ಬಿಎಚ್​​ ನೋಂದಣಿಯಲ್ಲಿ ಖಾಸಗಿ ವಲಯದ ಸಿಬ್ಬಂದಿಗಳ ವಾಹನಗಳನ್ನೂ ನೋಂದಾಯಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಆಗಸ್ಟ್ 26 ರಂದು ಹೊರಡಿಸಲಾದ ಕೇಂದ್ರ ಮೋಟಾರು ವಾಹನಗಳ (20 ನೇ ತಿದ್ದುಪಡಿ) ನಿಯಮಗಳು 2021 ರ ಪ್ರಕಾರ ಖಾಸಗಿ ವಲಯದ ಉದ್ಯೋಗಿಗಳ ಹೊಸ ಸಾರಿಗೆಯೇತರ ವಾಹನಗಳನ್ನು ಭಾರತ್ (ಬಿಎಚ್) ಸರಣಿಯಲ್ಲಿ ನೋಂದಾಯಿಸುವಂತ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಗಸ್ಟ್ 26 ರಂದು ಹೊರಡಿಸಲಾದ ಕೇಂದ್ರ ಮೋಟಾರು ವಾಹನಗಳ (20 ನೇ ತಿದ್ದುಪಡಿ) ನಿಯಮಗಳು 2021 ರ ಪ್ರಕಾರ ಖಾಸಗಿ ವಲಯದ ಉದ್ಯೋಗಿಗಳ ಹೊಸ ಸಾರಿಗೆಯೇತರ ವಾಹನಗಳನ್ನು ಭಾರತ್ (ಬಿಎಚ್) ಸರಣಿಯಲ್ಲಿ ನೋಂದಾಯಿಸುವಂತ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಟಿ ಶಾಲಿನಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಸಿಎಂ ಪೂಣಚ್ಚ ಈ ಆದೇಶ ನೀಡಿದ್ದಾರೆ.

ಡಿಸೆಂಬರ್ 20, 2021 ರಂದು ಸಾರಿಗೆ ಇಲಾಖೆಯ ಸುತ್ತೋಲೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ವಾಹನಗಳನ್ನು ಬಿಎಚ್ ಸರಣಿಯಲ್ಲಿ ನೋಂದಣಿ ನಿರಾಕರಿಸಿದ ಹಿನ್ನೆಲೆಯಲ್ಲಿ ಶಾಲಿನಿಯವರು ನ್ಯಾಯಾಲಯದ ಮೊರೆ ಹೋಗಿದ್ದರು.

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಹನಗಳನ್ನು ಒಯ್ಯಬೇಕಾದ ಸಂದರ್ಭ ಬಂದಾಗ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಭಾರತ್ ಸರಣಿ ಅಥವಾ ಬಿಎಚ್​ ಸರಣಿಯ ನೋಂದಣಿ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿತ್ತು.

2021ರ ಆಗಸ್ಟ್​ನಲ್ಲಿ ಬಿಎಚ್​ ಸರಣಿಯ ನೋಂದಣಿಗೆ ನಿಯಮ ರೂಪಿಸಲಾಗಿದ್ದು, ಸೆಪ್ಟೆಂಬರ್​ನಿಂದ ಬಿಎಚ್​ ನಂಬರ್ ಪ್ಲೇಟ್ ನೀಡಲು ಆರಂಭಿಸಿತ್ತು. ಈವರೆಗೆ ಹೊಸದಾಗಿ ಖರೀದಿಸಲ್ಪಡುವ ವಾಹನಗಳಿಗಷ್ಟೇ ಬಿಎಚ್​ ನೋಂದಣಿ ಮಾಡಲಾಗುತ್ತಿತ್ತು. ಹೊಸ ನಿಯಮದಡಿ ನೋಂದಣಿಯಾಗುವ ವಾಹನಗಳನ್ನು ಬೇರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮರು ನೋಂದಣಿ ಮಾಡಬೇಕಾದ ಸಂದರ್ಭ ಬಂದರೆ ಉಚಿತವಾಗಿ ಮಾಡಬಹುದು ಎಂದು ಸರ್ಕಾರ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com