ವಿಧಾನಸಭೆ ಅಧಿವೇಶನ ಬಹಿಷ್ಕರಿಸಿದ ಈಶ್ವರಪ್ಪ: ಮಾಧ್ಯಮದವರ ಪ್ರಶ್ನೆಗೆ ಕೆಂಡಾಮಂಡಲಗೊಂಡ ಸಿಎಂ ಬೊಮ್ಮಾಯಿ

ಮಾಜಿ ಸಚಿವ ಈಶ್ವರಪ್ಪ ರಿಂದ ಸದನ ಬಹಿಷ್ಕಾರ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಂಡಾಮಂಡಲಗೊಂಡರು.
ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ
ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ
Updated on

ಬೆಳಗಾವಿ: ಮಾಜಿ ಸಚಿವ ಈಶ್ವರಪ್ಪ ರಿಂದ ಸದನ ಬಹಿಷ್ಕಾರ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಂಡಾಮಂಡಲಗೊಂಡರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮಾಧ್ಯಮದವರ ಮೇಲೆ ಸಿಡಿಮಿಡಿಗೊಂಡರು. ನೀವು ಅದನ್ನೆಲ್ಲ ಸೃಷ್ಟಿ ಮಾಡಿಕೊಂಡು ಹೇಳಬೇಡಿ. ನಾನು ಈಶ್ವರಪ್ಪ ಜೊತೆ ಮಾತಾಡುತ್ತೇನೆಂದು ಹೇಳಿದರು.

ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ, "ಪಂಚಮಸಾಲಿ ಮೀಸಲಾತಿ ನೀಡುವ ಬಗ್ಗೆ ಗಡುವು ನಾನೇನು ಕೊಟ್ಟಿಲ್ಲ. ಹಿಂದುಳಿದ ಆಯೋಗದ ಅಧ್ಯಕ್ಷರಿಗೆ ವರದಿ ಕೊಡಲು ಹೇಳಿದ್ದೇನೆ. ಅಧಿವೇಶನ ಆರಂಭವಾಗುವ ಮುನ್ನ ವರದಿ ಕೊಡಲು ಹೇಳಿದ್ದೆ. ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದರ ವರದಿ ಇನ್ನೂ ಬಂದಿಲ್ಲ. ಅತಿ ಶ್ರೀಘ್ರದಲ್ಲಿ ಅವರು ವರದಿ ಕೊಡುವ ವಿಶ್ವಾಸವಿದೆ. ಆನಂತರ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com