ಬೆಂಗಳೂರಿನಿಂದ ಜೋಗ್ ಫಾಲ್ಸ್ ಗೆ KSRTC ಟೂರ್ ಪ್ಯಾಕೇಜ್; ವಿವರ ಇಲ್ಲಿದೆ...

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇದೀಗ ಜೋಗ್ ಫಾಲ್ಸ್ ಗೂ ತನ್ನ ಪ್ಯಾಕೇಜ್ ಪ್ರವಾಸೋಧ್ಯಮವನ್ನು ಮುಂದುವರೆಸಿದೆ.
ಜೋಗ ಜಲಪಾತ
ಜೋಗ ಜಲಪಾತ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇದೀಗ ಜೋಗ್ ಫಾಲ್ಸ್ ಗೂ ತನ್ನ ಪ್ಯಾಕೇಜ್ ಪ್ರವಾಸೋಧ್ಯಮವನ್ನು ಮುಂದುವರೆಸಿದೆ.

ಹೌದು..  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಬೆಂಗಳೂರಿನಿಂದ ಶಿವಮೊಗ್ಗ ಮತ್ತು ಸಾಗರದ ಮೂಲಕ ಜೋಗ್ ಫಾಲ್ಸ್‌ಗೆ ವಾರಾಂತ್ಯದಲ್ಲಿ (ಶುಕ್ರವಾರ ಮತ್ತು ಶನಿವಾರ) ವಾರಾಂತ್ಯದಲ್ಲಿ (ಶುಕ್ರವಾರ ಮತ್ತು ಶನಿವಾರ) ನಾನ್ ಎಸಿ ಸ್ಲೀಪರ್ ಸೇವೆಯೊಂದಿಗೆ ಹೊಸ ಪ್ಯಾಕೇಜ್ ಟೂರ್ ಅನ್ನು ಪರಿಚಯಿಸಿದೆ. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದಿಂದ 'ಬೆಂಗಳೂರು-ಜೋಗ ಜಲಪಾತ' ಪ್ಯಾಕೇಜ್‌ ಟೂರ್‌ ಆರಂಭಿಸಿದೆ. ಬೆಂಗಳೂರಿನಿಂದ ರಾತ್ರಿ 10:30ಕ್ಕೆ ಹೊರಡುವ ಬಸ್‌, ಬೆಳಿಗ್ಗೆ 5:30ಕ್ಕೆ ಸಾಗರ ತಲುಪುತ್ತದೆ. ಸಾಗರದಿಂದ ರಾತ್ರಿ 10:00ಕ್ಕೆ ಹೊರಟು ಬೆಂಗಳೂರಿಗೆ ಬೆಳಿಗ್ಗೆ 5:00ಕ್ಕೆ ಸೇರುತ್ತದೆ. 

ಶುಕ್ರವಾರ ಹಾಗೂ ಶನಿವಾರ ಬೆಂಗಳೂರು-ಜೋಗ ಜಲಪಾತಕ್ಕೆ ಪ್ರಯಾಣಿಸುವ ವಯಸ್ಕರಿಗೆ 2,300 ರೂಪಾಯಿ ಹಾಗೂ ಮಕ್ಕಳಿಗೆ (6 ರಿಂದ 12 ವರ್ಷ) 2,100 ರೂಪಾಯಿ ದರ ನಿಗದಿಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರವಾಸದ ವೇಳಾಪಟ್ಟಿ
ಪ್ರಯಾಣ: ಬೆಂಗಳೂರಿನಿಂದ ಸಾಗರಕ್ಕೆ - 22:30-05:30; 
ಹೋಟೆಲ್‌ನಲ್ಲಿ ಉಪಹಾರ - 05:30-07:00;
ಬೆಳಗಿನ ಉಪಾಹಾರ - 07:00-07:15; 
ಸಾಗರದಿಂದ ವರದಹಳ್ಳಿಗೆ - 07:15-07:30; 
ವರದಹಳ್ಳಿಯಿಂದ ವರದಮೂಲ - 08:30-09:00; 
ವರದಮೂಲದಿಂದ ಇಕ್ಕೇರಿಗೆ - 09:15-09:30; 
ಇಕ್ಕೇರಿಯಿಂದ ಕೆಳದಿ - 10:30-11:00; 
ಕೆಳದಿ ಸಾಗರಕ್ಕೆ - 12:00-12:30; ಊಟ - 12:45-13:15; 
ಸಾಗರದಿಂದ ಜೋಗ್ ಫಾಲ್ಸ್ - 13:30-14:15; 
ಜೋಗ್ ಫಾಲ್ಸ್ ಟು ಸಾಗರ - 18:15-19:00; 
ಶಾಪಿಂಗ್ ಸಮಯ - 19:00-20:00;
ಜನ - 20:30-20:45; 
ಸಾಗರದಿಂದ ಬೆಂಗಳೂರಿಗೆ - 22:00-05:00.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com