ರಾಜ್ಯ ಸರ್ಕಾರದಿಂದ 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟ

ರಾಜ್ಯ ಸರ್ಕಾರ 2023ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.
ವಿಧಾನ ಸೌಧ
ವಿಧಾನ ಸೌಧ

ಬೆಂಗಳೂರು: ರಾಜ್ಯ ಸರ್ಕಾರ 2023ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಸಾರ್ವತ್ರಿಕ ರಜಾದಿನದ ವೇಳಾಪಟ್ಟಿ ಮತ್ತು ಅಧಿಸೂಚನೆ ಇಲ್ಲಿದೆ
ಗಣರಾಜ್ಯೋತ್ಸವ(ಜ.26), ಮಹಾಶಿವರಾತ್ರಿ (ಫೆ.18), ಯುಗಾದಿ ಹಬ್ಬ (ಮಾರ್ಚ್ 22), ಮಹಾವೀರ ಜಯಂತಿ (ಏಪ್ರಿಲ್ 3), ಗುಡ್ ಫ್ರೈಡೆ (ಏಪ್ರಿಲ್ 7), ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ (ಏಪ್ರಿಲ್ 14), ಕಾರ್ಮಿಕರ ದಿನಾಚರಣೆ (ಮೇ 1), ಬಕ್ರೀದ್ (ಜೂನ್ 29), ಮೊಹರಂ ಕಡೇ ದಿನ (ಜುಲೈ 29), ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15), ವರಸಿದ್ಧಿ ವಿನಾಯಕ ವ್ರತ (ಸೆಪ್ಟೆಂಬರ್ 18), ಈದ್-ಮಿಲಾದ್ (ಸೆಪ್ಟೆಂಬರ್ 28), ಗಾಂಧಿ ಜಯಂತಿ (ಅಕ್ಟೋಬರ್ 2), ಮಹಾನವಮಿ,  ಆಯುಧಪೂಜೆ (ಅಕ್ಟೋಬರ್ 23), ವಿಜಯದಶಮಿ (ಅಕ್ಟೋಬರ್ 24), ಕನ್ನಡ ರಾಜ್ಯೋತ್ಸವ (ನವೆಂಬರ್ 1), ಬಲಿಪಾಡ್ಯಮಿ, ದೀಪಾವಳಿ  (ನವೆಂಬರ್ 14), ಕನಕ ಜಯಂತಿ (ನವೆಂಬರ್ 30), ಕ್ರಿಸ್ ಮಸ್ (ಡಿಸೆಂಬರ್ 25).

ಈ ರಜಾ ಪಟ್ಟಿಯಲ್ಲಿ ರವಿವಾರಗಳಂದು ಬರುವ ಮಕರ ಸಂಕ್ರಾಂತಿ (15.01.2023), ಬಸವ ಜಯಂತಿ/ಅಕ್ಷಯ ತೃತೀಯ (23.04.2023) ಮತ್ತು ನರಕ ಚತುರ್ದಶಿ (12.11.2023) ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (14.10.2023) ಹಾಗೂ ನಾಲ್ಕನೇ ಶನಿವಾರದಂದು ಬರುವ ಖುತುಬ್-ಎ-ರಂಜಾನ್ (22.04.2023) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ (28.10.2023) ಈ ರಜೆ ಪಟ್ಟಿಯಲ್ಲಿ ನಮೂದಿಸಲಾಗಿಲ್ಲ.

ಈ ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಕಛೇರಿಗಳು ಮುಚ್ಚಲಾಗುತ್ತದೆ. ಸರ್ಕಾರಿಯ ತ್ವರಿತ ಕೆಲಸಗಳನ್ನು ವಿಲೇವಾರಿ ಬಗ್ಗೆ ಆಯಾಯ ಇಲಾಖಾ ಮುಖ್ಯಸ್ಥರುಗಳು ತಕ್ಷಣ ಕ್ರಮವನ್ನು ತೆಗೆದುಕೊಳ್ಳಬೇಕು. ಈ ಪಟ್ಟಿಯಲ್ಲಿ ಮುಸಲ್ಮಾನ ಸಮುದಾಯದ ಹಬ್ಬಗಳು ನಿಗಧಿತ ದಿನಾಂಕದಲ್ಲಿ ಇರದಿದ್ದಾರೆ. ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ್ ನೌಕರರಿಗೆ ಅವರ ಹಬ್ಬದಂದು ರಜೆಯನ್ನು ನೀಡಬಹುದು.

ಇನ್ನು ಶಿಕ್ಷಣ ಇಲಾಖೆಗೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಚರ್ಚೆಯನ್ನು ನಡೆಸಿ ರಜಾ ದಿನಗಳ ಪಟ್ಟಿಯನ್ನು ಘೋಷಣೆ ಮಾಡಲಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com