ಚಾಮರಾಜನಗರ: ಇಬ್ಬರ ಮೇಲೆ ಹುಲಿ ದಾಳಿ; ಗ್ರಾಮಸ್ಥರಲ್ಲಿ ಆತಂಕ 

ಇಬ್ಬರು ವ್ಯಕ್ತಿಗಳ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ಚಾಮರಾಜನಗರದ ಬಂಡಿಪುರ ಹುಲಿ ಮೀಸಲು (ಬಿಟಿಆರ್) ವ್ಯಾಪ್ತಿಗೆ ಬರುವ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ನಡೆದಿದೆ. 
ಬಾಳೆ ಬೆಳೆ ಬೆಳೆದಿದ್ದ ಪ್ರದೇಶದಲ್ಲಿರುವ ಹುಲಿ
ಬಾಳೆ ಬೆಳೆ ಬೆಳೆದಿದ್ದ ಪ್ರದೇಶದಲ್ಲಿರುವ ಹುಲಿ

ಮೈಸೂರು: ಇಬ್ಬರು ವ್ಯಕ್ತಿಗಳ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ಚಾಮರಾಜನಗರದ ಬಂಡಿಪುರ ಹುಲಿ ಮೀಸಲು (ಬಿಟಿಆರ್) ವ್ಯಾಪ್ತಿಗೆ ಬರುವ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ನಡೆದಿದೆ. 

ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಇಬ್ಬರ ಮೇಲೆ ಹುಲಿ ದಾಳಿ ನಡೆದಿದ್ದು ಸಂತ್ರಸ್ತರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಸಿದ್ದಪ್ಪ ಎಂಬುವವರ ಜಮೀನಿನಲ್ಲಿ ಹಸುವೊಂದನ್ನು ಹುಲಿ ಕೊಂದಿತ್ತು. ಈ ಬಳಿಕ ಗ್ರಾಮಸ್ಥರ ಮೇಲೆ ದಾಳಿ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಹಸುವನ್ನು ಕೊಂದ ಸ್ಥಳಕ್ಕೆ ಆಗಮಿಸಿ ಹುಲಿ ಹಿಡಿಯಲು ಯತ್ನಿಸಿದ್ದರು. ಗಾಬರಿಗೊಂಡ ಹುಲಿ ತಪ್ಪಿಸಿಕೊಳ್ಳುವ ಭರದಲ್ಲಿ ಗವಿಯಪ್ಪ (60) ಎಂಬುವವರ ಮೇಲೆ ದಾಳಿ ನಡೆಸಿ ಕಣ್ಣಿಗೆ ಗಾಯ ಮಾಡಿದೆ. 

ಗ್ರಾಮಸ್ಥರು ಆತನನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಜೀಪ್ ನಲ್ಲಿ ಕರೆದೊಯ್ಯಲಾಯಿತು.  ಹುಲಿ ಬಾಳೆ ಬೆಳೆ ಬೆಳೆದಿದ್ದ ಪ್ರದೇಶದಲ್ಲಿ ಅವಿತುಕೊಂಡಿತ್ತು. ಅರಣ್ಯಾಧಿಕಾರಿಗಳ ಎಚ್ಚರಿಕೆಯ ಹೊರತಾಗಿಯೂ ಗ್ರಾಮಸ್ಥರು ಹುಲಿಯ ಹತ್ತಿರ ಹೋಗಿ ಅದನ್ನು ಕಾಡಿಗೆ ಓಡಿಸಲು ಯತ್ನಿಸಿದ್ದಾರೆ. 

ಹುಲಿ ಚಲನವಲನದ ಮೇಲೆ ನಿಗಾ ವಹಿಸಿರುವ ಅಧಿಕಾರಿಗಳು 

ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡು ಕಾಡಿಗೆ ಓಡಿಸಲು ಯತ್ನಿದ್ದರಿಂದ ಹುಲಿ ಕೆರಳಿದ ಪರಿಣಾಮ ರಾಜಶೇಖರ್ (35) ಎಂಬಾತನ ಕಾಲಿಗೆ ಗಾಯಗಳಾಗಿವೆ. ಆತನಿಗೆ ಮೊದಲು ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಬಂಡಿಪುರ ಹುಲಿ ಮೀಸಲು ನಿರ್ದೇಶಕ ಪಿ ರಮೇಶ್ ಕುಮಾರ್ ಇಬ್ಬರೂ ಗ್ರಾಮಸ್ಥರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಂಡಿಪುರದ    ಪಶು ವೈದ್ಯರು ಸಕಲೇಶಪುರದಲ್ಲಿ ಆನೆ ಸೆರೆ ಕಾರ್ಯಾಚರಣೆಯಲ್ಲಿದ್ದಾರೆ, ತಕ್ಷಣವೇ ಅವರನ್ನು ಬಂಡೀಪುರಕ್ಕೆ ಕರೆಸಲಾಗುತ್ತದೆ. ಅರಣ್ಯಾಧಿಕಾರಿಗಳ ತಂಡ ಗ್ರಾಮದಲ್ಲಿದ್ದು, ಹುಲಿಯ ಚಲನವಲನಗಳನ್ನು ಗಮನಿಸುತ್ತಿದೆ. ಹುಲಿ ಕಾಡಿಗೆ ಮರಳುತ್ತದೋ ಇಲ್ಲವೋ ನೋಡುತ್ತೇವೆ. ಒಂದು ವೇಳೆ ವಾಪಸ್ಸಾಗಲಿಲ್ಲ ಎಂದಾದರೆ ಅದನ್ನು ಹಿಡಿಯುತ್ತೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com