ಓಲಾ, ಉಬರ್ ಮತ್ತು ರಾಪಿಡೊ ಅಪ್ಲಿಕೇಷನ್ ನಲ್ಲಿ ಆಟೋರಿಕ್ಷಾ ಸೇರ್ಪಡೆ: ಸರ್ಕಾರ ಗರಂ; 5 ಸಾವಿರ ರೂ. ದಂಡ ವಿಧಿಸುವುದಾಗಿ ಎಚ್ಚರಿಕೆ

ಆ್ಯಪ್ ಆಧಾರಿತ ಕ್ಯಾಬ್ ಅಗ್ರಿಗೇಟರ್‌ಗಳಾದ ಓಲಾ, ಉಬರ್ ಮತ್ತು ರಾಪಿಡೊ ಆಟೋ ರಿಕ್ಷಾಗಳನ್ನು ತಮ್ಮ ಅಪ್ಲಿಕೇಷನ್ ನಲ್ಲಿ ಅಳವಡಿಸಿದ್ದಕ್ಕಾಗಿ ಸರ್ಕಾರ ಗರಂ ಆಗಿದೆ. ಅಲ್ಲದೆ ಅಪ್ಲಿಕೇಶನ್‌ಗಳನ್ನು ಬಳಸುವ ವಾಹನಗಳ ವಿರುದ್ಧ 5 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆ್ಯಪ್ ಆಧಾರಿತ ಕ್ಯಾಬ್ ಅಗ್ರಿಗೇಟರ್‌ಗಳಾದ ಓಲಾ, ಉಬರ್ ಮತ್ತು ರಾಪಿಡೊ ಆಟೋ ರಿಕ್ಷಾಗಳನ್ನು ತಮ್ಮ ಅಪ್ಲಿಕೇಷನ್ ನಲ್ಲಿ ಅಳವಡಿಸಿದ್ದಕ್ಕಾಗಿ ಸರ್ಕಾರ ಗರಂ ಆಗಿದೆ. ಅಲ್ಲದೆ ಅಪ್ಲಿಕೇಶನ್‌ಗಳನ್ನು ಬಳಸುವ ವಾಹನಗಳ ವಿರುದ್ಧ 5 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

ಆ್ಯಪ್ ಆಧಾರಿತ ಕ್ಯಾಬ್ ಅಗ್ರಿಗೇಟರ್‌ಗಳಾದ ಓಲಾ, ಉಬರ್ ಮತ್ತು ರಾಪಿಡೊ ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆಟೋ ರಿಕ್ಷಾಗಳನ್ನು ಅಳವಡಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರವು ಚಾಟಿ ಬೀಸಿದೆ ಮತ್ತು ಅಪ್ಲಿಕೇಶನ್‌ಗಳನ್ನು ಬಳಸುವ ವಾಹನಗಳ ವಿರುದ್ಧ ರೂ 5,000 ದಂಡವನ್ನು ವಿಧಿಸಲಾಗುವುದು ಎಂದು ಹೇಳಿದೆ. ಆಟೋ ರಿಕ್ಷಾಗಳು ಕರ್ನಾಟಕ ಆನ್-ಡಿಮಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ರೂಲ್ (ಕೋಟರ್), 2016 ರಲ್ಲಿ ಇಲ್ಲ ಎಂದು ಕಂಪೆನಿಗಳು ತಿಳಿದಿರಬೇಕು ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕ್ಯಾಬ್ ಅಗ್ರಿಗೇಟರ್‌ಗಳು ಆಟೋ ರಿಕ್ಷಾಗಳನ್ನು ನಡೆಸುವುದು ಕಾನೂನುಬಾಹಿರ ಎಂದು ಆರೋಪಿಸಿರುವ ಸಾರಿಗೆ ಇಲಾಖೆ, ಮುಂದಿನ ಆದೇಶದವರೆಗೆ ಕಾರ್ಯಾಚರಣೆ ನಡೆಸದಂತೆ ಸೂಚಿಸಿದೆ. ನಿಯಮ ಉಲ್ಲಂಘಿಸಿದ ವಾಹನಗಳನ್ನು ಸಾರಿಗೆ ಇಲಾಖೆ ವಶಪಡಿಸಿಕೊಳ್ಳುತ್ತಿದೆ. ಕಂಪೆನಿಗಳು ಅಪ್ಲಿಕೇಶನ್ ಗಳನ್ನು ಪ್ರಯಾಣಿಕರನ್ನು ಸಾಗಿಸಲು ಕಾನೂನುಬಾಹಿರವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿ, ಆಟೋ ಒಕ್ಕೂಟಗಳು ಪ್ರತಿಭಟನೆಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದೆ. 

