ಸೆರೆಸಿಕ್ಕ ಸಿಸಿಟಿವಿ ದೃಶ್ಯಾವಳಿಗಳು
ಸೆರೆಸಿಕ್ಕ ಸಿಸಿಟಿವಿ ದೃಶ್ಯಾವಳಿಗಳು

ಮುಂಡರಗಿ ಪುರಸಭೆಯಲ್ಲಿ ಮಧ್ಯರಾತ್ರಿ ಉತಾರ ಹಗರಣ ಆರೋಪ: ಸೆರೆಸಿಕ್ಕ ಸಿಸಿಟಿವಿ ದೃಶ್ಯಗಳಿಂದ ಮತ್ತಷ್ಟು ಅನುಮಾನ

ಜಿಲ್ಲೆಯ ಮುಂಡರಗಿ ಪುರಸಭೆ ಕಾರ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ.

ಗದಗ:ಜಿಲ್ಲೆಯ ಮುಂಡರಗಿ ಪುರಸಭೆ ಕಾರ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕಾರ್ಯಾಲಯದ ಕೆಲಸ ಕಾರ್ಯಗಳು ದಿನದಿಂದ ದಿನಕ್ಕೆ ಹದಗೆಡುತ್ತಿದ್ದು ಎಂದು ಆರೋಪಿಸಿ ಕಿಸಾನ್ ಜಾಗೃತಿ ವಿಕಾಸ ಸಂಘದ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಿನ್ನೆ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ಮಾಡಲಾಗಿತ್ತು.

ಮುಂಡರಗಿ ಪುರಸಭೆಯ ಕಾರ್ಯಾಲಯದಲ್ಲಿ ಖಾಸಗಿ ನಿವೇಶನ ಬಡಾವಣೆಗಳ ಉತಾರಗಳನ್ನು ರಾತ್ರೋರಾತ್ರಿ ಕಾರ್ಯಾಲಯದ ದ್ವಾರಬಾಗಿಲನ್ನು ತೆರೆದು ಪುರಸಭೆ ಚುನಾಯಿತ ಅಧ್ಯಕ್ಷರು, ಪುರಸಭೆ ಕಾರ್ಯಾಲಯದ ಸಿಬ್ಬಂದಿಗಳನ್ನು ಕರೆದುಕೊಂಡು ಖಾಸಗಿ ಮಾಲೀಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಭೂದಾಖಲೆ ಕೊಡಿಸುವ ವ್ಯವಸ್ಥೆ ನಡೆದಿದೆ ಎಂದು ಆರೋಪಿಸಲಾಗಿತ್ತು.

ಇದಕ್ಕೆ ಪುಷ್ಟಿ ಸಿಗುವಂತೆ ಕಾರ್ಯಾಲಯದ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಾವಳಿಗಳು ರಾತ್ರಿ ವೇಳೆಯಲ್ಲಿ ಅಧಿಕಾರಿಗಳು ಭೂ ದಾಖಲೆಗಳನ್ನು ಬದಲಾಯಿಸುತ್ತಿರುವ ಸಾಕ್ಷಿಗಳು ಸಿಕ್ಕಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com