ಮೋದಿ ಬೆಂಗಳೂರು ಭೇಟಿ ವೇಳೆ ಭದ್ರತಾ ವೈಫಲ್ಯ? ಪ್ರಿಯತಮೆಯ ಪತಿಯಿಂದ ತಪ್ಪಿಸಿಕೊಳ್ಳಲು ಏರ್ ಪೋರ್ಟ್ ಒಳಗೆ ನುಗ್ಗಿದ್ದ ಆಗಂತುಕ!

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುವ ಎರಡು ದಿನಗಳ ಮೊದಲು ನವೆಂಬರ್ 9 ರಂದು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯವಾಗಿದ್ದು ಕೇಂದ್ರ ಭದ್ರತಾ ಸಂಸ್ಥೆಗಳು ಮತ್ತು ಪೊಲೀಸರನ್ನು ತಲೆತಿರುಗುವಂತೆ ಮಾಡಿತು.
ಬಂಧಿತ ವ್ಯಕ್ತಿ ಮುಕುಂದ್ ಖೌಂಡ್
ಬಂಧಿತ ವ್ಯಕ್ತಿ ಮುಕುಂದ್ ಖೌಂಡ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುವ ಎರಡು ದಿನಗಳ ಮೊದಲು ನವೆಂಬರ್ 9 ರಂದು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯವಾಗಿದ್ದು ಕೇಂದ್ರ ಭದ್ರತಾ ಸಂಸ್ಥೆಗಳು ಮತ್ತು ಪೊಲೀಸರನ್ನು ತಲೆತಿರುಗುವಂತೆ ಮಾಡಿತು.

ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದ ಇದರ ಬೆನ್ನಲ್ಲಿಯೇ ಗುಪ್ತಚರ  ಹಾಗೂ ಭದ್ರತಾ ವೈಫಲ್ಯ ಆಗಿತ್ತೇ ಎನ್ನುವನ ಅನುಮಾನ ಕಾಡಿದೆ. ನವೆಂಬರ್‌ 9 ರಂದು ವ್ಯಕ್ತಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದ ವೇಳೆ ಸಿಕ್ಕಿಬಿದ್ದಿದ್ದ.

ಪ್ರಧಾನಿ ಮೋದಿ ಭೇಟಿಗೂ ಮುನ್ನ ಹೆಚ್ಎಎಲ್‌ ವಿಮಾನನಿಲ್ದಾಣಕ್ಕೆ ಆಗಂತುಕ ಪ್ರವೇಶಿಸಿದ್ದ. ಪ್ರೇಯಸಿಯ ಗಂಡನಿಗೆ ಹೆದರಿ ಅಸ್ಸಾಂ ಮೂಲದ ಮುಕುಂದ್‌ ಖೌಂಡ್‌ ಹೆಚ್ಎಎಲ್ ಕಾಂಪೌಡ್‌ಗೆ ನುಗ್ಗಿದ್ದ ಎಂದು ಹೇಳಲಾಗಿದೆ.

ಈತ, ಪೂರ್ವಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಈಕೆ ತನ್ನ ಗಂಡನ ಜೊತೆ ಯಮಲೂರಿನಲ್ಲಿ ವಾಸವಾಗಿದ್ದಳು. ಪೂರ್ವಿಯನ್ನು ಭೇಟಿಯಾಗಲು ಅಸ್ಸಾಂನಿಂದ ಮುಕುಂದ್‌ ಖೌಂಡ್‌ ಬಂದಿದ್ದ. ಈ ವೇಳೆ ಪೂರ್ವಿ ಗಂಡನಿಗೆ ಮುಕುಂದ್‌ ಸಿಕ್ಕಿಬಿದ್ದಿದ್ದ ಎಂದು ಹೇಳಲಾಗಿದೆ.

ಆತನಿಂದ ತಪ್ಪಿಸಿಕೊಂಡು ಓಡಿ ಬರುವ ವೇಳೆ ಯಮಲೂರಿನ ಬಳಿ ಆಕಸ್ಮಿಕವಾಗಿ ಹೆಚ್ಎಎಲ್ ಕೌಂಪಂಡ್ ಪ್ರವೇಶಿಸಿದ್ದ. ಸಿಸಿಟಿವಿಯಲ್ಲಿ ಆತ ಕಾಂಪೌಂಡ್ ಜಂಪ್ ಮಾಡುವುದನ್ನು ಗಮನಿಸಿದ ಪೊಲೀಸರು ಕೂಡಲೇ ತೆರಳಿ ಆತನನ್ನು ಬಂಧಿಸಿದ್ದರು. ನಂತರ ವಿಚಾರಣೆಗಾಗಿ ಎಚ್ ಎ ಎಲ್ ಪೊಲೀಸರ ವಶಕ್ಕೆ ನೀಡಿದ್ದರು.

ಮುಕುಂದ್‌ನನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 36 ವರ್ಷದ ಮುಕುಂದ್‌ನಲ್ಲಿ ಭಾರತೀಯ ಗೌಪ್ಯತಾ ಕಾಯಿದೆಯಡಿ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಘಟನೆಯನ್ನು ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಅದರೊಂದಿಗೆ ಗುಪ್ತಚರ ದಳ ಕೂಡ ತನಿಖೆ ಆರಂಭಿಸಿದೆ.

ಆರೋಪಿಯಾಗಿರುವ ಅಸ್ಸಾಂ ಮೂಲದ ವ್ಯಕ್ತಿಯ ಹಿನ್ನಲೆ ಆತ ಬೆಂಗಳೂರಿಗೆ ಬಂದ ಕಾರಣ ಇತರ ಮಾಹಿತಿಯನ್ನೂ ಪೊಲೀಸರಿಂದ ಪಡೆದುಕೊಂಡಿದ್ದು, ಇನ್ನೂ ಕೆಲವು ಮಾಹಿತಿಗಳಿಗೆ ಜಾಲಾಡಿದೆ. ಇನ್ನು ಭದ್ರತಾ ವೈಫಲ್ಯದ ಬಗ್ಗೆ ಪೊಲೀಸರಿಗೆ ಪ್ರಶ್ನೆ ಮಾಡಲಾಗಿದೆ.

ಖೌಂಡ್ ಮತ್ತು ಅವನ ಪ್ರೇಮಿ ಪೂರ್ವಿ ತಮ್ಮ ಮದುವೆಗೆ ಮುಂಚೆಯೇ ಪರಸ್ಪರ ಪ್ರೀತಿಸುತ್ತಿದ್ದರು. ಪೂರ್ವಿಯ ಪತಿ ಬಿಪುಲ್ ಎಚ್‌ಎಎಲ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಕಛೇರಿ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಗಾರೆ ಕೆಲಸ ಮಾಡುವ ಖೌಂಡ್ ವಿಮಾನ ನಿಲ್ದಾಣದ ಗೋಡೆ ಜಂಪ್ ಮಾಡುವ ಮೊದಲು ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದರ ಬಗ್ಗೆ ಆತನಿಗೆ ಅರಿವಿರಲಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಎಸ್ ಗಿರೀಶ್ ತಿಳಿಸಿದ್ದಾರೆ. ಮುಕುಂದ್ ಖೌಂಡ್ ವಿರುದ್ಧ ಭಾರತೀಯ ಅಧಿಕೃತ ರಹಸ್ಯ ಕಾಯಿದೆ 1923 ಮತ್ತು IPC ಸೆಕ್ಷನ್ 418, 379 ಮತ್ತು 511 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com