ರಾಹುಲ್ ಗಾಂಧಿ ಇಡಿ ವಿಚಾರಣೆ; ನಾಳೆ ರಾಜಭವನಕ್ಕೆ ರಾಜ್ಯ ಕಾಂಗ್ರೆಸ್ ಮುತ್ತಿಗೆ

ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಭಾರೀ ಪ್ರತಿಭಟನೆಗಿಳಿದಿರೋ ರಾಜ್ಯ ಕಾಂಗ್ರೆಸ್ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಿದ್ಧವಾಗ್ತಿದೆ. ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ನಾಳೆ ರಾಜಭವನಕ್ಕೆ ಮುತ್ತಿಗೆ ಹಾಕಲಿದೆ.
ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರು.
ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರು.

ಬೆಂಗಳೂರು: ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಭಾರೀ ಪ್ರತಿಭಟನೆಗಿಳಿದಿರೋ ರಾಜ್ಯ ಕಾಂಗ್ರೆಸ್ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಿದ್ಧವಾಗ್ತಿದೆ. ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ನಾಳೆ ರಾಜಭವನಕ್ಕೆ ಮುತ್ತಿಗೆ ಹಾಕಲಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್,   ಕೆಪಿಸಿಸಿ ಕಚೇರಿಯಿಂದ ರಾಜಭವನಕ್ಕೆ ತೆರಳ್ತೇವೆ.ಅಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕ್ತೇವೆ.ನಾಡಿದ್ದು ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಮಾಡ್ತೇವೆ. ಮೇಕೆದಾಟು ಯೋಜನೆಗೆ ನಾವು ಧರಣಿ ಮಾಡಿದ್ದೆವು.ನಮ್ಮ‌ ಮೇಲೆ ಕೇಸ್ ಹಾಕಿದ್ದರು. ಇಂದು ಜಾಮೀನು ಪಡೆದುಕೊಂಡಿದ್ದೇವೆ. ನಾಳೆ ಮತ್ತೆ ಹೋರಾಟಕ್ಕೆ ಇಳಿಯುತ್ತೇವೆ ಎಂದು ಹೇಳಿದರು. ಬಿಜೆಪಿಯ ನಡೆಯನ್ನು ನಾವು ಪ್ರತಿಭಟನೆ ಮೂಲಕ ವಿರೋಧಿಸುತ್ತೇವೆ. ಸಂವಿಧಾನದವನ್ನು ಗಾಳಿಗೆ ತೂರಿ ಎಲ್ಲಾ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸುವ ಪ್ರಯತ್ನಗಳು ನಡೆಯುತ್ತಿದೆ.

