ಬಿಹಾರದ 8 ವರ್ಷದ ಬಾಲಕ ಜಗತ್ತಿನ ಅತ್ಯಂತ ಕಿರಿಯ ಸೀರಿಯಲ್ ಕಿಲ್ಲರ್!

ಜಗತ್ತಿನ ಅತ್ಯಂತ ಕಿರಿಯ ಸರಣಿ ಹಂತಕ ಯಾರೆಂದು ಹುಡುಕಿದರೆ, ಬಿಹಾರದ 8 ವರ್ಷದ ಬಾಲಕ ಎನ್ನುತ್ತಿವೆ ವರದಿಗಳು! 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ನವದೆಹಲಿ: ಜಗತ್ತಿನ ಅತ್ಯಂತ ಕಿರಿಯ ಸರಣಿ ಹಂತಕ ಯಾರೆಂದು ಹುಡುಕಿದರೆ, ಬಿಹಾರದ 8 ವರ್ಷದ ಬಾಲಕ ಎನ್ನುತ್ತಿವೆ ವರದಿಗಳು! 

ಅತಿಯಾದ ಬಡತನ ಎದುರಿಸುತ್ತಿರುವ ಅಮರ್ಜೀತ್ ಸಾದಾ ಹುಟ್ಟಿದ್ದು 1998 ರಲ್ಲಿ ಮುಶಾಹರ್ ಗ್ರಾಮದಲ್ಲಿ. ಆತ ಮೂರು ಮಂದಿಯನ್ನು ಹತ್ಯೆ ಮಾಡಿದ್ದಾನೆ. ಸಾದಾ ಮೊದಲ ಹತ್ಯೆಯನ್ನು ತನ್ನ 7ನೇ ವಯಸ್ಸಿನಲ್ಲಿ ಮಾಡಿದ್ದ. 2006 ರಿಂದ 2007 ರ ಅವಧಿಯಲ್ಲಿ ತನ್ನ ಕುಟುಂಬ ಸದಸ್ಯರನ್ನೂ ಸೇರಿ ಒಟ್ಟು 3 ಮಂದಿಯನ್ನು ತನ್ನ 8 ನೇ ವಯಸ್ಸಿನ ವೇಳೆಗೆ ಹತ್ಯೆ ಮಾಡಿದ್ದ. 

2006 ರಲ್ಲಿ ಸಾದಾ ತನ್ನ 6 ವರ್ಷದ ಸೋದರಸಂಬಂಧಿಯನ್ನು ಹತ್ಯೆ ಮಾಡಿದ್ದ. ಆತ 8 ತಿಂಗಳ ಹಸುಗೂಸಾಗಿದ್ದ ತನ್ನ ಸ್ವಂತ ಸಹೋದರಿಯ ಹತ್ಯೆಯನ್ನೂ ಮಾಡಿದ್ದು, ನೆರೆ ಮನೆಯಲ್ಲಿದ್ದ 6 ತಿಂಗಳ ಖುಷ್ಬೂ ಎಂಬ ಮಗುವನ್ನೂ ಹತ್ಯೆ ಮಾಡಿದ್ದ ಎನ್ನುತ್ತಿದೆ ಡೈಲಿ ಮಿರರ್ ವರದಿಗಳು.

ಪೊಲೀಸ್ ವಶದಲ್ಲಿದ್ದಾಗ ಆತ ನಗುತ್ತಿದ್ದ ಹಾಗೂ ತಾನು ಮಾಡಿದ್ದ ಹತ್ಯೆಗಳ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪ ತೋರಿಸಲಿಲ್ಲ ಎನ್ನುತ್ತಿವೆ ದಾಖಲೆಗಳು. ಆತನ ಬಂಧನದ ಅವಧಿಯಲ್ಲಿ ಮನಶ್ಶಾಸ್ತ್ರಜ್ಞರೊಬ್ಬರು ಆತನ ಕುರಿತು "ಮತ್ತೊಬ್ಬರಿಗೆ ಗಾಯಗಳನ್ನು ಮಾಡುವುದರಿಂದ ಸಂತೋಷ ಪಡುವ ಸ್ಯಾಡಿಸ್ಟ್" ಎಂದು ಹೇಳಿದ್ದನ್ನು ಡೈಲಿ ಮಿರರ್ ವರದಿ ಮಾಡಿದೆ. 

2016 ರಲ್ಲಿ ಆತ ಜೈಲಿನಿಂದ ಬಿಡುಗಡೆಯಾಗಿದ್ದು, ಆತ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿಗಳು ಸದ್ಯಕ್ಕೆ ಲಭ್ಯವಿಲ್ಲ. ಜಗತ್ತಿನಾದ್ಯಂತ ಕಿರಿಯ ವಯಸ್ಸಿನ ಹಂತಕರ ಕುರಿತ ವರದಿ ಪ್ರಕಟಿಸಿರುವ ಡೈಲಿ ಮಿರರ್ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ 15 ವರ್ಷಕ್ಕೇ ಇಬ್ಬರನ್ನು ಹತ್ಯೆ ಮಾಡಿ ಮೂರನೇ ಹತ್ಯೆಗೆ ಯೋಜನೆ ರೂಪಿಸುತ್ತಿದ್ದಾಗ ಬಂಧನಕ್ಕೊಳಗಾದ ಎಸ್ಸೆಕ್ಸ್ ನ ಜೇಮ್ಸ್ ಫೇರ್ವೆದರ್ ಎಂಬಾತನ ಬಗ್ಗೆಯೂ ಬರೆಯಲಾಗಿದೆ. 

ಅಮೆರಿಕಾದಲ್ಲಿ ಸರಣಿ ಹಂತಕ ಹಾರ್ವೆ ಮಿಗುಯೆಲ್ ರಾಬಿನ್ಸನ್ ಎಂಬಾತ ತನ್ನ 17 ವರ್ಷಕ್ಕೇ ಪೆನ್ಸಲ್ವೇನಿಯಾದಲ್ಲಿ ಮೂವರ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ 1990 ರಿಂದಲೂ ಮರಣದಂಡನೆಗೆ ಗುರಿಯಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com