ಆಗುಂಬೆ ಘಾಟಿಯ 4 ಮತ್ತು 10ನೇ ತಿರುವಿನಲ್ಲಿ ಭೂ ಕುಸಿತ, ಸಂಚಾರ ವ್ಯತ್ಯಯ

ಭಾರಿ ಮಳೆ ಹಿನ್ನಲೆಯಲ್ಲಿ ಕರ್ನಾಟಕದ ಖ್ಯಾತ ಪ್ರವಾಸಿ ತಾಣ ಆಗುಂಬೆ ಘಾಟ್ ನಲ್ಲಿ ಎರಡು ಸ್ಥಳಗಳಲ್ಲಿ ಭೂ ಕುಸಿತ ಸಂಭಸಿದ್ದುಸ ವಾಹನ ಸಂಚಾರಕ್ಕೆ ತೀವ್ರ ವ್ಯತ್ಯಯವಾಗಿದೆ.
ಆಗುಂಬೆಯಲ್ಲಿ ಭೂ ಕುಸಿತ
ಆಗುಂಬೆಯಲ್ಲಿ ಭೂ ಕುಸಿತ

ಉಡುಪಿ: ಭಾರಿ ಮಳೆ ಹಿನ್ನಲೆಯಲ್ಲಿ ಕರ್ನಾಟಕದ ಖ್ಯಾತ ಪ್ರವಾಸಿ ತಾಣ ಆಗುಂಬೆ ಘಾಟ್ ನಲ್ಲಿ ಎರಡು ಸ್ಥಳಗಳಲ್ಲಿ ಭೂ ಕುಸಿತ ಸಂಭಸಿದ್ದುಸ ವಾಹನ ಸಂಚಾರಕ್ಕೆ ತೀವ್ರ ವ್ಯತ್ಯಯವಾಗಿದೆ.

ಭಾರೀ ಮಳೆಯಿಂದಾಗಿ ಆಗುಂಬೆ ಘಾಟ್‌ನ ಎರಡು ಕಡೆ ಭಾನುವಾರ ಭೂಕುಸಿತ ಸಂಭವಿಸಿದ್ದು, ಭೂಕುಸಿತದಿಂದಾಗಿ NH 169A ನಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಹೆದ್ದಾರಿಯು ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ನಡುವಿನ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಇದೇ ರಸ್ತೆಯಲ್ಲಿ ಗುಡ್ಡ ಕುಸಿದಿರುವುದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಘಾಟ್ ವಿಭಾಗದ 4 ಮತ್ತು 10 ನೇ ತಿರುವಿನಲ್ಲಿ ಭಾನುವಾರ ಬೆಳಿಗ್ಗೆ ಭೂಕುಸಿತ ಸಂಭವಿಸಿದ್ದು, ರಸ್ತೆಯ ಮೇಲೆ ಮರಗಳು, ಕಲ್ಲುಗಳು ಮತ್ತು ಮಣ್ಣು ಬಿದ್ದಿದೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸುಮಾರು ಮೂರ್ನಾಲ್ಕು ಗಂಟೆಗಳ ನಂತರ ರಸ್ತೆಯನ್ನು ತೆರವುಗೊಳಿಸಬಹುದು ಎಂದು ಮೂಲಗಳು ತಿಳಿಸಿವೆ.

ಭೂಕುಸಿತದಿಂದ ಉಡುಪಿಯಿಂದ ಶಿವಮೊಗ್ಗಕ್ಕೆ ಹೋಗುವ ವಾಹನಗಳು ಉಡುಪಿ, ಸಿದ್ದಾಪುರ, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಶಿವಮೊಗ್ಗ ರಸ್ತೆಯಲ್ಲಿ ಸಂಚರಿಸುತ್ತಿವೆ. ಉಡುಪಿಯಿಂದ ಶೃಂಗೇರಿಗೆ ಹೋಗುವ ಬಸ್‌ಗಳು ಕಾರ್ಕಳದ ಮೂಲಕ ಎಸ್‌ಕೆ ಬಾರ್ಡರ್ ರಸ್ತೆಯನ್ನು ಬಳಸುತ್ತಿವೆ. ಕಡಿಮೆ ಪ್ರಯಾಣಿಕರ ಸಂಖ್ಯೆಯಿಂದಾಗಿ ಟ್ರಿಪ್‌ಗಳನ್ನು ಕಡಿಮೆ ಮಾಡಲಾಗಿದೆ ಮತ್ತು ಶೃಂಗೇರಿ ಮತ್ತು ಬೀರೂರಿಗೆ ಕೇವಲ ಎರಡು ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com