ಸರ್ಕಾರಿ ಶಾಲಾ ಶಿಕ್ಷಕರ ಅಕ್ರಮ ನೇಮಕಾತಿ ರದ್ದುಗೊಳಿಸಿ: ಶಿಕ್ಷಣ ಇಲಾಖೆ

ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಎಲ್ಲಾ ಅಕ್ರಮ ನೇಮಕಾತಿಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್ ವಿಶಾಲ್
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್ ವಿಶಾಲ್

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಎಲ್ಲಾ ಅಕ್ರಮ ನೇಮಕಾತಿಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್ ವಿಶಾಲ್ ಅವರು ಮಾತನಾಡಿ, ಇತರೆ ಸರ್ಕಾರಿ ಶಾಲೆಗಳಲ್ಲಿ ಹುದ್ದೆಗಳ ಅಲಂಕರಿಸಲು ಶಿಕ್ಷಕರು ತಮ್ಮ ಗೊತ್ತುಪಡಿಸಿದ ಹುದ್ದೆಗಳನ್ನು ತ್ಯಜಿಸಿದ ಹಲವಾರು ನಿದರ್ಶನಗಳಿವೆ. ಉದಾಹರಣೆಗೆ ಶಿಕ್ಷಕರಿಗೆ ಬೆಂಗಳೂರಿನಲ್ಲಿ ಹುದ್ದೆಯನ್ನು ನಿಯೋಜಿಸಿದ್ದರೆ, ಅವರು ಇಲ್ಲಿಯೇ ನಿಯೋಜಿತರಾಗಬೇಕಾಗುತ್ತದೆ. ಇಲ್ಲಿ ಅಲ್ಲದೆ, ಬೇರೆ ಸ್ಥಳಗಳಲ್ಲಿ ಕೆಲಸ ಮಾಡುವುದು ಕಾನೂನುಬಾಹಿರವಾಗಿರುತ್ತದೆ. ಶಿಕ್ಷಕರ ಹುದ್ದೆಯನ್ನು ಬೇರೆ ಬ್ಲಾಕ್‌ಗೆ ಬದಲಾಯಿಸುವ ಅಧಿಕಾರ ಸರ್ಕಾರಕ್ಕೆ ಮಾತ್ರ ಇದೆ. ಆದರೆ, ಈ ವರ್ಷವೊಂದರಲ್ಲೇ ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರು ನಿಯೋಜಿತ ಹುದ್ದೆಗಳಿಗಿಂತ ಭಿನ್ನವಾದ ಹುದ್ದೆಗಳನ್ನು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಈ ಸಂಬಂಧ 30 ಪ್ರಕರಣಗಳು ನನ್ನ ಗಮನಕ್ಕೆ ಬಂದಿದ್ದು, ಹೀಗಾಗಿಯೇ ಸುತ್ತೋಲೆ ಹೊರಡಿಸಲಾಗಿದೆ. “ಶಿಕ್ಷಕರ ನಿಯೋಜನೆಗೆ ನಿರ್ದಿಷ್ಟ ವಿನಾಯಿತಿಗಳಿವೆ. ಒಂದು ಶಾಲೆಯಲ್ಲಿ ಶಿಕ್ಷಕರಿಲ್ಲದಿದ್ದರೆ, ಆ ಬ್ಲಾಕ್‌ನೊಳಗಿನ ಶಿಕ್ಷಕರನ್ನು ಆ ಶಾಲೆಯಲ್ಲಿ ಕಲಿಸಲು ಸಂಬಂಧಿಸಿದ ಅಧಿಕಾರಿಗಳು ನಿಯೋಜಿಸಬಹುದು. ಅದೇ ರೀತಿ, ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಲ್ಲದಿದ್ದರೆ, ಆ ಶಾಲೆಗೆ ನಿಯೋಜಿಸಲಾದ ಶಿಕ್ಷಕರನ್ನು ಆ ಬ್ಲಾಕ್‌ನಲ್ಲಿರುವ ಮತ್ತೊಂದು ಶಾಲೆಗೆ ನಿಯೋಜಿಸಬಹುದು ಎಂದು ತಿಳಿಸಿದರು.

ಬ್ಲಾಕ್ ಶಿಕ್ಷಣಾಧಿಕಾರಿಗಳು (ಬಿಇಒಗಳು) ಅಥವಾ ಸಾರ್ವಜನಿಕ ಶಿಕ್ಷಣದ ಉಪನಿರ್ದೇಶಕರು (ಡಿಡಿಪಿಐಗಳು) ಇತರ ಬ್ಲಾಕ್‌ಗಳಲ್ಲಿ ಶಿಕ್ಷಕರ ನಿಯೋಜನೆಗಳನ್ನು ಅನುಮೋದಿಸಿದ ಪ್ರಕರಣಗಳು ಕಂಡು ಬಂದಿದೆ. ಆದರೆ, ಬಿಇಒ ಮತ್ತು ಡಿಡಿಪಿಐಗಳಿಗೆ ಆ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲದಿರುವುದರಿಂದ ಇದು ಕಾನೂನು ಬಾಹಿರವಾಗಿದೆ. ಶಿಕ್ಷಕರ ಹುದ್ದೆಯನ್ನು ಬೇರೆ ಬ್ಲಾಕ್‌ಗೆ ಬದಲಾಯಿಸುವ ಅಧಿಕಾರ ಸರ್ಕಾರಕ್ಕೆ ಮಾತ್ರ ಇದೆ ಎಂದು ಮಾಹಿತಿ ನೀಡಿದರು.

ಸುತ್ತೋಲೆಯಂತೆ ಎಲ್ಲ ಅಕ್ರಮ ನೇಮಕಾತಿಗಳನ್ನು ತಕ್ಷಣವೇ ರದ್ದುಪಡಿಸಿ, ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಇಲಾಖೆ ಆದೇಶಿಸಿದೆ.

ನೇಮಕಾತಿ ರದ್ದುಪಡಿಸಲು ತಿಂಗಳಾಂತ್ಯದವರೆಗೆ ಕಾಲಾವಕಾಶ ನೀಡಲಾಗಿದ್ದು, ಗಡುವಿನೊಳಗೆ ಕ್ರಮ ಕೈಗೊಳ್ಳದೇ ಹೋದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com