ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ. ತಾಲೂಕಿನ ಸಂಪಾಜೆ ಮತ್ತು ಸಮೀಪದ ಅರಂತೋಡು, ತೊಡಿಕಾನ, ಚೆಂಬು ಮತ್ತು ಕಲ್ಲಪಲ್ಲಿ ನಿವಾಸಿಗಳು ಬೆಳಗ್ಗೆ 6.23ಕ್ಕೆ ಕಂಪಿಸಿದ ಅನುಭವವಾಗಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಪಂಜಿಕಲ್ಲುವಿನಲ್ಲಿ ಗುಡ್ಡ ಕುಸಿದು ಕಾರಿಗೆ ಹಾನಿಯಾಗಿರುವ ಚಿತ್ರ
ಪಂಜಿಕಲ್ಲುವಿನಲ್ಲಿ ಗುಡ್ಡ ಕುಸಿದು ಕಾರಿಗೆ ಹಾನಿಯಾಗಿರುವ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ. ತಾಲೂಕಿನ ಸಂಪಾಜೆ ಮತ್ತು ಸಮೀಪದ ಅರಂತೋಡು, ತೊಡಿಕಾನ, ಚೆಂಬು ಮತ್ತು ಕಲ್ಲಪಲ್ಲಿ ನಿವಾಸಿಗಳು ಬೆಳಗ್ಗೆ 6.23ಕ್ಕೆ ಕಂಪಿಸಿದ ಅನುಭವವಾಗಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಸಾಮಾಜಿಕ ಜಾಲತಾಣಗಳಲ್ಲೂ ಕಂಪನದ ಪೋಸ್ಟ್‌ಗಳು ಕಾಣಿಸಿಕೊಂಡಿವೆ. ಭಾರಿ ಶಬ್ಧದ ಜತೆಗೆ ಕೆಲಕಾಲ ಭೂಮಿ ಕಂಪಿಸಿತು ಎಂದು ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಂಪನಗಳು ಹೆಚ್ಚು ತೀವ್ರವಾಗಿವೆ ಎಂದು ಅವರು ಹೇಳಿದರು.

ಒಂದು ವಾರಕ್ಕೂ ಹೆಚ್ಚು ಸಮಯದ ನಂತರ ಈ ಪ್ರದೇಶದಲ್ಲಿ ಮತ್ತೆ ಭೂ ಕಂಪಸಿದ ಅನುಭವಾಗಿದೆ.  ಜೂನ್ 25 ರಿಂದ ಜುಲೈ 1 ರ ನಡುವೆ ಸುಳ್ಯ ಮತ್ತು ನೆರೆಯ ಕೊಡಗು ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಲಘು ಭೂಕಂಪಗಳು ಹಲವಾರು ಬಾರಿ ಸಂಭವಿಸಿವೆ. ಭಾನುವಾರದ ಕಂಪನದ ಕುರಿತು ಕರ್ನಾಟಕ ರಾಜ್ಯ ರಾಷ್ಟ್ರೀಯ ವಿಪತ್ತು ನಿಗಾ ಕೇಂದ್ರದ ವರದಿಯನ್ನು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com