ಬೆಳಗಾವಿ ಗಡಿ ವಿವಾದ: ಕರ್ನಾಟಕದ ಬಸ್ಸುಗಳಿಗೆ ಕಪ್ಪು ಮಸಿ, ಮರಾಠಿಯಲ್ಲಿ ಬರೆದು ಪುಂಡಾಟಿಕೆ
ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರದಲ್ಲಿ ಮರಾಠಿ ಭಾಷಿಕರ ಪುಂಡಾಟಿಕೆ ಮತ್ತೆ ಆರಂಭವಾಗಿದೆ. ಗಡಿ ವಿವಾದ ಬಗ್ಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರದ ನಿಲುವುಗಳನ್ನು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಹೊರಹಾಕಿದ ಬೆನ್ನಲ್ಲೇ ಇಂದು ಪ್ರತಿಭಟನೆ ಆರಂಭಿಸಿರುವ ಮರಾಠ ಸಂಘದ ಸದಸ್ಯರು ಕರ್ನಾಟಕ ಬಸ್‌ಗೆ ಕಪ್ಪು ಮಸಿ ಬಳಿದಿದ್ದಾರೆ.
Published: 25th November 2022 12:54 PM | Last Updated: 25th November 2022 04:07 PM | A+A A-

ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಮರಾಠಿಯಲ್ಲಿ ಕಪ್ಪು ಬಣ್ಣದಲ್ಲಿ ಬರಹ
ಪುಣೆ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರದಲ್ಲಿ ಮರಾಠಿ ಭಾಷಿಕರ ಪುಂಡಾಟಿಕೆ ಮತ್ತೆ ಆರಂಭವಾಗಿದೆ. ಗಡಿ ವಿವಾದ ಬಗ್ಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರದ ನಿಲುವುಗಳನ್ನು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಹೊರಹಾಕಿದ ಬೆನ್ನಲ್ಲೇ ಇಂದು ಪ್ರತಿಭಟನೆ ಆರಂಭಿಸಿರುವ ಮರಾಠ ಸಂಘದ ಸದಸ್ಯರು ಕರ್ನಾಟಕ ಬಸ್‌ಗೆ ಕಪ್ಪು ಮಸಿ ಬಳಿದಿದ್ದಾರೆ.
ಈ ವೇಳೆ ಮಹಾರಾಷ್ಟ್ರ ನಮ್ಮ ಹಕ್ಕು ಯಾರಪ್ಪನದಲ್ಲ ಎಂದು ಘೋಷಣೆಯನ್ನೂ ಕೂಗಿದ್ದಾರೆ.ಮರಾಠಿ ಭಾಷಿಕ ಪುಂಡಾಟ ಮತ್ತೆ ಮಿತಿ ಮೀರಿದ್ದು, ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗೆ ಕಪ್ಪು ಮಸಿ ಬಳಿಯಲಾಗಿದೆ.ದೌಂಡ್ ಗ್ರಾಮದ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗೆ ಮಸಿ ಬಳೆದು ಪುಂಡಾಟಿಕೆ ಮೆರೆದಿದ್ದಾರೆ.
ನಿಪ್ಪಾಣಿ - ಔರಂಗಾಬಾದ್ ಮಧ್ಯೆ ಸಂಚರಿಸುವ ನಿಪ್ಪಾಣಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಮಸಿ ಬಳಿಯಲಾಗಿದೆ. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮ ಬಳಿ ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರಿಂದ ಮಸಿ ಬಳಿಯಲಾಗಿದೆ.
ಏಕೆ ಪ್ರತಿಭಟನೆ?: ಮಹಾರಾಷ್ಟ್ರದ ಜತ್ತ ತಾಲೂಕಿನ 40 ಗ್ರಾಮ ಕರ್ನಾಟಕಕ್ಕೆ ಸೇರಬೇಕೆಂದು ಠರಾವು ಹೊರಡಿಸಿದ್ದರು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಮಹಾರಾಷ್ಟ್ರ ನಮ್ಮ ಹಕ್ಕು ಯಾರಪ್ಪನದಲ್ಲ ಎಂದು ಘೋಷಣೆ ಕೂಗಿದ್ದಾರೆ. ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದರು.