ಜಿಆರ್ ಪಿ ಕ್ಷಿಪ್ರ ಕಾರ್ಯಾಚರಣೆ: ರೈಲ್ವೆ ನಿಲ್ದಾಣದಲ್ಲಿ ಮರೆತಿದ್ದ ದಂಪತಿಗಳಿಗೆ ಮರಳಿ ಸಿಕ್ಕಿತು 13 ಲಕ್ಷ ರೂ. ಮೌಲ್ಯದ  ವಸ್ತುಗಳು!

ಬೆಂಗಳೂರಿನಿಂದ ಚೆನ್ನೈ ಗೆ ತೆರಳುತ್ತಿದ್ದ ದಂಪತಿ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ವಜ್ರದ ಆಭರಣ, ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ಮರೆತು ಬಿಟ್ಟು ಹೋಗಿದ್ದರು.
ಚಿನ್ನಾಭರಣ ಮತ್ತು ಲ್ಯಾಪ್ ಟಾಪ್
ಚಿನ್ನಾಭರಣ ಮತ್ತು ಲ್ಯಾಪ್ ಟಾಪ್

ಬೆಂಗಳೂರು: ಬೆಂಗಳೂರಿನಿಂದ ಚೆನ್ನೈ ಗೆ ತೆರಳುತ್ತಿದ್ದ ದಂಪತಿ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ವಜ್ರದ ಆಭರಣ, ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ಮರೆತು ಬಿಟ್ಟು ಹೋಗಿದ್ದರು. ಆದರೆ ಸಿಸಿಟಿವಿ ಫುಟೇಜ್ ಹಾಗೂ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ ಪಿ) ನ ಕ್ಷಿಪ್ರ ಕಾರ್ಯಾಚರಣೆಯ ಫಲವಾಗಿ ಈ ವಸ್ತುಗಳು ಮರಳಿ ಮಾಲಿಕರ ಕೈಗೆ ಸೇರಿವೆ. 

ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಹೋಗಲಾಗಿದ್ದ ಲ್ಯಾಪ್ ಟಾಪ್ ಸೇರಿದಂತೆ ಇತರ ಬೆಲೆ ಬಾಳುವ ವಸ್ತುಗಳು ಇಂದೋರ್ ಮೂಲದ ಕುಟುಂಬವೊಂದಕ್ಕೆ ದೊರೆತಿದ್ದು, ಅವರೂ ಕಳೆದುಕೊಂಡವರಿಗಾಗಿ ಹುಡುಕುತ್ತಿದ್ದರು. ಸಿಸಿಟಿವಿ ಫುಟೇಜ್ ಸಹಾಯದಿಂದ ರೈಲ್ವೆ ಪೊಲೀಸರು ವಸ್ತುಗಳು ಇರುವ ಪ್ರದೇಶದ ಮಾಹಿತಿ ಪಡೆದು ಇಂದೋರ್ ನಿಂದ ವಾಪಸ್ ತರಿಸಿದ್ದಾರೆ. ಯಾವುದೇ ಬಂಧನವಿಲ್ಲದೇ ಪ್ರಕರಣ ಸುಖಾಂತ್ಯಗೊಂಡಿದ್ದು, ಕಳೆದುಕೊಂಡಿದ್ದ ಮಾಲಿಕರಿಗೆ ಬೆಲೆ ಬಾಳುವ ವಸ್ತುಗಳು ದೊರೆತಿವೆ. 

ಜೂ.03 ರಂದು ಕಾವೇರಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸಿದ್ದ ದಂಪತಿ, ಕೆಎಸ್ ಆರ್ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ 5 ರಲ್ಲಿ ಬೆಂಚ್ ಮೇಲೆ ಎರಡು ಲ್ಯಾಪ್ ಟಾಪ್, ಚಿನ್ನ, ವಜ್ರದಿಂದ ಮಾಡಲಾಗಿದ್ದ ಎರಡು ಬಳೆಗಳು, ಕಿವಿಯೋಲೆ, ಹಾಗೂ ಕಡ್ಗವಿದ್ದ ಬ್ಯಾಕ್ ಪಾಕ್ ನ್ನು ಮರೆತು ಹೋಗಿದ್ದರು. 

ಆ ನಂತರ ತಾವು ಮಾಡಿಕೊಂಡ ಎಡವಟ್ಟು ಅರಿವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಕೆಎಸ್ ಆರ್ ಬೆಂಗಳೂರಿನ ಡಿವೈಎಸ್ ಪಿ ಸಿ.ಆರ್ ಗೀತಾ, " ನಾವು ಸಿಸಿಟಿವಿ ಫುಟೇಜ್ ಪರಿಶೀಲಿಸಿದಾಗ, ಬ್ಯಾಗ್ ಇದ್ದ ಸ್ಥಳದಲ್ಲಿ ಬಂದು ಕುಳಿತ ತಂದೆ-ಮಗ ಆ ಬ್ಯಾಗ್ ನ್ನು ಪರಿಕ್ಷಿಸುತ್ತಿದ್ದರು. ಆ ನಂತರ ಅದನ್ನು ಅಲ್ಲಿಂದ ತೆಗೆದುಕೊಂಡು ಮೈಸೂರು-ರೇಣಿಗುಂಟ ರೈಲನ್ನು ಹತ್ತಿದ್ದರು. 1:30 ರ ವೇಳೆಯಲ್ಲಿ ಆ ಪ್ಲಾಟ್ ಫಾರ್ಮ್ ನಲ್ಲಿದ್ದದ್ದು ಆ ಇಬ್ಬರು ಪ್ರಯಾಣಿಕರಷ್ಟೆ. ಪ್ರಯಾಣಿಕರ ಚಾರ್ಟ್ ನ್ನು ಪರಿಕ್ಷಿಸಿದಾಗ ಆ ತಂದೆ-ಮಗ ಇಂದೋರ್ ನವರೆಂದು ತಿಳಿಯಿತು. ಜಿಆರ್ ಪಿಯ ತಂಡವೊಂದು ಇಂದೋರ್ ನಲ್ಲಿರುವ ರಥಮ್ ಗೆ ತೆರಳಿ, ವಸ್ತುಗಳನ್ನು ಮರಳಿ ತಂದಿದ್ದಾರೆ. 

ಬ್ಯಾಗ್ ತೆಗೆದುಕೊಂಡು ಹೋಗಿದ್ದವರು ಪ್ಲಾಸ್ಟಿಕ್ ಪೌಚ್ ನಲ್ಲಿರುವುದು ನಕಲಿ ಚಿನ್ನ ಎಂದು ಭಾವಿಸಿ ಇಟ್ಟಿದ್ದರು ಅಷ್ಟೇ ಅಲ್ಲದೇ ಲ್ಯಾಪ್ ಟಾಪ್ ಚಾಲೂ ಮಾಡಿ ಅದರ ನಿಜವಾದ ಮಾಲಿಕರನ್ನು ಹುಡುಕುವ ಪ್ರಯತ್ನದಲ್ಲಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com