ಸಾಮಾಜಿಕ ಸೇವೆ, ಅನ್ನ ದಾಸೋಹಕ್ಕೆ ಪ್ರಖ್ಯಾತಿ ಪಡೆದಿರುವ ವಿಶ್ವ ಪ್ರಸಿದ್ಧ  ಕ್ಷೇತ್ರಕ್ಕೆ ಆಗಮಿಸಿದ್ದು ಖುಷಿ ತಂದಿದೆ: ಪ್ರಧಾನಿ ಮೋದಿ

ಸಾಮಾಜಿಕ ಸೇವೆ, ಅನ್ನ ದಾಸೋಹಕ್ಕೆ ಪ್ರಖ್ಯಾತಿ ಪಡೆದಿರುವ ವಿಶ್ವ ಪ್ರಸಿದ್ಧ  ಕ್ಷೇತ್ರಕ್ಕೆ ಆಗಮಿಸಿದ್ದು ಖುಷಿ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೈಸೂರಿನಲ್ಲಿ ಪ್ರಧಾನಿ ಮೋದಿ
ಮೈಸೂರಿನಲ್ಲಿ ಪ್ರಧಾನಿ ಮೋದಿ

ಮೈಸೂರು: ಸಾಮಾಜಿಕ ಸೇವೆ, ಅನ್ನ ದಾಸೋಹಕ್ಕೆ ಪ್ರಖ್ಯಾತಿ ಪಡೆದಿರುವ ವಿಶ್ವ ಪ್ರಸಿದ್ಧ  ಕ್ಷೇತ್ರಕ್ಕೆ ಆಗಮಿಸಿದ್ದು ಖುಷಿ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

2 ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಮೈಸೂರಿಗೆ ಆಗಮಿಸಿದರು. ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. 'ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಗೆ ನನ್ನ ಪ್ರಣಾಮ. ತಾಯಿ ಕೃಪೆಯಿಂದಲೇ ನನಗೆ ಮೈಸೂರಿಗೆ ಬರುವ ಸೌಭಾಗ್ಯ ಸಿಕ್ಕಿದೆ. ಮೈಸೂರು ಅಭಿವೃದ್ಧಿಗೆ ಚಾಮುಂಡೇಶ್ವರಿಗೆ ನನ್ನ ಪ್ರಾರ್ಥನೆ. ಮೈಸೂರು ಅಭಿವೃದ್ಧಿಗೆ ಕಾರ್ಯಕ್ರಮ ಮಾಡುವ ಅವಕಾಶ ಸಿಕ್ಕಿದೆ. ಸಂತರು ಸೇರಿರುವ ಈ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಧನ್ಯತೆ ಸಿಕ್ಕಿದೆ. ಇಲ್ಲಿಂದ ನಾನು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುತ್ತೇನೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುತ್ತೇನೆ ಎಂದು ಹೇಳಿದರು.

'ಸಾಮಾಜಿಕ ಸೇವೆ, ಅನ್ನ ದಾಸೋಹಕ್ಕೆ ಪ್ರಖ್ಯಾತಿ ಪಡೆದಿರುವ ವಿಶ್ವಪ್ರಸಿದ್ಧದ ಈ ಕ್ಷೇತ್ರಕ್ಕೆ ಆಗಮಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಮೈಸೂರಿನ ಚಾಮುಂಡಿ ತಾಯಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ಶಿವರಾತ್ರಿ ಶಿವಯೋಗಿ ಸ್ವಾಮಿಜಿಗಳಿಗೆ ಧನ್ಯವಾದಗಳು ಹೇಳುತ್ತೇನೆ. ಸಂಸ್ಕೃತಿ ಪಾಠಶಾಲೆಯ ಕಟ್ಟಡದ ಲೋಕಾರ್ಪಣೆ ಮಾಡಲಾಗಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಬರೆದ ಯೋಗ ಸಂಬಂಧಿಸಿದ 3 ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೇನೆ. ವಿಶ್ವದಲ್ಲಿ ಸಮಾಜ ವಿಜ್ಞಾನದಲ್ಲಿ ಏನು ಬರೆದಿದ್ದಾರೆ ಅದನ್ನು ಅಧ್ಯಯನ ಮಾಡಿದ್ದಾರೆ.

‘ನಾರದ ಸೂತ್ರ’ ಪುಸ್ತಕ ಅತೀ ಪುರಾತವಾದದ್ದು ಜ್ಞಾನಕ್ಕಿಂತ ದೊಡ್ಡದ್ದು ಯಾವುದೂ ಇಲ್ಲ. ಇದನ್ನು ನಮ್ಮ ಶಾಸ್ತ್ರದಲ್ಲಿ ಹೇಳಲಾಗಿದೆ. ಕಾಶಿಯಿಂದ ಹಿಡಿದು ನಂಜನಗೂಡಿನ ಕಾಶಿವರೆಗೂ ಶಿವರಾತ್ರಿ ಸ್ವಾಮೀಜಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಯಾವುದೇ ಶುಲ್ಕ ಪಡೆಯದೇ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. 300ಕ್ಕೂ ಹೆಚ್ಚು ಸಂಸ್ಥೆಗಳು & 2 ವಿವಿಗಳು ಸೇರಿದಂತೆ ವಿದೇಶದಲ್ಲೂ ಸುತ್ತೂರು ಮಠದ ವಿದ್ಯಾ ಸಂಸ್ಥೆಗಳಿವೆ. ಇನ್ನೂ ಈ ಮಠದ ವಿದ್ಯಾಸಂಸ್ಥೆಗಳು ವಿಸ್ತರಣೆಯಾಗಲಿವೆ. ಲಂಡನ್​ನಲ್ಲಿ ಬಸವೇಶ್ವರ ಪ್ರತಿಮೆ ಅನಾವರಣಗೊಳಿಸುವ ಸೌಭಾಗ್ಯ ಸಿಕ್ಕಿದೆ ಎಂದರು.

ಪ್ರಧಾನಿಗೆ ರುದ್ರಾಕ್ಷಿಮಾಲೆ ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನ
ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಪ್ರಧಾನಿಗೆ ರುದ್ರಾಕ್ಷಿಮಾಲೆ ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಲಾಗಿದ್ದು ಮೋದಿ ತಾಯಿ ಜೊತೆಗಿರುವ ಫೋಟೋ, ಬಸವಣ್ಣನ ಫೋಟೋ ಕಾಣಿಕೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ​ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ, ಸಿದ್ಧಗಂಗಾಶ್ರೀ, ಸಿದ್ದೇಶ್ವರಶ್ರೀಗಳು ಉಪಸ್ಥಿತರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com