ಸಿಇಟಿ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಅಪೂರ್ವ ಟಂಡನ್ ಟಾಪರ್

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(CET result 2022) ಫಲಿತಾಂಶ ಇಂದು ಶನಿವಾರ ಜುಲೈ 30ರಂದು ಪ್ರಕಟವಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(CET result 2022) ಫಲಿತಾಂಶ ಇಂದು ಶನಿವಾರ ಜುಲೈ 30ರಂದು ಪ್ರಕಟವಾಗಿದೆ. 

ಈ ಬಾರಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿ ವಿದ್ಯಾರ್ಥಿನಿಯರನ್ನು ಹಿಂದಿಕ್ಕಿದ್ದಾರೆ. 2.16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು,  2.1 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 1.74 ಲಕ್ಷ ಅಭ್ಯರ್ಥಿಗಳು BPharma ಮತ್ತು Pharma-D, 1.71 ಲಕ್ಷ ಅಭ್ಯರ್ಥಿಗಳು ಇಂಜಿನಿಯರಿಂಗ್, 1.42 ಲಕ್ಷ ಅಭ್ಯರ್ಥಿಗಳು BNYS (ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್) ಮತ್ತು BVSc (ಪಶುವೈದ್ಯಕೀಯ ವಿಜ್ಞಾನ ಪದವಿ) ಮತ್ತು 1.39 ಲಕ್ಷ ಅಭ್ಯರ್ಥಿಗಳು BSc (Agri) ಗೆ ಅರ್ಹರಾಗಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಎಲ್ಲಾ ಮೊದಲ ರ್ಯಾಂಕ್ ಬೆಂಗಳೂರಿಗರಿಗೆ ಈ ಬಾರಿ ಸಿಕ್ಕಿದೆ.

ರ್ಯಾಂಕ್ ವಿಜೇತರು:  ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಅಪೂರ್ವ್ ರಾಂಡಮ್, ಇಂಜಿನಿಯರಿಂಗ್ ಕೋರ್ಸ್ ಶ್ರೇಯಾಂಕದಲ್ಲಿ ಒಟ್ಟು ಶೇಕಡಾ 98.611 ರೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ಹೃಷಿಕೇಶ್ ನಾಗಭೂಷಣ್ ಅವರು ಕ್ರಮವಾಗಿ 99.167 ಮತ್ತು 98.333 ರ ಒಟ್ಟು ಶೇಕಡಾವಾರು ಅಂಕಗಳೊಂದಿಗೆ BNYS ಮತ್ತು BVSc ಕೋರ್ಸ್ ಶ್ರೇಯಾಂಕಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎಚ್‌ಎಎಲ್ ಪಬ್ಲಿಕ್ ಸ್ಕೂಲ್‌ನ ಅರ್ಜುನ್ ರವಿಶಂಕರ್ ಒಟ್ಟು ಶೇಕಡಾ 96.292 ರೊಂದಿಗೆ ಬಿಎಸ್ಸಿ(ಅಗ್ರಿ) ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿದ್ಯಾರಣ್ಯಪುರದ ನಾರಾಯಣ ಇ-ಟೆಕ್ನೋ ಶಾಲೆಯ ಶಿಶಿರ್ ಆರ್ ಕೆ ಬಿ.ಫಾರ್ಮಾದಲ್ಲಿ ಒಟ್ಟು ಶೇಕಡಾ 98.889 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ.

ನ್ಯಾಚುರೋಪರಿ ಮತ್ತು ಯೋಗ

ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್ ಹೃಷಿಕೇಶ್ 98% ಪ್ರಥಮ ರ್ಯಾಂಕ್ ಪಡೆದರೆ, ಉಡುಪಿಯ ಮಾದವ ಕೃಪ ಇಂಗ್ಲೀಷ್ ಸ್ಕೂಲ್ ವಿದ್ಯಾರ್ಥಿ ವ್ರಜೇಶ್, 96% ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಶ್ರೀ ಚೈತನ್ಯ ಟೆಕ್ನೊ ಸ್ಕೂಲ್​ನ ಕೃಷ್ಣ, 96% ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.

B.sc ಅಗ್ರಿಕಲ್ಚರ್

HAL ಪಬ್ಲಿಕ್ ಸ್ಕೂಲ್​ನ ಅರ್ಜುನ್, 93%, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಉಲ್ಲಾಳ ಸುಮೀತ್, 92%, ತುಮಕೂರು ವಿದ್ಯಾನಿಕೇತನ ಪಿಯು ಕಾಲೇಜ್ ಸುದೀಪ್ 92%. ಸಿಇಟಿ ಪರೀಕ್ಷೆಯಲ್ಲಿ ಒಟ್ಟು 7 ಅಂಕ ಕೃಪಾಂಕ ನೀಡಲಾಗಿದೆ.

B.v.sc (ವೆಟರ್ನರಿ ಸೈನ್ಸ್)

ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್, ಬೆಂಗಳೂರು ಹೃಷಿಕೇಶ್, 98%, ಪ್ರಥಮ ರ್ಯಾಂಕ್ ಪಡೆದಿದ್ದು, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಕೆ.ಆರ್.ಪುರ ಮನೀಶ್, 97%, ದ್ವಿತೀಯ ರ್ಯಾಂಕ್​ ಶುಭಾ ಕೌಶಿಕ್, 96%, ತೃತೀಯ ರ್ಯಾಂಕ್ ಪಡೆದಿದ್ದಾರೆ. ಸೆಪ್ಟೆಂಬರ್ 1 ರಿಂದ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಆರಂಭವಾಗಲಿದೆ.

KCET ಫಲಿತಾಂಶ 2022 ನೋಡುವುದು ಹೇಗೆ?: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ kea.kar.nic.inಗೆ ಭೇಟಿ ನೀಡಿ, ವೆಬ್​ಸೈಟ್​​ನಲ್ಲಿ ಮುಖಪುಟದಲ್ಲಿ ‘KCET ಫಲಿತಾಂಶ 2022’ ಮೇಲೆ ಕ್ಲಿಕ್ ಮಾಡಿ, ಲಾಗ್ ಇನ್ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಮೂದಿಸಿ. KCET ಫಲಿತಾಂಶಗಳು ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com