ಉಡುಪಿ: ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ; ಪತ್ರಕರ್ತನಿಗೆ 10 ವರ್ಷ ಜೈಲು ಶಿಕ್ಷೆ

2018ರಲ್ಲಿ ಉಡುಪಿಯಲ್ಲಿ ಆಘಾತಕ್ಕೆ ಕಾರಣವಾಗಿದ್ದ 21 ಶಾಲಾ ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪತ್ರಕರ್ತನಿಗೆ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉಡುಪಿ: 2018ರಲ್ಲಿ ಉಡುಪಿಯಲ್ಲಿ ಆಘಾತಕ್ಕೆ ಕಾರಣವಾಗಿದ್ದ 21 ಶಾಲಾ ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪತ್ರಕರ್ತನಿಗೆ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 

ಆರೋಪಿ 44 ವರ್ಷದ ಚಂದ್ರ ಹೆಮ್ಮಾಡಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇನ್ನು ಉಡುಪಿಯ ಪೋಕ್ಸೋ ಫಾಸ್ಟ್ ಟ್ರ್ಯಾಕ್ ಕೋರ್ಟ್ ಪ್ರಕರಣ ಸಂಬಂಧ ಆರೋಪಿಗೆ 1000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಚಂದ್ರ ಹೆಮ್ಮಾಡಿಯನ್ನು 2018ರ ನವೆಂಬರ್ 29ರಂದು ಬಂಧಿಸಲಾಯಿತು. ಸದ್ಯಕ್ಕೆ ಅವರ ವಿರುದ್ಧ ದಾಖಲಾಗಿರುವ 21 ಪ್ರಕರಣಗಳ ಪೈಕಿ 11 ಪ್ರಕರಣಗಳಲ್ಲಿ ಅವರು ದೋಷಿಯಾಗಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಎಂಟು ಪ್ರಕರಣಗಳಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ. ಉಳಿದಿರುವ ಎರಡು ಪ್ರಕರಣಗಳ ತೀರ್ಪನ್ನು ನ್ಯಾಯಾಲಯ ಇಂದು ಪ್ರಕಟಿಸುವ ನಿರೀಕ್ಷೆಯಿದೆ. ಚಂದ್ರು 2014ರಿಂದ 10ರಿಂದ 15 ವರ್ಷದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಚಂದ್ರು ತಮ್ಮ ಪತ್ರಿಕೆಗೆ ಗ್ರಾಮೀಣ ವರದಿ ಮಾಡುವ ನೆಪದಲ್ಲಿ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡುತ್ತಿದ್ದರು. ಚಂದ್ರುವಿನ ಸ್ವಭಾವ ಅರಿಯದ ಪಾಲಕರು ಜಿಲ್ಲೆಯ ಒಳಹೊರಗನ್ನು ತೋರಿಸುತ್ತೇನೆ ತಮ್ಮ ಮಕ್ಕಳನ್ನು ಆತನೊಂದಿಗೆ ಕಳುಹಿಸುತ್ತಿದ್ದರು. ಈ ವೇಳೆ ಚಂದ್ರು ಮಕ್ಕಳನ್ನು ಏಕಾಂತ ಪ್ರದೇಶಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡುತ್ತಿದ್ದರು.

ಚಂದ್ರು 10 ವರ್ಷಗಳಿಂದ ವಿವಿಧ ಪತ್ರಿಕೆ ಸಂಸ್ಥೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದರು. ಚಂದ್ರು ಮದುವೆಯಾಗಿದ್ದು, ಓರ್ವ ಮಗಳಿದ್ದಾಳೆ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ವೈ ಟಿ ರಾಘವೇಂದ್ರ ವಾದ ಮಂಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com