ಪೋಕ್ಸೋ ಕೇಸಿನಡಿ ಜೈಲು ಸೇರಿದ ಮುರುಘಾ ಶರಣರು: ಹಂಗಾಮಿ ಪೀಠಾಧಿಪತಿಯಾಗಿ ಹೆಬ್ಬಾಳು ಮಠದ ಮಹಾಂತ ರುದ್ರಸ್ವಾಮಿ ನೇಮಕ

ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶಿವಾಚಾರ್ಯ ಮುರುಘಾ ಸ್ವಾಮೀಜಿ ಬಂಧನವಾಗಿದೆ. ಹಾಗೆಂದು ಮಠದ ದಿನನಿತ್ಯದ ಪೂಜೆ-ಪುನಸ್ಕಾರ, ಕೆಲಸ ಕಾರ್ಯ ವ್ಯವಹಾರಗಳು ನಿಲ್ಲುವ ಹಾಗಿಲ್ಲ. ಹೀಗಾಗಿ ಮುರುಘಾ ಮಠದ ವ್ಯಾಪ್ತಿಗೆ ಬರುವ ಹೆಬ್ಬಾಳು ಮಠದ ಮಹಾಂತ ರುದ್ರಸ್ವಾಮೀಜಿಗೆ ಮಠದ ಜವಾಬ್ದಾರಿಯನ್ನು ವಹಿಸಲಾಗಿದೆ.
ತ್ರದುರ್ಗದ ಮುರುಘಾ ಮಠಾಧೀಶ ಶಿವಮೂರ್ತಿ ಮುರುಘಾ ಶರಣರನ್ನು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ತ್ರದುರ್ಗದ ಮುರುಘಾ ಮಠಾಧೀಶ ಶಿವಮೂರ್ತಿ ಮುರುಘಾ ಶರಣರನ್ನು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶಿವಾಚಾರ್ಯ ಮುರುಘಾ ಸ್ವಾಮೀಜಿ ಬಂಧನವಾಗಿದೆ. ಹಾಗೆಂದು ಮಠದ ದಿನನಿತ್ಯದ ಪೂಜೆ-ಪುನಸ್ಕಾರ, ಕೆಲಸ ಕಾರ್ಯ ವ್ಯವಹಾರಗಳು ನಿಲ್ಲುವ ಹಾಗಿಲ್ಲ. ಹೀಗಾಗಿ ಮುರುಘಾ ಮಠದ ವ್ಯಾಪ್ತಿಗೆ ಬರುವ ಹೆಬ್ಬಾಳು ಮಠದ ಮಹಾಂತ ರುದ್ರಸ್ವಾಮೀಜಿಗೆ ಮಠದ ಜವಾಬ್ದಾರಿಯನ್ನು ವಹಿಸಲಾಗಿದೆ.

ಮಹಾಂತ ರುದ್ರಸ್ವಾಮೀಜಿ ಅವರು ಮಠದ ಹಂಗಾಮಿ ಮುಖ್ಯಸ್ಥರಾಗಿ ಮಠದ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ. ಮಠದ ಶಿಕ್ಷಣ ಸಂಸ್ಥೆಗಳು, ಕಾರ್ಯಕ್ರಮಗಳು, ಸಮಾಜ ಸೇವಾ ಉಪಕ್ರಮಗಳು ಮತ್ತು ಇತರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಾರೆ.

ಮುರುಘಾ ಮಠ ಶಾಲೆಗಳು ಮತ್ತು ಕಾಲೇಜುಗಳನ್ನು ನಡೆಸುತ್ತದೆ, ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತದೆ. ಹೆಚ್ಚಿನ ಸಂಖ್ಯೆಯ ಆಸ್ತಿಗಳನ್ನು ಹೊಂದಿದೆ, ಅವುಗಳನ್ನು ರಕ್ಷಿಸಬೇಕಾಗಿದೆ ಎಂದು ಮಠದ ಮೂಲಗಳು ಹೇಳುತ್ತವೆ. 

ಮುರುಘಾ ಮಠದ ಶಾಖೆಯಾದ ಹೆಬ್ಬಾಳು ರುದ್ರಸ್ವಾಮಿ ಮಠದ ಉಸ್ತುವಾರಿ ವಹಿಸಿರುವ ಮಹಾಂತ ರುದ್ರಸ್ವಾಮೀಜಿ ಅವರ ಹಿರಿತನವನ್ನು ಪರಿಗಣಿಸಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಸಮಾಜ ಸೇವಕ ಅನಿತ್ ಕುಮಾರ್ ಜಿಎಸ್ ಅವರನ್ನು ಸ್ವಾಮೀಜಿಗಳ ಆಪ್ತ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com