ನೂತನ ಕಾಂಗ್ರೆಸ್ ಅಧ್ಯಕ್ಷರು ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗಲ್ಲ- ರಾಹುಲ್ ಗಾಂಧಿ
ನೂತನ ಕಾಂಗ್ರೆಸ್ ಮುಖ್ಯಸ್ಥರು ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗುತ್ತಾರೆ ಎಂಬ ಸಲಹೆಗಳನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ತಳ್ಳಿ ಹಾಕಿದ್ದಾರೆ. ಈ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಅಪಾರ ತಿಳುವಳಿಕೆವುಳ್ಳವರಾಗಿದ್ದಾರೆ ಎಂದರು.
Published: 08th October 2022 03:36 PM | Last Updated: 08th October 2022 04:30 PM | A+A A-

ರಾಹುಲ್ ಗಾಂಧಿ ಸುದ್ದಿಗೋಷ್ಠಿ
ತುರುವೇಕೆರೆ: ನೂತನ ಕಾಂಗ್ರೆಸ್ ಮುಖ್ಯಸ್ಥರು ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗುತ್ತಾರೆ ಎಂಬ ಸಲಹೆಗಳನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ತಳ್ಳಿ ಹಾಕಿದ್ದಾರೆ. ಈ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಅಪಾರ ತಿಳುವಳಿಕೆವುಳ್ಳವರಾಗಿದ್ದಾರೆ ಎಂದರು.
ಭಾರತ್ ಜೋಡೋ ಯಾತ್ರೆ ವೇಳೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾತ್ರೆಯಲ್ಲಿ ನಾನೊಬ್ಬನೇ ಇಲ್ಲ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಅಸಮಾನತೆಯಿಂದ ರೋಸಿ ಹೋಗಿರುವ ಲಕ್ಷಾಂತರ ಜನರು ಹೆಜ್ಜೆ ಹಾಕುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬಿಜೆಪಿ, ಆರ್ ಎಸ್ಎಸ್ ದೇಶವನ್ನು ಒಡೆಯುತ್ತಿದೆ, ದ್ವೇಷ ಹರಡುವವರ ವಿರುದ್ಧ ನಮ್ಮ ಹೋರಾಟ: ರಾಹುಲ್ ಗಾಂಧಿ
ಮುಂದಿನ ಕಾಂಗ್ರೆಸ್ ಅಧ್ಯಕ್ಷರು ಗಾಂಧಿ ಕುಟುಂಬದಿಂದ ರಿಮೋಟ್ ಕಂಟ್ರೋಲ್ ಆಗುತ್ತಾರೆ ಎಂಬ ಟೀಕೆಗಳ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಕಣದಲ್ಲಿರುವ ಇಬ್ಬರು ದೂರದೃಷ್ಟಿ, ತಿಳುವಳಿಕೆ ವುಳ್ಳವರಾಗಿದ್ದಾರೆ. ಪಕ್ಷದ ಅಧ್ಯಕ್ಷರಾಗುವವರು ಎಂದಿಗೂ ರಿಮೋಟ್ ಕಂಟ್ರೋಲ್ ಆಗಲ್ಲ. ಹೀಗೆ ಇಲ್ಲ ಸಲ್ಲದ ಟೀಕೆ ಮಾಡುವ ಮೂಲಕ ಅವರಿಬ್ಬರನ್ನು ಅಪಮಾನಿಸಲಾಗುತ್ತಿದೆ ಎಂದರು.
Congress leader Rahul Gandhi addressing press meet in Turavekere in Tumkur district on Saturday@XpressBengaluru @NewIndianXpress @santwana99 @ShivascribeTNIE @vinodkumart5 @KannadaPrabha pic.twitter.com/vyllc4n8Db
— udayshankar S (@UdayUdayphoto2) October 8, 2022
ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ನಮ್ಮ ವಿರೋಧವಿದೆ. ಅದು ನಮ್ಮ ಇತಿಹಾಸ ಮತ್ತು ಸಂಪ್ರದಾಯವನ್ನು ನಾಶ ಮಾಡುತ್ತದೆ. ಶಿಕ್ಷಣ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಬೇಕಾಗಿದೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿಲ್ಲ. ಬಿಜೆಪಿ ಮತ್ತು ಆರ್ ಎಸ್ ಎಸ್ ಮಾಡುತ್ತಿರುವ ದೇಶ ವಿಭಜನೆ ವಿರುದ್ಧ ಜನರನ್ನು ಒಂದುಗೂಡಿಸಬೇಕಾಗಿದೆ ಎಂದು ಅವರು ಹೇಳಿದರು.