ಧಾರವಾಡ: ವಿದ್ಯುತ್ ತಂತಿ ತುಂಡಾಗಿ ಮೈಮೇಲೆ ಬಿದ್ದು 12 ವರ್ಷದ ಬಾಲಕಿ ಸಾವು

ವಿದ್ಯುತ್ ತಂತಿ ಬಿದ್ದು 12 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಕಲಘಟಗಿ ತಾಲೂಕಿನ ಪರಸಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಧಾರವಾಡ: ವಿದ್ಯುತ್ ತಂತಿ ಬಿದ್ದು 12 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಕಲಘಟಗಿ ತಾಲೂಕಿನ ಪರಸಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಸಿಮ್ರಾನ್ ಬಾನು ಬಡಿಗೇರ್ ಮೃತ ದುರ್ದೈವಿ. ಮನೆ ಮುಂದೆ ಪಾತ್ರೆ ತೊಳೆಯುತ್ತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಆಕೆಯ ಮೇಲೆ ಬಿದ್ದಿದೆ. ಕೂಡಲೇ ಆಕೆ ಓಡಿ ಹೋಗಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಐದು ವರ್ಷಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ ಇಂತಹ ಘಟನೆಗಳಿಂದ ಹತ್ತು ಸಾವುಗಳು ವರದಿಯಾಗಿವೆ. ಜನರು ಜಾಗರೂಕರಾಗಿರಬೇಕು ಎಂದು ಕಲಘಟಕಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೂಗಾಡುತ್ತಿರುವ ಕೇಬಲ್ ಅಥವಾ ಅಪಾಯ ಕಂಡುಬಂದಲ್ಲಿ, ಜನರು ತಕ್ಷಣ ಪೊಲೀಸ್ ಅಥವಾ ಹೆಸ್ಕಾಂ ಸಿಬ್ಬಂದಿಗೆ ತಿಳಿಸಬೇಕು ಎಂದು ಹೇಳಿದ್ದಾರೆ. ಭಾರೀ ಮಳೆ ಹಾಗೂ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ವಾಲುತ್ತಿರುವುದು ಇಂತಹ ಅವಘಡಗಳಿಗೆ ಕಾರಣವಾಗಿದೆ ಎಂದು ಹೆಸ್ಕಾಂ ಅಭಿಯಂತರ ಬಿ.ಹೊನ್ನೂರಪ್ಪ ತಿಳಿಸಿದ್ದಾರೆ.

2019ರಲ್ಲಿ ತೂಗಾಡುತ್ತಿರುವ ವಿದ್ಯುತ್ ತಂತಿ ತಗುಲಿ ತಮ್ಮ ಹೊಲಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ತಾಲೂಕಿನ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಲಘಟಗಿ ನಿವಾಸಿಯೊಬ್ಬರು ಆರೋಪಿಸಿದ್ದಾರೆ. ಪ್ರತಿ ವರ್ಷವೂ ಇದೇ ಕಾರಣಕ್ಕೆ ತಾಲೂಕು ಇಂತಹ ಸಾವುಗಳಿಗೆ ಸಾಕ್ಷಿಯಾಗುತ್ತಿದೆ. ''ಸಂಬಂಧಿಸಿದ ಹೆಸ್ಕಾಂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸದಿರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ.

ಹೊಸ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸಿದ ನಂತರ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಬೇಕು' ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ವಿದ್ಯುತ್ ತಂತಿ ಮತ್ತು ಕಂಬಗಳ ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರು ಹೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಅವರು ಗಮನ ಹರಿಸುತ್ತಿಲ್ಲ, ಹೀಗಾಗಿ ಇಂತ ದುರ್ಘಟನೆಗಳು ಸಂಭವಿಸುತ್ತಿವೆ ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com