ಕೋವಿಡ್ ವಿಷಯದಲ್ಲಿ ಭಾರತವನ್ನು ಚೀನಾಕ್ಕೆ ಹೋಲಿಕೆ ಮಾಡುವುದು ಬೇಡ, ಆತಂಕಪಡುವುದು ಬೇಡ, 12 ಮಂದಿಯಲ್ಲಿ ಪಾಸಿಟಿವ್: ಡಾ ಕೆ ಸುಧಾಕರ್

ಓಮಿಕ್ರಾನ್ ವೈರಸ್ ಬಂದು ಒಂದು ವರ್ಷದ ಮೇಲಾಗಿದೆ, ಕೋವಿಡ್ ಬಂದಾಗ ಏನು ಮಾಡಬೇಕು, ಹೇಗಿರಬೇಕು ಎಂಬ ಅನುಭವ ನಮಗಾಗಿದೆ. ಹೀಗಾಗಿ ಪಾಸಿಟಿವ್ ಬಂದ ಕೂಡಲೇ ಜನರು ಆತಂಕಕ್ಕೊಳಗಾಗಬೇಕಾದ ಅವಶ್ಯಕತೆಯಿಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದರು.
ಡಾ ಕೆ ಸುಧಾಕರ್
ಡಾ ಕೆ ಸುಧಾಕರ್

ಬೆಳಗಾವಿ: ಓಮಿಕ್ರಾನ್ ವೈರಸ್ ಬಂದು ಒಂದು ವರ್ಷದ ಮೇಲಾಗಿದೆ, ಕೋವಿಡ್ ಬಂದಾಗ ಏನು ಮಾಡಬೇಕು, ಹೇಗಿರಬೇಕು ಎಂಬ ಅನುಭವ ನಮಗಾಗಿದೆ. ಹೀಗಾಗಿ ಪಾಸಿಟಿವ್ ಬಂದ ಕೂಡಲೇ ಜನರು ಆತಂಕಕ್ಕೊಳಗಾಗಬೇಕಾದ ಅವಶ್ಯಕತೆಯಿಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದರು.

ಬೆಳಗಾವಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ಬರುತ್ತಿರುವ ಕೋವಿಡ್ ಉಪತಳಿ ಬಿಎಫ್.7 ಕೂಡ ಓಮಿಕ್ರಾನ್ ನದ್ದು, ಹಾಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ, ಚೀನಾಕ್ಕೆ ಹೋಲಿಕೆ ಮಾಡುವುದು ಕೂಡ ಬೇಡ, ಚೀನಾದಲ್ಲಿ ಪರಿಸ್ಥಿತಿ ಬೇರೆ ಇದೆ. ಅವರು ಶೂನ್ಯಕೇಸು ನೀತಿ ಎಂಬುದನ್ನು ಮಾಡಿಕೊಂಡಿದ್ದರು. ಒಂದು ಕೇಸು ಕೂಡ ಪಾಸಿಟಿವ್ ಇರಬಾರದು ಎಂದು ಮಾಡಿಕೊಂಡು ಜನರಿಗೆ ಸ್ವಾಭಾವಿಕವಾಗಿ ವೈರಸ್ ನ್ನು ಎದುರಿಸುವ ಶಕ್ತಿಯನ್ನು ನೀಡುವ ಪರಿಸ್ಥಿತಿಯನ್ನು ಅವರು ತಂದುಕೊಳ್ಳಲೇ ಇಲ್ಲ ಎಂದರು.

ಚೀನಾದಲ್ಲಿ ನಮ್ಮ ದೇಶದಲ್ಲಿ ವ್ಯಾಕ್ಸಿನೇಷನ್ ಎರಡು ಡೋಸ್ ಕೂಡ ಆಗಿದೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ. ಮೂರನೆಯದ್ದು ನಮ್ಮ ವ್ಯಾಕ್ಸಿನೇಷನ್ ಪರಿಣಾಮ ಒಳ್ಳೆಯ ರೀತಿಯಲ್ಲಿದೆ. ಹೀಗಾಗಿ ಶೇಕಡಾ 90ಕ್ಕಿಂತ ಹೆಚ್ಚು ಮಂದಿಗೆ ಕೊರೋನಾ ಬಂದು ಹೋಗಿದೆ. ಎರಡು ಪಟ್ಟು ಹೆಚ್ಚು ನಾವು ಸುರಕ್ಷಿತವಾಗಿದ್ದೇವೆ. ನಾವು ಆತಂಕಗೊಳ್ಳುವ ಅಗತ್ಯವಿಲ್ಲ, ಬೂಸ್ಟರ್ ಡೋಸ್ ತೆಗೆದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಮಾಡೋಣ ಎಂದರು.

ಸಾಮಾನ್ಯ ಶೀತ, ಜ್ವರ ಬಂದರೂ ಒಂದೆರಡು ದಿನ ಬಂದು ಹೋಗುತ್ತದೆ ಎಂದು ತಜ್ಞರ ಅಭಿಪ್ರಾಯವಿದೆ. ಹಾಗೆಂದು ಮೈಮರೆಯುವುದು ಬೇಡ, ಮುನ್ನೆಚ್ಚರಿಕೆ ತೆಗೆದುಕೊಳ್ಳೋಣ, ಏರ್ ಕಂಡೀಷನ್ ಒಳಗೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವುದು ಒಳ್ಳೆಯದು ಎಂದರು.

12 ಮಂದಿಯಲ್ಲಿ ಪಾಸಿಟಿವ್: ಮೊನ್ನೆ ಡಿಸೆಂಬರ್ 24 ರವರೆಗೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 2,867 ಪ್ರಯಾಣಿಕರಿಗೆ ಕೋವಿಡ್ -19 ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ 12 ಜನರಲ್ಲಿ ಪಾಸಿಟಿವ್ ಕಂಡುಬಂತು. ಎಲ್ಲಾ 12 ಸಕಾರಾತ್ಮಕ ಪ್ರಕರಣಗಳ ಮಾದರಿಗಳನ್ನು ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಾ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com