ಶಸ್ತ್ರಚಿಕಿತ್ಸೆ ಮೂಲಕ ವ್ಯಕ್ತಿಯ ದವಡೆಯಿಂದ ಯಶಸ್ವಿಯಾಗಿ ಚಾಕು ಹೊರತೆಗೆದ ಹುಬ್ಬಳ್ಳಿಯ ಕಿಮ್ಸ್ ವೈದ್ಯರು!

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಆಸ್ಪತ್ರೆಯ ವೈದ್ಯರು ಮಧ್ಯವಯಸ್ಕನೊಬ್ಬನ ಮುಖದಲ್ಲಿ ಸಿಕ್ಕಿಹಾಕಿಕೊಂಡಿದ್ದ ಚಾಕುವನ್ನು ನಾಲ್ಕು ಗಂಟೆಗಳ ಕಾಲ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 
6 ಸೆಂ.ಮೀ ಉದ್ದದ ಚಾಕು ವ್ಯಕ್ತಿಯ ಮುಖಕ್ಕೆ ಹೊಡೆದು ಸಿಕ್ಕಿಹಾಕಿಕೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ
6 ಸೆಂ.ಮೀ ಉದ್ದದ ಚಾಕು ವ್ಯಕ್ತಿಯ ಮುಖಕ್ಕೆ ಹೊಡೆದು ಸಿಕ್ಕಿಹಾಕಿಕೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ

ಹುಬ್ಬಳ್ಳಿ: ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಆಸ್ಪತ್ರೆಯ ವೈದ್ಯರು ಮಧ್ಯವಯಸ್ಕನೊಬ್ಬನ ಮುಖದಲ್ಲಿ ಸಿಕ್ಕಿಹಾಕಿಕೊಂಡಿದ್ದ ಚಾಕುವನ್ನು ನಾಲ್ಕು ಗಂಟೆಗಳ ಕಾಲ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಕಳೆದ ಏಪ್ರಿಲ್ 18 ರಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕೆ.ಕೆ.ಹಳ್ಳಿಯ ಭೀಮರಾವ್ ಚೌಹಾಣ್ (48) ಅವರ ಮುಖಕ್ಕೆ ಹರಿತವಾದ ಚಾಕುವಿನಿಂದ ಪಕ್ಕದ ಮನೆಯವರು ಇರಿದಿದ್ದರು. ಚಾಕು 20 ದಿನಗಳ ಕಾಲ ಅವರ ಮುಖದ ದವಡೆಯಲ್ಲಿಯೇ ಉಳಿದಿತ್ತು. ಮೊದಲಿಗೆ ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿದ ವೈದ್ಯರು ಚಾಕುವನ್ನು ಸಂಪೂರ್ಣವಾಗಿ ಹೊರತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಜೂನ್ 3ರಂದು ಕರೆತಂದಿದ್ದರು.

ಮುಖದ ದವಡೆ ಭಾಗದಲ್ಲಿ ಚಾಕು ಹೊಡೆದು ತೀವ್ರವಾಗಿ ಗಾಯಗೊಂಡಿದ್ದರಿಂದ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಯಿತ್ತು. ಕಿಮ್ಸ್ ಆಸ್ಪತ್ರೆಯ ದವಡೆ ಸರ್ಜರಿ ವಿಭಾಗದ ವೈದ್ಯರು ಮುಖದ ಸಿಟಿ ಸ್ಕ್ಯಾನ್, ಮುಖದ ರಚನೆಯ ಸಿಟಿ ಆಂಜಿಯೋಗ್ರಾಮ್ ಮಾಡಿ ರೋಗಿಯ ಎಲ್ಲಾ ತಪಾಸಣೆ ನಡೆಸಿದರು.

ಆಸ್ಪತ್ರೆಯ ಅರಿವಳಿಕೆ, ಇಎನ್ ಟಿ ಮತ್ತು ನರಶಸ್ತ್ರಚಿಕಿತ್ಸೆ ವಿಬಾಗದ ವೈದ್ಯರು ಜೂನ್ 15 ರಂದು ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿದರು.

ವ್ಯಕ್ತಿಯ ಮುಖದ ದವಡೆಯಲ್ಲಿ ಸಿಕ್ಕಿಹಾಕಿಕೊಂಡ ಚಾಕು ಮೆದುಳು, ಬೆನ್ನುಹುರಿ ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು. ಶಸ್ತ್ರಚಿಕಿತ್ಸೆಯು ಜೀವಕ್ಕೆ ಅಪಾಯಕಾರಿ ಮತ್ತು ಸವಾಲಾಗಿತ್ತು. ಆದ್ದರಿಂದ ನಾಲ್ಕು ವಿಭಾಗಗಳ ನುರಿತ ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿದ್ದರು. ಯಾವುದೇ ತೊಡಕುಗಳು ಉಂಟಾದರೆ ಶಸ್ತ್ರಚಿಕಿತ್ಸಕ ತಂಡಕ್ಕೆ ಸಹಾಯ ಮಾಡಲು ಸ್ಟ್ಯಾಂಡ್‌ಬೈ ವಿಭಾಗಗಳ ತಜ್ಞರು ಸಿದ್ಧರಾಗಿದ್ದರು ಎಂದು ಡಾ ಮಂಜುನಾಥ್ ವಿಜಯಪುರ ತಿಳಿಸಿದ್ದಾರೆ. 

ಅರಿವಳಿಕೆ ತಜ್ಞರಾದ ಡಾ.ಸುಷ್ಮಾ ಮತ್ತು ಡಾ.ರಾಜಶೇಖರ್ ಅವರು ಅರಿವಳಿಕೆಗಾಗಿ ಫೈಬರ್ ಆಪ್ಟಿಕ್ ಮೆಷಿನ್ ಇಂಟ್ಯೂಬೇಶನ್ ಮಾಡಿ ನಂತರ ಶಸ್ತ್ರಚಿಕಿತ್ಸೆ ಮಾಡಲಾಯಿತು. ಡಾ.ಮಜುನಾಥ ವಿಜಯಪುರ, ಡಾ.ವಸಂತ ಕಟ್ಟಿಮನಿ, ಡಾ.ಅನುರಾಧಾ ನಾಗನಗೌಡರ ಮತ್ತು ತಂಡ ರೋಗಿಯ ಮುಖದಿಂದ 6 ಸೆಂ.ಮೀ ಒಡೆದ ಚಾಕುವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈಗ ರೋಗಿ ಆರೋಗ್ಯವಾಗಿದ್ದು, ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com