ಭಾರತ್ ಜೋಡೋ ಯಾತ್ರೆ: ಮಂಡ್ಯದ ಜನರ ಹೃದಯ ಗೆಲ್ಲಲು ಸೋನಿಯಾ, ರಾಹುಲ್ ಗಾಂಧಿ ಪಾದಯಾತ್ರೆ

ಎರಡು ದಿನಗಳ ವಿರಾಮದ ಬಳಿಕ ಪಾಂಡವಪುರದ ಟಿ.ಎಸ್. ಛತ್ರದಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಒಕ್ಕಲಿಗ ಸಮುದಾಯದವರೇ ಅಧಿಕವಾಗಿರುವ ಜೆಡಿಎಸ್ ಭದ್ರಕೋಟೆಗೆ ಪ್ರವೇಶಿಸುತ್ತಿದ್ದಂತೆಯೇ ಕಾಂಗ್ರೆಸ್‌ಗೆ ಭರ್ಜರಿ ಪ್ರತಿಕ್ರಿಯೆ ಕಾದಿತ್ತು.
ಮಂಡ್ಯದಲ್ಲಿ ಗುರುವಾರ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ-ರಾಹುಲ್ ಗಾಂಧಿ
ಮಂಡ್ಯದಲ್ಲಿ ಗುರುವಾರ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ-ರಾಹುಲ್ ಗಾಂಧಿ
Updated on

ನಾಗಮಂಗಲ: ಎರಡು ದಿನಗಳ ವಿರಾಮದ ಬಳಿಕ ಪಾಂಡವಪುರದ ಟಿ.ಎಸ್. ಛತ್ರದಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಒಕ್ಕಲಿಗ ಸಮುದಾಯದವರೇ ಅಧಿಕವಾಗಿರುವ ಜೆಡಿಎಸ್ ಭದ್ರಕೋಟೆಗೆ ಪ್ರವೇಶಿಸುತ್ತಿದ್ದಂತೆಯೇ ಕಾಂಗ್ರೆಸ್‌ಗೆ ಭರ್ಜರಿ ಪ್ರತಿಕ್ರಿಯೆ ಕಾದಿತ್ತು. ಪುತ್ರ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಾಲ್ಗೊಂಡು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ಜೊತೆಗೆ, ಹಿರಿಯ ನಾಯಕರು, ರೈತರು, ಕಾರ್ಮಿಕ ವರ್ಗಗಳು, ಮಹಿಳೆಯರು ಮತ್ತು ಸಮಾಜದ ಎಲ್ಲಾ ವರ್ಗಗಳ ಜನರು ಯಾತ್ರೆಯಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸಿದರು.

ಪಕ್ಷದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್ ಮತ್ತು ಇತರರು ಸೋನಿಯಾ ಅವರೊಂದಿಗೆ ಹೆಜ್ಜೆ ಹಾಕಿದರು. ಸೋನಿಯಾ ತಮ್ಮ ವಯಸ್ಸು ಮತ್ತು ಅನಾರೋಗ್ಯದ ಪರಿಸ್ಥಿತಿಯನ್ನು ಲೆಕ್ಕಿಸದೆ, 10 ಕಿ.ಮೀ.ಗೂ ಹೆಚ್ಚು ದೂರ ಶಕ್ತಿಯುತವಾಗಿ ಮೆರವಣಿಗೆ ನಡೆಸಿದರು. ಈ ಮೂಲಕ ಆ ಪ್ರದೇಶದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದರು.

ಪಾಂಡವಪುರದ ಬೆಳ್ಳಾಲೆಯಲ್ಲಿ ಆರಂಭವಾದ ಯಾತ್ರೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಸುಮಾರು 8.5 ಕಿ.ಮೀ.ಗೂ ಹೆಚ್ಚು ದೂರ ನಡೆದು ಕರದಾಯ ಕೆರೆಯನ್ನು ತಲುಪಿದರು. ಯಾತ್ರೆಯಲ್ಲಿ ಭಾಗವಹಿಸಿದ್ದವರಿಗೆ ಅಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಪುನರಾರಂಭವಾದಾಗ, ಸಭೆ ನಡೆಸಲು ಭ್ರಮದೇವರಹಳ್ಳಿ ಗ್ರಾಮಕ್ಕೆ ತಲುಪಲು ಅವರು 9 ಕಿ.ಮೀ. ಕ್ರಮಿಸಿದರು.

ಈಮಧ್ಯೆ, ರಾಹುಲ್ ಗಾಂಧಿ ಅವರು ರೈತ ಸಮುದಾಯ ಮತ್ತು ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳೊಂದಿಗೆ ಸಂವಾದ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ರೈತರಿಗೆ ಅನುಕೂಲವಾಗುವ ದೀರ್ಘಕಾಲೀನ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಹೊರತರಲಿದೆ ಎಂದು ಭರವಸೆ ನೀಡಿದರು.

<strong>ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಖುಷಿಯಿಂದ ಹೆಜ್ಜೆ ಹಾಕಿದ ದೃಶ್ಯ</strong>
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಖುಷಿಯಿಂದ ಹೆಜ್ಜೆ ಹಾಕಿದ ದೃಶ್ಯ

ತಾಯಿ-ಮಗ ಒಟ್ಟಾಗಿ ಪಾದಯಾತ್ರೆ ನಡೆಸಿ ಜನಮನ ಗೆದ್ದಿದ್ದು, ಗ್ರಾಮಸ್ಥರಿಂದ ಪ್ರಶಂಸೆ ವ್ಯಕ್ತವಾಗಿದೆ. ಮುಂಬರುವ ಚುನಾವಣೆಯಲ್ಲಿ ಮತದಾರರು ಮಂಡ್ಯದಲ್ಲಿ ಪಕ್ಷದ ಭವಿಷ್ಯಕ್ಕೆ ಪುಷ್ಟಿ ನೀಡಬಹುದು ಎನ್ನಲಾಗಿದೆ.

150 ದಿನಗಳ ಪಾದಯಾತ್ರೆಯನ್ನು ನೆರೆಯ ತಮಿಳುನಾಡಿನ ಕನ್ಯಾಕುಮಾರಿಯಿಂದ ಸೆಪ್ಟೆಂಬರ್ 7 ರಂದು ಪ್ರಾರಂಭಿಸಲಾಯಿತು ಮತ್ತು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಈ ಯಾತ್ರೆ ಒಳಗೊಂಡಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ 3,570 ಕಿಮೀ ಪಾದಯಾತ್ರೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com