ರಾಹುಲ್‌ ಗಾಂಧಿ ಇಡಿ ವಿಚಾರಣೆ ನಡೆಸುತ್ತಿದ್ದಾರೆ. ಒಂದೆರಡು ಗಂಟೆ ವಿಚಾರಣೆ ಮಾಡಿ ಕಳುಹಿಸಬೇಕು . ಆದ್ರೆ  10 ರಿಂದ 14 ಗಂಟೆ  ವಿಚಾರಣೆ ನಡೆಸಿದ್ದಾರೆ. ಇಡಿಯವರು  ನಮ್ಮ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಟಾರ್ಚರ್ ಕೊಡ್ತಿದ್ದಾರೆ. ಸೋನಿಯಾ ಗಾಂಧಿ ಈ ದೇಶದ ಭವಿಷ್ಯಕ್ಕಾಗಿ ಒಬ್ಬ ಆರ್ಥಿಕ ತಜ್ಞರನ್ನು ಪ್ರಧಾನಿ ಮಾಡಿದ್ದರು. ತಮಗೆ ಸಿಗಬೇಕಾದ ಪಿಎಂ ಹುದ್ದೆಯನ್ನು  ಮನಮೋಹ ಸಿಂಗ್ ಗೆ ಪಿಎಂ ಹುದ್ದೆ ನೀಡಿದ್ದರು.ರಾಹುಲ್‌ ಗಾಂಧಿ ಕೂಡ ಪ್ರಧಾನಿ ಆಗಬೇಕಿತ್ತು. ರಾಹುಲ್‌ ಗಾಂಧಿ & ಸೋನಿಯಾ ಗಾಂಧಿ ಅವರಿಗೆ ಎಷ್ಟು ಆಸ್ತಿ ಇದೆ ಎಂದು ದಾಖಲೆ ತೆಗೆಸಿ ನೋಡಿ.  ನಮ್ಮ ನಾಯಕರಿಗೆ ಇರಲು ಒಂದು ಮನೆ ಇಲ್ಲ.  ಗಾಂಧಿ ಫ್ಯಾಮಿಲಿ ಇರೋ ಬರೋ ಆಸ್ತಿಯನ್ನ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ.  ದೆಹಲಿಯಲ್ಲಿ ನಮ್ಮ ಎಂಪಿಗಳನ್ನು ಹೊಡೆದು ಬಡಿದು ಅರೆಸ್ಟ್ ಮಾಡಿದ್ದಾರೆ. ದೇಶದಲ್ಲಿ ಪೊಲೀಸ್ ರಾಜ್ ಇದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್  ವಾಗ್ದಾಳಿ ಮಾಡಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಿಂದಿನದು.ಅಸೋಸಿಯೇಟೆಡ್ ಜನರಲ್ ಸಂಸ್ಥೆ  ಹುಟ್ಟು ಹಾಕಿದ್ದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಇದನ್ನ ಪ್ರಾರಂಭಿಸಿದ್ದರು. ಮೂರ್ನಾಲ್ಕು ಭಾಷೆಗಳಲ್ಲಿ ಪತ್ರಿಕೆ ಪ್ರಾರಂಭವಾಯಿತು. ಸಾವಿರಾರು ನೌಕರರು ಇದರಲ್ಲಿದ್ದರು.ಆ ಸಂಸ್ಥೆಯ ಆಸ್ತಿಗಳೂ ಇದ್ದವು.ಇದು ಗಾಂಧಿ ಕುಟುಂಬದ ಸ್ವತ್ತಲ್ಲ. ಇದು ಟ್ರಸ್ಟ್ ನಲ್ಲಿ ಸೇರ್ಪಡೆಯಾಗಿತ್ತು.ವಿಆರ್ ಎಸ್ ಕಟ್ಟೋಕೆ ಕಷ್ಟವಾ.ಆಸ್ತಿ‌ ಹರಾಜು ಮಾಡುವ ಹಂತಕ್ಕೆ ಬಂತು.ಹೀಗಾಗಿ ಸಂಸ್ಥೆಯನ್ನ ಉಳಿಸುವ ಪ್ರಯತ್ನ ಕಾಂಗ್ರೆಸ್ ಮಾಡ್ತು.90 ಕೋಟಿ ನೆರವು ನೀಡಿ ಕಂಪನಿಯನ್ನ ಉಳಿಸಿಕೊಳ್ತು.ಇದರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹಣ ಇತ್ತು. ಪಕ್ಷದ ದೇಣಿಗೆ ಹಣವೂ ಇತ್ತು. ಇದನ್ನ ಬಳಸಿ ಸಹಾಯ ಮಾಡಲಾಗಿತ್ತು.ಕಾನೂನಿನಡಿ ಸಾಲ ಕೊಡಬಾರದೆಂದು ಎಲ್ಲೂ ಹೇಳಿಲ್ಲ.ಇದರ ಬಗ್ಗೆ ತನಿಖೆ ಆಗಿದೆ, ವಿಚಾರಣೆ ನಡೆದಿದೆ. ಎಷ್ಟೇ ಸುಳ್ಳು ಕೇಸ್ ಹಾಕಬಹುದು.ಎಷ್ಟೇ ದಬ್ಬಾಳಿಕೆ ನೀವು ಮಾಡಬಹುದು.

ನಾವು ಹಳ್ಳಿಹಳ್ಳಿಯಲ್ಲಿ ಹೋರಾಟಕ್ಕಿಳಿಯುತ್ತೇವೆ.ಮುಂದೊಂದು ದಿನ ನಿಮ್ಮ ಪಾರ್ಟಿ ಅಧೋಗತಿಗೆ ಬರುತ್ತದೆ. ಕಾಂಗ್ರೆಸ್ ಕಚೇರಿಗೆ ನಾಯಕರು ಹೋಗಲು ಬಿಡುತ್ತಿಲ್ಲ. ಅವರನ್ನ ಬಲವಂತವಾಗಿ ಬಂಧಿಸಲಾಗುತ್ತಿದೆ. ತಾಕತ್ತಿದ್ದರೆ ನೀವು ಕಾನೂನು ಹೋರಾಟ ಮಾಡಿ ಎಂದು ಬಿಜೆಪಿ ನಾಯಕರಿಗೆ ಡಿ.ಕೆ.ಶಿವಕುಮಾರ್  ಸವಾಲು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com