ಪರಿಷ್ಕೃತ ಪಠ್ಯಗಳ ಮರು ಪರಿಷ್ಕರಣೆ: 70 ಸಾವಿರ ಬುಕ್ ಲೆಟ್ ಮುದ್ರಣ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಈಗ ಮತ್ತೆ ಸುದ್ದಿಯಲ್ಲಿದೆ. ಪರಿಷ್ಕೃತ ಪಠ್ಯಗಳಲ್ಲಿ ಉಂಟಾಗಿದ್ದ ದೋಷಗಳನ್ನು ಸರಿಪಡಿಸಿ ಅಂತಿಮಗೊಳಿಸಲಾಗಿದೆ.
ಪುಸ್ತಕ (ಸಂಗ್ರಹ ಚಿತ್ರ)
ಪುಸ್ತಕ (ಸಂಗ್ರಹ ಚಿತ್ರ)

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಈಗ ಮತ್ತೆ ಸುದ್ದಿಯಲ್ಲಿದೆ. ಪರಿಷ್ಕೃತ ಪಠ್ಯಗಳಲ್ಲಿ ಉಂಟಾಗಿದ್ದ ದೋಷಗಳನ್ನು ಸರಿಪಡಿಸಿ ಅಂತಿಮಗೊಳಿಸಲಾಗಿದ್ದು ಈ ಬುಕ್ ಲೆಟ್ ನ 70 ಸಾವಿರ ಪ್ರತಿಗಳನ್ನು ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ (ಕೆಟಿಬಿಎಸ್) ಮುದ್ರಣ ಮಾಡಿದೆ. 

ಈ ಮುದ್ರಿತ ಪ್ರತಿಗಳನ್ನು ರಾಜ್ಯಾದ್ಯಂತ 70 ಸಾವಿರ ಶಾಲೆಗಳಿಗೆ ಒಂದು ವಾರದ ಅವಧಿಯಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಕೆಟಿಬಿಎಸ್ ನ ಎಂಡಿ ಮಾದೇಗೌಡ ಎಂ.ಪಿ ತಿಳಿಸಿದ್ದಾರೆ.

ಇದೇ ವೇಳೆ ಶಾಲೆಗಳು ಪುನಾರಂಭಗೊಂಡು ನಾಲ್ಕು ತಿಂಗಳ ಬಳಿಕ, ಶಾಲೆಗಳಿಗೆ ಪರಿಷ್ಕೃತ ಪಠ್ಯಗಳನ್ನು ವಿತರಣೆ ಮಾಡಲಾಗಿದೆ ಎಂದು ಮಾದೇಗೌಡ ಹೇಳಿದ್ದಾರೆ.

ಶಿಕ್ಷಣ ಇಲಾಖೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಪಠ್ಯಗಳನ್ನು ಮುದ್ರಿಸಿದ್ದು, ಪರಿಷ್ಕೃತಗೊಂಡ ಪಠ್ಯಗಳಲ್ಲಿನ ದೋಷಗಳನ್ನು ತಿದ್ದುವುದಕ್ಕೆ ಹೆಚ್ಚುವರಿ 12 ಲಕ್ಷ ರೂಪಾಯಿ ವೆಚ್ಚವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com