ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಪೂರ್ಣಗೊಳ್ಳದ ಖರೀದಿ ಪ್ರಕ್ರಿಯೆ: ಮಾಜಿ ಸಿಎಂ ನಿಜಲಿಂಗಪ್ಪ ಮ್ಯೂಸಿಯಂ ಮತ್ತಷ್ಟು ವಿಳಂಬ!
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ನಿಜಲಿಂಗಪ್ಪ ಅವರ ಚಿತ್ರದುರ್ಗದಲ್ಲಿರುವ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಯೋಜನೆಯು ಸರಿಯಾದ ಸಿದ್ಥತೆಯಿಲ್ಲದೆ ನನೆಗುದಿಗೆ ಬಿದ್ದಿದೆ.
Published: 02nd July 2022 12:32 PM | Last Updated: 02nd July 2022 12:32 PM | A+A A-

ಎಸ್. ನಿಜಲಿಂಗಪ್ಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ನಿಜಲಿಂಗಪ್ಪ ಅವರ ಚಿತ್ರದುರ್ಗದಲ್ಲಿರುವ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಯೋಜನೆಯು ಸರಿಯಾದ ಸಿದ್ಥತೆಯಿಲ್ಲದೆ ನನೆಗುದಿಗೆ ಬಿದ್ದಿದೆ.
ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಬೇಕು ಎಂದು ನಿಜಲಿಂಗಪ್ಪ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಒತ್ತಾಯಿಸುತ್ತಿದ್ದರೂ, ಇದು ಪಿತ್ರಾರ್ಜಿತ ಆಸ್ತಿಯಾಗಿದ್ದು ಮ್ಯೂಸಿಯಂ ಆಗಿ ಬದಲಿಸಲು ಮನೆಯವರು ಒಪ್ಪಿರಲಿಲ್ಲ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವೊಲಿಸಿದ ನಂತರ ಕುಟುಂಬವು ಅಂತಿಮವಾಗಿ ಒಪ್ಪಿಗೆ ನೀಡಿದೆ. ಆದರೆ ಕುಟುಂಬವು ಮನೆಯನ್ನು ಸರ್ಕಾರಕ್ಕೆ ಮಾತ್ರ ಮಾರಾಟ ಮಾಡಲು ಬಯಸಿದ್ದು, ಜಿಲ್ಲಾಡಳಿತ ಖರೀದಿಯನ್ನು ಅಂತಿಮಗೊಳಿಸಲು ಯೋಜಿಸಿದೆ. ಕರ್ನಾಟಕದ ಬಹು ಮೆಚ್ಚಿನ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ನಿಜಲಿಂಗಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಾರಂಭವಾಗಿ, ಎಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಇಂದಿನ ರಾಜಕಾರಣಿಗಳು ನೂರಾರು ಕೋಟಿಗಳ ಸಂಪತ್ತನ್ನು ಸಂಗ್ರಹಿಸುತ್ತಿದ್ದರೆ, ನಿಜಲಿಂಗಪ್ಪ ಅವರು ತಮ್ಮ ಕುಟುಂಬ ಸದಸ್ಯರಿಗಾಗಿ ಚಿತ್ರದುರ್ಗದ ಮನೆಯನ್ನು ಮಾತ್ರ ಬಿಟ್ಟು ಹೋಗಿದ್ದಾರೆ. ವಿಲ್ ಪ್ರಕಾರ ಈ ಮನೆ ಅಮೆರಿಕದಲ್ಲಿ ನೆಲೆಸಿರುವ ನಿಜಲಿಂಗಪ್ಪ ಅವರ ಮೊಮ್ಮಗ ಎಸ್ ವಿನಯ್ ಅವರಿಗೆ ಸೇರಿದ್ದಾಗಿದೆ. ಜೂನ್ನಲ್ಲಿ ಮೂರು ವಾರಗಳ ರಜೆಯ ಮೇಲೆ ಭಾರತಕ್ಕೆ ಆಗಮಿಸಿದ್ದ ಅವರು ಜೂನ್ 30 ರಂದು ಹಿಂದಿರುಗುವ ಮೊದಲು ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದರು.
ಆದರೆ ಈ ವಿಚಾರದಲ್ಲಿ ಅಧಿಕಾರಿಗಳು ನಿದ್ದೆ ಹೋಗಿದ್ದು ಆಶ್ಚರ್ಯ ತರಲಿಲ್ಲ. ಜೂನ್ 29 ರಂದು, ವಿನಯ್ ಮತ್ತು ಅವರ ತಂದೆ, ವಿಕಾಸಸೌಧದ ಮುಖ್ಯ ವಾಸ್ತುಶಿಲ್ಪಿಯಾಗಿರುವ ನಿಜಲಿಂಗಪ್ಪ ಅವರ ಮಗ ಕಿರಣ್ ಶಂಕರ್ ಆಗಮಿಸಿದರು. ಮಾರಾಟವನ್ನು ಕಾರ್ಯಗತಗೊಳಿಸಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದರು. ಆದರೆ ಕೆಲವು ಕಾನೂನು ವಿಧಿವಿಧಾನಗಳು ನಡೆದಿಲ್ಲ ಎಂದು ಸಬ್ ರಿಜಿಸ್ಟ್ರಾರ್ ಸಮರ್ಥಿಸಿಕೊಂಡರು. ಆದರೆ ಅಂತಿಮವಾಗಿ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ.
ವಿನಯ್ ಈಗ ಅಮೇರಿಕಾಕ್ಕೆ ಮರಳಿದ್ದು, ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ವಿನಯ್ ಮುಂದಿನ ದಿನ ಭಾರತಕ್ಕೆ ಬಂದಾಗ ಮುಂದಿನ ದಿನಾಂಕಕ್ಕಾಗಿ ಕಾಯಬೇಕಾಗಿದೆ ಎಂದು ಎಂಎಲ್ಸಿ ಮೋಹನ್ ಕೊಂಡಜ್ಜಿ ಹೇಳಿದ್ದಾರೆ. ಆದರೆ ಜಿಲ್ಲಾಡಳಿತ ಈಗ ಎಚ್ಚೆತ್ತುಕೊಳ್ಳಲು ಮುಂದಾಗಿದೆ.