ವೋಟರ್ ಐಡಿ ಅಕ್ರಮ: ಕೆಜಿಎಫ್ ಸೇಡಿನ ಕಥೆಯೂ ಅಲ್ಲ, ಕಾಂತಾರ ದಂತಕಥೆಯೂ ಅಲ್ಲ ಎಂದ ಸಿದ್ದರಾಮಯ್ಯ

ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಈ ಅಕ್ರಮದಲ್ಲಿ ಚಿಲುಮೆ ಹಾಗೂ ಹೊಂಬಾಳೆ ಹೆಸರು ಕೇಳಿಬಂದಿದ್ದು ಇದೀಗ ಸಚಿವ ಅಶ್ವತ್ಥ್ ನಾರಾಯಣ ಬಗ್ಗೆ ಅನುಮಾನ ಮೂಡಿಸಿದೆ. 
ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಈ ಅಕ್ರಮದಲ್ಲಿ ಚಿಲುಮೆ ಹಾಗೂ ಹೊಂಬಾಳೆ ಹೆಸರು ಕೇಳಿಬಂದಿದ್ದು ಇದೀಗ ಸಚಿವ ಅಶ್ವತ್ಥ್ ನಾರಾಯಣ ಬಗ್ಗೆ ಅನುಮಾನ ಮೂಡಿಸಿದೆ. 

ಹೊಂಬಾಳೆ ಫಿಲ್ಮಂ ಸಂಸ್ಥೆಯು ಅಶ್ವತ್ಥ್ ನಾರಾಯಣ ಅವರ ಸಂಬಂಧಿ ವಿಜಯ್ ಕುಮಾರ್ ಅವರದ್ದಾಗಿದ್ದು ಈ ಹೊಂಬಾಳೆ ಫಿಲ್ಮಸ್ ಬ್ಯಾನರ್ ನಲ್ಲಿ ರಾಜಕುಮಾರ, ಕೆಜಿಎಫ್ ಹಾಗೂ ಕಾಂತಾರದಂತ ಬ್ಲಾಕ್ ಬಸ್ಟರ್ ಚಿತ್ರಗಳು ನಿರ್ಮಾಣವಾಗಿತ್ತು. ಮತದಾರರ ಪಟ್ಟಿಯ ವಿವಾದದಲ್ಲಿ ಹೊಂಬಾಳೆ ಹೆಸರು ಮುನ್ನಲೆಗೆ ಬಂದಿದ್ದರಿಂದ ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಛಾಟಿ ಬೀಸಿದ್ದಾರೆ.

'ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್ ನ ಸೇಡಿನ ಕಥೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ, ಪಂಜುರ್ಲಿಯ ದಂತಕಥೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ ಅದನ್ನೇ ಮಾಡಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ಈ ಟ್ವೀಟ್ ಭಾರೀ ವೈರಲ್ ಆಗಿದೆ. 

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮ ಸಂಬಂಧ ಮಲ್ಲೇಶ್ವರಂ ಚಿಲುಮೆ ಸಂಸ್ಥೆಯ ಮೇಲೆ ಹಲಸೂರು ಗೇಟ್ ಪೊಲೀಸರು ದಾಳಿ ನಡೆಸಿದ್ದು ನಾಲ್ವರನ್ನು ವಶಕ್ಕೆ ಪಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com