ರೇಣುಕಾಚಾರ್ಯ ತಮ್ಮನ ಮಗ ಚಂದ್ರು ಸಾವಿನ ಪ್ರಕರಣ ಬಗ್ಗೆ ಸಮಗ್ರ ತನಿಖೆಗೆ ಸೂಚನೆ: ಸಿಎಂ ಬೊಮ್ಮಾಯಿ
ಹೊನ್ನಾಳಿ ಕ್ಷೇತ್ರದ ಶಾಸಕ ಎಂ ಪಿ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ಬಗ್ಗೆ ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Published: 09th November 2022 11:40 AM | Last Updated: 09th November 2022 02:35 PM | A+A A-

ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಬೊಮ್ಮಾಯಿ
ಹೊನ್ನಾಳಿ(ದಾವಣಗೆರೆ): ಹೊನ್ನಾಳಿ ಕ್ಷೇತ್ರದ ಶಾಸಕ ಎಂ ಪಿ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ಬಗ್ಗೆ ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಹೊನ್ನಾಳಿಯಲ್ಲಿಯಲ್ಲಿರುವ ಶಾಸಕ ರೇಣುಕಾಚಾರ್ಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಯುವಕ ಚಂದ್ರಶೇಖರ್ ಮರಣೋತ್ತರ ಪರೀಕ್ಷೆ, ಎಫ್ಎಸ್ ಎಲ್ ವರದಿ ಇನ್ನೆರಡು ದಿನಗಳಲ್ಲಿ ಬರಲಿದೆ. ಅದರಲ್ಲಿ ಸಾವಿಗೆ ಕಾರಣಗಳು ಹೊರಬರಬಹುದು, ವರದಿ ಆಧಾರದ ಮೇಲೆ ತನಿಖೆಯನ್ನು ಚುರುಕುಗೊಳಿಸಲಾಗುವುದು ಎಂದು ಹೇಳಿದರು.
ಚಂದ್ರಶೇಖರ್ ಸಾವಿನ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಇದು ಕೊಲೆಯ ಆಯಾಮದಲ್ಲಿ ಮತ್ತು ಅಪಘಾತ ಆಯಾಮ ಎರಡೂ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಘಟನೆ ಮರುಸೃಷ್ಟಿ ಮಾಡಿ ತನಿಖೆ ನಡೆಸುವಂತೆ ಎಸ್ ಪಿಗೆ ಸೂಚನೆ ನೀಡಿದ್ದೇನೆ, ಸಂಪೂರ್ಣ ತನಿಖೆಯಾಗಿ ನಿಖರತೆ ಬರುವವರೆಗೂ ಯಾವುದೇ ನಿರ್ಣಯಕ್ಕೆ ಬರುವುದು ಬೇಡ ಎಂದು ಹೇಳಿದ್ದೇನೆ.
ಇದನ್ನೂ ಓದಿ: ಚಂದ್ರಶೇಖರ್ ಸಾವು ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ: ಪೊಲೀಸರ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ
ಸಿಐಡಿಗೆ ಪ್ರಕರಣದ ತನಿಖೆ ವಹಿಸಲಾಗುತ್ತದೆಯೇ ಎಂಬ ಸಂಶಯಕ್ಕೆ ಉತ್ತರಿಸಿರುವ ಮುಖ್ಯಮಂತ್ರಿಗಳು ಪೊಲೀಸರಿಂದಲೇ ಸಮಗ್ರ ತನಿಖೆಯಾಗಲಿದೆ, ಮುಂದಿನ ದಿನಗಳಲ್ಲಿ ಯಾವ ರೀತಿ, ಯಾವ ಮಟ್ಟಕ್ಕೆ, ಯಾವ ಆಯಾಮಗಳಲ್ಲಿ ತನಿಖೆ ಮಾಡಬೇಕೆಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂದ ಮೇಲೆ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದರು.
ಶಾಸಕ ರೇಣುಕಾಚಾರ್ಯರ ಕೆಲಸ ಕಾರ್ಯಗಳಿಗೆ ಚಂದ್ರು ಸಹಕರಿಸಿ ಹೊಂದಿಕೊಂಡು ಸಹಾಯ ಮಾಡಿಕೊಂಡು ಹೋಗುತ್ತಿದ್ದ. ಹೀಗಾಗಿ ಆತನ ಹಠಾತ್ ನಿಧನ ಅವರಿಗೆ ಮತ್ತು ಕುಟುಂಬಕ್ಕೆ ಆಘಾತ ತಂದಿದೆ. ರೇಣುಕಾಚಾರ್ಯ ನನಗೆ ಸೋದರ ಇದ್ದಂತೆ. ಅವರ ದುಃಖ ನನ್ನ ದುಃಖ ಎಂದು ಭಾವಿಸಿ ಇಂದು ಬಂದಿದ್ದೇನೆ ಎಂದರು.
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ಹೊನ್ನಾಳಿ ಹಿರೇಮಠದ ನಮ್ಮ ನಿವಾಸಕ್ಕೆ ಆಗಮಿಸಿ ನಮ್ಮ ಮಗ ಚಂದ್ರುಗೆ ಪುಷ್ಪನಮನ ಸಲ್ಲಿಸಿ ಚಂದ್ರ ಪ್ರಕರಣದ ಬಗ್ಗೆ ಸಮಗ್ರವಾಗಿ ಚಚಿ೯ಸಿ ನನಗೆ ಮತ್ತು ನಮ್ಮ ಕುಟುಂಬಕ್ಕೆ ಧೈರ್ಯ ಆತ್ಮವಿಶ್ವಾಸವನ್ನು ತುಂಬಿ ಸಾಂತ್ವನ ಹೇಳಿದರು
— M P Renukacharya (@MPRBJP) November 9, 2022
ಸಚಿವರಾದ @GovindKarjol @BABasavaraja ಉಪಸ್ಥಿತರಿದ್ದರು pic.twitter.com/9mE6RQf3tX
ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಶಾಸಕ ರೇಣುಕಾಚಾರ್ಯ ಪ್ರತ್ಯೇಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.