ದಾವಣಗೆರೆ: ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಾಯದೆ ರಾತ್ರೋರಾತ್ರಿ ಪಾಲಿಕೆ ಮುಂಭಾಗದ ಹೊಂಡಗುಂಡಿ ಮುಚ್ಚಿದ ಸ್ವಯಂಸೇವಕರು

ಈ ವರ್ಷ ಮಳೆ ಹೆಚ್ಚಾಗಿ ರಾಜಧಾನಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಡಾಮರು ರಸ್ತೆ ಕಿತ್ತುಹೋಗಿ ಹೊಂಡ-ಗುಂಡಿ ಬಿದ್ದು ಅನೇಕ ಅನಾಹುತಗಳು ಸಂಭವಿಸಿದೆ. ಹಾಳಾಗಿರುವ ರಸ್ತೆಗಳನ್ನು ರಿಪೇರಿ ಮಾಡಲು ಹೊರಟಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮತ್ತೆ ಮಳೆರಾಯನ ಕಾಟ ಎದುರಾಗಿದೆ. 
ರಸ್ತೆ ದುರಸ್ತಿ ಮಾಡಿದ ಸ್ವಯಂಸೇವಕರು
ರಸ್ತೆ ದುರಸ್ತಿ ಮಾಡಿದ ಸ್ವಯಂಸೇವಕರು

ದಾವಣಗೆರೆ:ಈ ವರ್ಷ ಮಳೆ ಹೆಚ್ಚಾಗಿ ರಾಜಧಾನಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಡಾಮರು ರಸ್ತೆ ಕಿತ್ತುಹೋಗಿ ಹೊಂಡ-ಗುಂಡಿ ಬಿದ್ದು ಅನೇಕ ಅನಾಹುತಗಳು ಸಂಭವಿಸಿದೆ. ಹಾಳಾಗಿರುವ ರಸ್ತೆಗಳನ್ನು ರಿಪೇರಿ ಮಾಡಲು ಹೊರಟಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮತ್ತೆ ಮಳೆರಾಯನ ಕಾಟ ಎದುರಾಗಿದೆ. 

ಬೆಂಗಳೂರಿನ ಮಲ್ಲೇಶ್ವರದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಹೊಂಡ ಬಿದ್ದ ರಸ್ತೆಯಿಂದ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾದ ದಂಪತಿ ನಂತರ ತಾವೇ ಮಣ್ಣು ತಂದು ಹೊಂಡ ಬಿದ್ದಲ್ಲಿಗೆ ಹಾಕಿ ಸರಿ ಮಾಡಿ ಹೋಗಿದ್ದರು. ಈ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿತ್ತು.

ದಾವಣಗೆರೆಯಲ್ಲಿ ಕೂಡ ಸ್ವಯಂಸೇವಕರು ಇಂತಹ ಕೆಲಸ ಮಾಡಿದ್ದಾರೆ. ದಾವಣಗೆರೆ ನಗರ ಪಾಲಿಕೆಯನ್ನು ಕಾಯದೆ, ಜನಪ್ರತಿನಿಧಿಗಳಿಗೆ ಕಾಯದೆ ತಾವೇ ರಾತ್ರಿ ಹೊತ್ತು ಜಲ್ಲಿಕಲ್ಲು, ಸಿಮೆಂಟ್ ಹಾಕಿ ಹೊಂಡವನ್ನು ಮುಚ್ಚಿದರು. 

ನಿನ್ನೆ ರಾತ್ರಿ ದಾವಣಗೆರೆ ನಗರ ಪಾಲಿಕೆಯ ಎದುರು ಕಾರ್ಯಕರ್ತರು ತಮ್ಮ ಸ್ವಂತ ಹಣ ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿ ಹೊಂಡಗಳನ್ನು ಮುಚ್ಚುವ ಕೆಲಸ ಮಾಡುವುದನ್ನು ನೋಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com