ಯೂರೋಪ್ ಪ್ರವಾಸದ ನಂತರ ತರಬೇತಿ ಕಾಲೇಜು ಸ್ಥಾಪನೆಗೆ ಶೆಫರ್ಡ್ಸ್ ಇಂಡಿಯಾ ಬೇಡಿಕೆ!

ಯುರೋಪ್ ಪ್ರವಾಸಕ್ಕೆ ತೆರಳಿದ್ದ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸದಸ್ಯರು ಕುರುಬ ಸಮುದಾಯವನ್ನು ಅಭಿವೃದ್ಧಿಪಡಿಸಲು ಮೂರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಯುರೋಪ್ ಪ್ರವಾಸಕ್ಕೆ ತೆರಳಿದ್ದ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸದಸ್ಯರು ಕುರುಬ ಸಮುದಾಯವನ್ನು ಅಭಿವೃದ್ಧಿ ಪಡಿಸಲು ಮೂರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.

ಅಸ್ತಿತ್ವದಲ್ಲಿರುವ ಪ್ರಾಧಿಕಾರಗಳು, ವಿಶ್ವವಿದ್ಯಾಲಯಗಳು, ನಿಗಮಗಳು ಮತ್ತು ಮಂಡಳಿಗಳ ಸಹಯೋಗದೊಂದಿಗೆ ಸ್ವಿಸ್ ಮಾದರಿಯಲ್ಲಿ ತರಬೇತಿ ಕಾಲೇಜು ಪ್ರಾರಂಭಿಸುವುದು, ಕುರುಬರಿಗೆ ಅಗತ್ಯವಿರುವ ಭೂಮಿಯನ್ನು ಕಾಯ್ದಿರಿಸುವುದು ಮತ್ತು ಕುರುಬರನ್ನು ಅಧ್ಯಯನ ಮಾಡಲು ಸಮಿತಿಯನ್ನು ರಚಿಸುವಂತೆ ಬೇಡಿಕೆ ಇಟ್ಟಿದ್ದಾರೆ.

ಶೆಫರ್ಡ್ಸ್ ಇಂಡಿಯಾದ 48 ಸದಸ್ಯರು ರೋಮ್‌ನಲ್ಲಿರುವ ಪ್ರಗತಿಪರ ಕುರಿಗಾರರಾದ ಶ್ರೀ ಪ್ಯಾಬ್ರಿಜಿಯೊ ಅವರ ಫಾರ್ಮ್‌ಗೆ ಭೇಟಿ ನೀಡಿದರು ಮತ್ತು ಕುರಿ ಸಾಕಣೆಯಲ್ಲಿನ ಪ್ರಗತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಪ್ರವಾಸದ ವೇಳೆ ಇಟಲಿ, ಜರ್ಮನಿ ಮತ್ತು ಆಸ್ಟ್ರಿಯಾಕ್ಕೆ ಭೇಟಿ ನೀಡಿದ್ದರು. ನಾವು ಆಲ್ಪ್ಸ್ ಮತ್ತು ಬ್ಲಾಕ್ ಫಾರೆಸ್ಟ್ ಪ್ರದೇಶಗಳಲ್ಲಿನ ಹಳ್ಳಿಗಳಲ್ಲಿ ಹುಲ್ಲುಗಾವಲು ಮತ್ತು ತೋಟಗಳನ್ನು ವೀಕ್ಷಿಸಿದ್ದೇವೆ. ಹಾಗೂ ಕುರುಬರು ಮತ್ತು ಕುರಿಗಳ ಬಗ್ಗೆ ತಿಳಿದುಕೊಂಡಿದ್ದೇವೆ ಎಂದು ಸದಸ್ಯರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com