ದತ್ತ ಜಯಂತಿಗೆ ಸಜ್ಜುಗೊಂಡ ಚಿಕ್ಕಮಗಳೂರು

ಚಿಕ್ಕಮಗಳೂರನಲ್ಲಿ ಡಿ.6ರಿಂದ ಮೂರು ದಿನಗಳ ಕಾಲ ದತಿತ ಜಯಂತಿ ನಡೆಯಲಿದ್ದು, ದತ್ತ ಜಯಂತಿಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಮಂಡಳಿಯ ಅಧಿಕಾರಿಗಳು ಸಿದ್ಧತೆಗಳನ್ನು ನಡೆಸಿದ್ದಾರೆ.
Chikkamagaluru
Chikkamagaluru

ಚಿಕ್ಕಮಗಳೂರು: ಚಿಕ್ಕಮಗಳೂರನಲ್ಲಿ ಡಿ.6ರಿಂದ ಮೂರು ದಿನಗಳ ಕಾಲ ದತಿತ ಜಯಂತಿ ನಡೆಯಲಿದ್ದು, ದತ್ತ ಜಯಂತಿಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಮಂಡಳಿಯ ಅಧಿಕಾರಿಗಳು ಸಿದ್ಧತೆಗಳನ್ನು ನಡೆಸಿದ್ದಾರೆ.

ದತ್ತ ಜಯಂತಿಯನ್ನು ಸಂಘಪರಿವಾರದ ಪ್ರಾಯೋಜಿಸುತ್ತಿದ್ದು, ಡಿ.6ರಂದು ಮಹಿಳಾ ಭಕ್ತರಿಂದ ಅನಸೂಯಾ ಜಯಂತಿ ಹಾಗೂ ಸಂಕೀರ್ತನಾ ಯಾತ್ರೆ ನಡೆಯಲಿದೆ. ಮರುದಿನ ನಗರದಲ್ಲಿ ಶೋಭಾ ಯಾತ್ರೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ.

ದತ್ತ ಪೀಠದಲ್ಲಿ ದತ್ತ ಜಯಂತಿ ಆಚರಣೆಗಳಾದ ಹೋಮ, ಪಾದುಕೆ, ದತ್ತ ಪಾದುಕಾ ದರ್ಶನ ಹಾಗೂ ಧಾರ್ಮಿಕ ಮುಖಂಡರ ಸಮಾವೇಶ ನಡೆಯಲಿದೆ.

ದತ್ತ ಜಯಂತಿ ಹಿನ್ನೆಲೆಯಲ್ಲಿ ನಿನ್ನೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಪೂರ್ವಭಾವಿ ಸಭೆ ನಡೆಸಿದರು. ಈ ವೇಳೆ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರು ಮತ್ತು ಮುಖಂಡರು, ಅವರು ಹೋಗುವ ಮಾರ್ಗಗಳು ಮತ್ತು ನಿರೀಕ್ಷಿತ ವಾಹನಗಳ ಸಂಖ್ಯೆ ಮುಂತಾದ ವಿವರಗಳನ್ನು ನೀಡುವಂತೆ ಸಂಘಟಕರಿಗೆ ಸೂಚಿಸಿದರು.

ಇದೇ ವೇಳೆ ದತ್ತ ಜಯಂತಿಯಲ್ಲಿ ಪಾಲ್ಗೊಳ್ಳುವ ಜನರಿಗೆ ಕುಡಿಯುವ ನೀರು, ತಾತ್ಕಾಲಿಕ ಆಸ್ಪತ್ರೆಗಳು ಮತ್ತು ಪಾರ್ಕಿಂಗ್ ವಲಯದಂತಹ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ದೇಗುಲದಲ್ಲಿ ಸ್ವಚ್ಛತೆ ಕಾಪಾಡಲಾಗುವುದು. ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಧಾರಕ್ಕೆ ಹೋಗುವ ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು ಎಂದು ತಿಳಿಸಿದರು.

ಭಕ್ತರ ಅನುಕೂಲಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡುವಂತೆ ಕೆಎಸ್‌ಆರ್‌ಟಿಸಿ ಮತ್ತು ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದರು. ಪೊಲೀಸ್ ಇಲಾಖೆಗೆ ಎಲ್ಲ ರೀತಿಯ ಭದ್ರತೆ ಒದಗಿಸುವಂತೆ ಸೂಚಿಸಿದರು.

ಏತನ್ಮಧ್ಯೆ, ಗುಹಾ ದೇಗುಲದಲ್ಲಿನ ಧಾರ್ಮಿಕ ಕ್ರಿಯೆಗಳ ಮೇಲ್ವಿಚಾರಣೆಗಾಗಿ ಸರ್ಕಾರವು ಮುಸ್ಲಿಂ ಸದಸ್ಯ ಸೇರಿದಂತೆ ಎಂಟು ಸದಸ್ಯರ ವ್ಯವಸ್ಥಾಪಕ ಸಮಿತಿಯನ್ನು ರಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com