ನೆಟ್ಟಾರು ಹತ್ಯೆ: ವಾಂಟೆಡ್ ಪಟ್ಟಿ ಬಿಡುಗಡೆ ಮಾಡಿದ ಎನ್‌ಐಎ, ಸುಳಿವು ಕೊಟ್ಟರೆ 5 ಲಕ್ಷ ರೂ. ಬಹುಮಾನ!
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಮಡಿಕೇರಿಯ ಪಿಎಫ್ ಐ ಕಾರ್ಯಕರ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಕಾರ್ಯಕರ್ತರು ಬೇಕಾಗಿದ್ದಾರೆ.
Published: 02nd November 2022 12:09 AM | Last Updated: 02nd November 2022 02:14 PM | A+A A-

ಪ್ರವೀಣ್ ನೆಟ್ಟಾರು-ವಾಂಟೆಡ್ ಪಟ್ಟಿ
ಮಡಿಕೇರಿ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಮಡಿಕೇರಿಯ ಪಿಎಫ್ ಐ ಕಾರ್ಯಕರ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಕಾರ್ಯಕರ್ತರು ಬೇಕಾಗಿದ್ದಾರೆ.
ಎನ್‌ಐಎ ಬಿಡುಗಡೆ ಮಾಡಿರುವ ವಾಂಟೆಡ್ ಲಿಸ್ಟ್‌ನಲ್ಲಿ ಆರೋಪಿಗಳ ಹೆಸರುಗಳನ್ನು ಪ್ರಕಟಿಸಲಾಗಿದ್ದು, ಆರೋಪಿಗಳ ಪತ್ತೆಗೆ ನಗದು ಬಹುಮಾನ ಘೋಷಿಸಿದೆ.
ಮಡಿಕೇರಿ ಮೂಲದ ತುಫೈಲ್ ಎಂಎಚ್ ಪ್ರಮುಖ ವ್ಯಕ್ತಿಯಾಗಿದ್ದು ಇತನ ಮಾಹಿತಿ ನೀಡಿದರೆ ಎನ್ಐಎ ಐದು ಲಕ್ಷ ರೂಪಾಯಿ ಬಹುಮಾನ ನೀಡಲಿದೆ. ಇನ್ನು ಸುಳ್ಯದ ಬೆಳ್ಳಾರೆ ಗ್ರಾಮದ ಮೊಹಮ್ಮದ್ ಮುಸ್ತಫಾ ಎಸ್ ಎಂಬಾತನ ಪತ್ತೆಗೆ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಪತ್ನಿಗೆ ಸಿಎಂ ಸಚಿವಾಲಯದಲ್ಲಿ ನೌಕರಿ: ರಾಜ್ಯ ಸರ್ಕಾರದಿಂದ ಆದೇಶ
ಇನ್ನು ಆರೋಪಿಗಳಾದ ಸುಳ್ಯದ ಉಮರ್ ಫಾರೂಕ್ ಎಂಆರ್ ಮತ್ತು ಅಬ್ಬುಬಕ್ಕರ್ ಸಿದ್ದೀಕ್ ಅವರ ಪತ್ತೆಗೆ ತಲಾ ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಎಲ್ಲಾ ನಾಲ್ವರು ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರಾಗಿದ್ದರು.