ಹಾವೇರಿ: ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನ ಪ್ಲಾಸ್ಟಿಕ್ ಮುಕ್ತ, ಮರುಬಳಕೆಯ ವಸ್ತುಗಳನ್ನು ಬಳಸಲು ನಿರ್ಧಾರ

ಜನವರಿ 6 ರಿಂದ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನವು ಪ್ಲಾಸ್ಟಿಕ್ ಮುಕ್ತವಾಗಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ದೂರವಿಡುವ ಮೂಲಕ ಇದನ್ನು ಯಶಸ್ವಿಯಾಗಿಸಲು ಸಂಘಟನಾ ಸಮಿತಿ ಶ್ರಮಿಸುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು
Updated on

ಹಾವೇರಿ: ಜನವರಿ 6 ರಿಂದ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನವು ಪ್ಲಾಸ್ಟಿಕ್ ಮುಕ್ತವಾಗಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ 3 ರಿಂದ 4 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಪ್ಲಾಸ್ಟಿಕ್ ವಸ್ತುಗಳನ್ನು ದೂರವಿಡುವ ಮೂಲಕ ಇದನ್ನು ಯಶಸ್ವಿಯಾಗಿಸಲು ಸಂಘಟನಾ ಸಮಿತಿ ಶ್ರಮಿಸುತ್ತಿದೆ.

ಪ್ರಕೃತಿಯನ್ನು ಬೆಂಬಲಿಸಲು ಮತ್ತು ದೊಡ್ಡ ಕಾರ್ಯಕ್ರಮಗಳಿಂದ ಪ್ಲಾಸ್ಟಿಕ್ ಬಳಕೆಯನ್ನು ತೊಡೆದುಹಾಕಲು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಮರುಬಳಕೆ ಮಾಡಬಹುದಾದ ಉತ್ಪನ್ನಗಳನ್ನು ಬಳಸಲು ನಿರ್ಧರಿಸಿದೆ.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಎರಡು ವರ್ಷಗಳ ಬಳಿಕ ಹಾವೇರಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಹಾವೇರಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರವಾಗಿದ್ದು, ಎಲ್ಲಾ ಸಂಘಟನಾ ಸಮಿತಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿವೆ.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, 'ಕಾರ್ಯಕ್ರಮವು ಪ್ರಾಸ್ಟಿಕ್ ಮುಕ್ತವಾಗಲಿದೆ ಮತ್ತು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆಹಾರ ಕೌಂಟರ್‌ಗಳಲ್ಲಿ ನಾವು ಅಡಗೆ ಎಲೆಯಿಂದ ಮಾಡಿದ ಪ್ಲೇಟ್‌ಗಳು, ಚಮಚಗಳು ಮತ್ತು ಕಪ್‌ಗಳನ್ನು ಬಳಸುತ್ತಿದ್ದೇವೆ. ಈ ಹಿಂದಿನ ಸಮ್ಮೇಳನದಲ್ಲಿ ಆಹಾರವನ್ನು ಪ್ಲಾಸ್ಟಿಕ್ ಪ್ಲೇಟ್‌ಗಳಲ್ಲಿ ನೀಡಲಾಗುತ್ತಿತ್ತು. ಈ ಬಾರಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ನೀಡಲಾಗುತ್ತದೆ' ಎಂದು ಅವರು ಹೇಳಿದರು.

'ಹಾವೇರಿ ಕಾರ್ಯಕ್ರಮವು ಧೂಳು ಮುಕ್ತ ಸಮ್ಮೇಳನವಾಗಲು ಸಹ ಸಂಘಟಕರು ಕೆಲಸ ಮಾಡುತ್ತಿದ್ದಾರೆ. ಸಮ್ಮೇಳನದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ವಾಟರ್ ಸ್ಪ್ರೇಯರ್‌ಗಳನ್ನು ನಿಯೋಜಿಸಲಾಗುವುದು ಇದರಿಂದ ಧೂಳನ್ನು ತಪ್ಪಿಸಬಹುದು' ಎಂದು ಅವರು ಹೇಳಿದರು.

ಆರ್ಥಿಕ ಸಮಿತಿಯೊಂದಿಗೆ ಸಭೆ ನಡೆಸಿದ ನಂತರ ಜಿಲ್ಲಾಡಳಿತವು ಅಡಕೆ ತಟ್ಟೆಗಳ ಟೆಂಡ‌ರ್‌ಗಳನ್ನು ಪ್ರಾರಂಭಿಸುತ್ತದೆ. ಕಾರ್ಯಕ್ರಮ, ಆಹಾರ ಕೌಂಟರ್, ಬುಕ್‌ಸ್ಟಾಲ್‌ಗಳು ಮತ್ತು ಗೋಷ್ಠಿಗಳು ನಡೆಯುವ ಸ್ಥಳಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬ ಕುರಿತು ಸಭೆ ನಡೆಸಲಾಗುವುದು ಎಂದು ಸಂಘಟನಾ ಸಮಿತಿ ಸದಸ್ಯರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com