ಓಲಾ, ಉಬರ್ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಅಹಮದ್ ಈ ಕ್ರಮವನ್ನು ಸ್ವಾಗತಿಸಿ ಸರ್ಕಾರವು ತನ್ನದೇ ಅಪ್ಲಿಕೇಶನ್ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರು ಆಟೋ ಚಾಲಕರ ಸಂಘಗಳು ಮತ್ತು ವೆಲ್ಫೇರ್ ಅಸೋಸಿಯೇಷನ್ಸ್ ಫೆಡರೇಶನ್ (BADUWAF) ಮುಖ್ಯಸ್ಥ ಎಂ ಮಂಜುನಾಥ್, ಸರ್ಕಾರವು ಆಟೋ ಚಾಲಕರ ಜೀವನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದಿದ್ದಾರೆ.

ಆಟೋ ರಿಕ್ಷಾಗಳಿಗೆ ಈಗಾಗಲೇ ಮೀಟರ್‌ಗಳನ್ನು ನಿಗದಿಪಡಿಸಲಾಗಿದೆ. ಪ್ರತಿ 2 ಕಿ.ಮೀಗೆ 30 ರೂಪಾಯಿಗಳನ್ನು ವಿಧಿಸಲಾಗುತ್ತದೆ, ಓಲಾ, ಉಬರ್ ಅಥವಾ ರಾಪಿಡೋ ಅಪ್ಲಿಕೇಶನ್‌ಗಳಲ್ಲಿ ಚಲಿಸುವ ಆಟೋಗಳಲ್ಲಿ, ಗ್ರಾಹಕರಿಗೆ 125 ರೂಪಾಯಿಗಿಂತ ಹೆಚ್ಚು ಶುಲ್ಕ ವಿಧಿಸುವ ನಿದರ್ಶನಗಳಿವೆ. ಹೀಗಾಗಿ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಇದರಿಂದ ಆಟೋ ಚಾಲಕರಿಗಾಗಲಿ, ಗ್ರಾಹಕರಿಗಾಗಲಿ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದ ಅವರು, ಈ ಕೊರತೆಯನ್ನು ನೀಗಿಸಲು ಸರಕಾರವು ತನ್ನದೇ ಆದ ಅಪ್ಲಿಕೇಷನ್ ಹೊಂದಿರಬೇಕು. ಅನೇಕರು ಆಟೋ ರಿಕ್ಷಾಗಳ ಮೇಲೆ ಅವಲಂಬಿತರಾಗಿರುವುದರಿಂದ ಸರ್ಕಾರವು ಆ್ಯಪ್‌ಗೆ ಮುಂದಾಗಬೇಕು. ಆಟೋಗಳು ಮನೆಬಾಗಿಲಿನಿಂದ ಗ್ರಾಹಕರನ್ನು ಕರೆದುಕೊಂಡು ಹೋಗುವುದರಿಂದ ಇದಕ್ಕೆ ಆದ್ಯತೆ ನೀಡುತ್ತಾರೆ ಎಂದು ಮಂಜುನಾಥ್ ಒತ್ತಾಯಿಸಿದರು.

ನಮ್ಮ ಸಂಘದಲ್ಲಿಯೇ ನಾವು 16,000 ಸದಸ್ಯರನ್ನು ಹೊಂದಿದ್ದೇವೆ ಮತ್ತು 90 ಪ್ರತಿಶತದಷ್ಟು ಜನರು ಅಪ್ಲಿಕೇಶನ್‌ಗಳನ್ನು ಅವಲಂಬಿಸಿರುತ್ತೇವೆ. ಈ ಕ್ರಮದಿಂದ ಅವರ ಜೀವನದ ಮೇಲೆ ಪರಿಣಾಮ ಬೀರಲಿದ್ದು, ಸರ್ಕಾರ ಪರಿಹಾರ ಕಂಡುಹಿಡಿಯಬೇಕು ಎಂದು ಮಂಜುನಾಥ್ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com