಸಮಿತಿಯಲ್ಲಿ ಚರ್ಚಿಸಿ ಸರಿ ಮಾಡಿಕೊಳ್ಳುವಂತೆ ಅಮಿತ್​ ಶಾ ಸೂಚಿಸಿದ್ದಾರೆ ಎಂದು ಹೇಳಿದರು. 

ಗಡಿ ವಿವಾದ ಜನವರಿಯಲ್ಲಿ ಕೋರ್ಟ್​​ನಲ್ಲಿ ವಿಚಾರಣೆಗೆ ಬರಲಿದೆ. ನಾನು ಗಡಿಯಲ್ಲಿನ ವಾಸ್ತವ ಸ್ಥಿತಿಗತಿ ಬಗ್ಗೆ ಹೇಳಿದ್ದೇನೆ. ಗಡಿಯಲ್ಲಿನ ಗಲಭೆ, ಪ್ರತಿಭಟನೆಗಳ ಬಗ್ಗೆ ನಿಗಾ ವಹಿಸಲು ಆಯಾ ರಾಜ್ಯದಲ್ಲಿ ಓರ್ವ ಐಪಿಎಸ್ ಅಧಿಕಾರಿಯನ್ನು ನೇಮಿಸಲು ಸೂಚಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಮತ್ತೆ ಮುಂದಕ್ಕೆ ಹೋದ ಸಚಿವ ಸಂಪುಟ ವಿಸ್ತರಣೆ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿದೆ. ಮತ್ತೊಮ್ಮೆ ಸಮಯ ಕೊಡುವುದಾಗಿ ಹೇಳಿದ್ದಾರೆ. ಶೀಘ್ರದಲ್ಲಿ ಸಮಯ ಕೊಡುವಂತೆ ಮನವಿ ಮಾಡಿದ್ದೇನೆ. ವಿಸ್ತರಣೆಯ ಸಾಧಕ ಬಾಧಕಗಳನ್ನು ತಿಳಿಸಿದ್ದೇನೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com