ಪಿಎಫ್ಐ ಸಂಘಟನೆ ನಿಷೇಧಿಸುವ ಕುರಿತು ಎಲ್ಲರ ಅಭಿಪ್ರಾಯ ಪಡೆದು ನಿರ್ಧಾರ: ಸಿಎಂ ಬೊಮ್ಮಾಯಿ

ಹಿಂದೂ ಕಾರ್ಯಕರ್ತರ ಹತ್ಯೆಯಾದ ಸಂದರ್ಭದಲ್ಲಿ, ಉಗ್ರ ಚಟುವಟಿಕೆಗಳು ನಡೆದಾಗ ಪಿಎಫ್ಐಯಂತಹ (PFI) ಸಂಘಟನೆಗಳನ್ನು ನಿಷೇಧ ಮಾಡಬೇಕೆಂಬ ಕೂಗು ಹಲವು ಸಮಯಗಳಿಂದ ಕೇಳುತ್ತಾ ಬಂದಿದೆ. ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾದಾಗಲೂ ಇದೇ ರೀತಿಯ ಆಗ್ರಹ ಕೇಳಿಬಂದಿದೆ.
ಕಳೆದ ಮಧ್ಯರಾತ್ರಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ
ಕಳೆದ ಮಧ್ಯರಾತ್ರಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಹಿಂದೂ ಕಾರ್ಯಕರ್ತರ ಹತ್ಯೆಯಾದ ಸಂದರ್ಭದಲ್ಲಿ, ಉಗ್ರ ಚಟುವಟಿಕೆಗಳು ನಡೆದಾಗ ಪಿಎಫ್ಐಯಂತಹ (PFI) ಸಂಘಟನೆಗಳನ್ನು ನಿಷೇಧ ಮಾಡಬೇಕೆಂಬ ಕೂಗು ಹಲವು ಸಮಯಗಳಿಂದ ಕೇಳುತ್ತಾ ಬಂದಿದೆ. ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾದಾಗಲೂ ಇದೇ ರೀತಿಯ ಆಗ್ರಹ ಕೇಳಿಬಂದಿದೆ.

ಈ ಬಗ್ಗೆ ನಿನ್ನೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಉತ್ತರಿಸಿದ ಸಿಎಂ ಬೊಮ್ಮಾಯಿ, ಛತ್ತೀಸ್ ಗಢ ಸರ್ಕಾರ ಈ ಹಿಂದೆ ಪಿಎಫ್ಐ ಸಂಘಟನೆ ನಿಷೇಧ ಮಾಡಿದ್ದಕ್ಕೆ ಒಂದು ತಿಂಗಳಲ್ಲಿ ಹೈಕೋರ್ಟ್ ನಿಂದ ತಡೆ ಬಂತು. ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಸೂಕ್ತವಾದ ರೀತಿಯಲ್ಲಿ ನಿಷೇಧವಾಗಬೇಕಿರುವುದರಿಂದ ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆದುಕೊಂಡು ಮಾಡುತ್ತೇವೆ. ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು. 

ಬೇರೆ ಬೇರೆ ರಾಜ್ಯಗಳಲ್ಲಿರುವ ಮತ್ತು ಕೇಂದ್ರ ಸರ್ಕಾರದ ಕಾನೂನನ್ನು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಪರಿಣಿತರ ಅಭಿಪ್ರಾಯ ಪಡೆದು ಸಂಪೂರ್ಣ ಸಶಜ್ಜಿತ ತಂಡವನ್ನು ತಯಾರು ಮಾಡುತ್ತೇವೆ ಎಂದರು.

ಬಿಜೆಪಿ ಯುವ ಮೋರ್ಚಾದ ಪ್ರವೀಣ್​ ನೆಟ್ಟಾರು ಹತ್ಯೆ ಸುದ್ದಿ ಕೇಳಿದ ಮೇಲೆ ಸಾಕಷ್ಟು ನೋವು, ಕಳವಳ ನನ್ನೊಳಗೆ ಇತ್ತು. ಇಂದು ಸರ್ಕಾರಕ್ಕೆ ಒಂದು ವರ್ಷ ಹಿನ್ನೆಲೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಸೂಕ್ತವಲ್ಲ. ಹಾಗಾಗಿ ರದ್ದು ಮಾಡಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com