ಆರ್‌ಒವಿ ಯೋಜನೆಗೆ ಕೇಂದ್ರದ ಹಣವನ್ನು ಬಳಸಿಕೊಳ್ಳುವಲ್ಲಿ ರಾಜ್ಯಗಳು ವಿಫಲವಾಗಿವೆ: ನಿತಿನ್ ಗಡ್ಕರಿ

ಭಾರಿ ಮಳೆಯಿಂದಾಗಿ ಉಂಟಾಗಿರುವ ಹಾನಿಗಳನ್ನು ಪರಿಶೀಲಿಸಲು ಮತ್ತು ಹೆದ್ದಾರಿಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ನವೀನ ತಂತ್ರಜ್ಞಾನದೊಂದಿಗೆ ಹೊರಬರಲು ಪಾಲುದಾರರನ್ನು ಸಚಿವ ನಿತಿನ್ ಗಡ್ಕರಿ ಕೇಳಿದರು.
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ಬೆಂಗಳೂರು: ಕೇಂದ್ರ ರಸ್ತೆ ನಿಧಿಯನ್ನು (ಸಿಆರ್‌ಎಫ್) ಬಳಸಿಕೊಳ್ಳುವಲ್ಲಿ ರಾಜ್ಯಗಳು ಹಿಂದುಳಿದಿವೆ. ಕೇವಲ ಆರು ರಾಜ್ಯಗಳು ಮಾತ್ರ 16,000 ಕೋಟಿ ವೆಚ್ಚದ ಆರ್‌ಒವಿ (Remotely Operated Vehicles) ಯೋಜನೆಗೆ ಸಹಿ ಹಾಕಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ಈ ನಿಧಿಯಲ್ಲಿ ರಾಜ್ಯಗಳು ಪಾಲನ್ನು ಹೊಂದಿವೆ ಮತ್ತು ಹಣಕಾಸು ಸಚಿವರು ಇದರ ಬಳಕೆಗೆ ಒಪ್ಪಿಗೆ ನೀಡಿದ್ದಾರೆ. ರಾಜ್ಯಗಳು ಇದರ ಮಾಲೀಕತ್ವವನ್ನು ತೆಗೆದುಕೊಳ್ಳಬೇಕು. ಏಕೆಂದರೆ ಅದು ಅಂತಿಮವಾಗಿ ಅವರಿಗೆ ಪ್ರಯೋಜನವನ್ನು ನೀಡುತ್ತದೆ' ಎಂದು ಸಲಹೆ ನೀಡಿದ ಅವರು, ಗುಣಾತ್ಮಕ ಸುಧಾರಣೆಗಳಿಗಾಗಿ ಎಲ್ಲಾ ಪಾಲುದಾರರ ನಡುವೆ ಸಹಯೋಗಕ್ಕೆ ಒತ್ತು ನೀಡಬೇಕು ಎಂದರು.

ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ‘ಮಂಥನ್-- ಐಡಿಯಾ ಟು ಆ್ಯಕ್ಷನ್’ ಉದ್ಘಾಟಿಸಿ ಮಾತನಾಡಿದ ಅವರು, 'ನಾವು ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಬೇಕು ಮತ್ತು ಗೊಂದಲದಲ್ಲಿ ಯೋಚಿಸಬಾರದು. ಎಲ್ಲಾ ಪಾಲುದಾರರು ಪರಸ್ಪರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಭವಿಷ್ಯದ ನೀತಿಗಳನ್ನು ಯೋಜಿಸುವುದರ ಮೇಲೆ ಪರಸ್ಪರ ಒಪ್ಪಿಗೆಯೊಂದಿಗೆ ಗಮನಹರಿಸಬೇಕು. ಹೀಗಾಗಿ ದೇಶದ ಸಾರಿಗೆಯನ್ನು ಭಾರತದಲ್ಲಿ ತಯಾರಿಸಿದ ಇಂಧನದಿಂದ ಮಾತ್ರ ನಡೆಸಲು ಸಹಾಯವಾಗುತ್ತದೆ. ಪ್ರಧಾನಿ ಮೋದಿಯವರು ಈ ದೇಶಕ್ಕಾಗಿ ಎರಡು ಕನಸುಗಳನ್ನು ಹೊಂದಿದ್ದಾರೆ. ಒಂದು ಆತ್ಮನಿರ್ಭರ ಭಾರತ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆ. ಇವುಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ' ಎಂದು ಹೇಳಿದರು.

ಭಾರಿ ಮಳೆಯಿಂದಾಗಿ ಉಂಟಾಗಿರುವ ಹಾನಿಗಳನ್ನು ಪರಿಶೀಲಿಸಲು ಮತ್ತು ಹೆದ್ದಾರಿಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ನವೀನ ತಂತ್ರಜ್ಞಾನದೊಂದಿಗೆ ಹೊರಬರಲು ಪಾಲುದಾರರನ್ನು ಗಡ್ಕರಿ ಕೇಳಿದರು.

ಲಾಗಿಸ್ಟಿಕ್ಸ್ ವೆಚ್ಚವನ್ನು ಶೇ 16 ರಿಂದ 10 ಕ್ಕೆ (ಚೀನಾ ಶೇ 10, ಯುರೋಪ್ ಶೇ 12) ಕಡಿಮೆ ಮಾಡಲು ಸಮಗ್ರ ವಿಧಾನ ಅತ್ಯಗತ್ಯ. ಬೆಳವಣಿಗೆಯ ಕೇಂದ್ರಗಳಾಗಿರುವ ಬಸ್ ಪೋರ್ಟ್‌ಗಳ ಪರಿಕಲ್ಪನೆಯು ಬೆಳೆಯುತ್ತಿದೆ ಮತ್ತು ಹೊಸ ತಂತ್ರಜ್ಞಾನಗಳೊಂದಿಗೆ ರಸ್ತೆ ಮೂಲಸೌಕರ್ಯವನ್ನು ಸುಧಾರಿಸುವಾಗ ವಿಭಿನ್ನ ಸಾರಿಗೆ ವಿಧಾನಗಳನ್ನು ಅಳವಡಿಸುವುದು ಕೂಡ ಅತ್ಯಗತ್ಯವಾಗಿದೆ. ಪರಿಸರ ಮತ್ತು ಅರಣ್ಯ ಸಚಿವಾಲಯದ ಜೊತೆಗೆ ಸಾರಿಗೆ ಸಚಿವಾಲಯವು ‘ಟ್ರೀ ಬ್ಯಾಂಕ್’ ಯೋಜನೆಯೊಂದಿಗೆ ಬಂದಿದ್ದು, ಇದರಲ್ಲಿ ಎನ್‌ಎಚ್‌ಎಐ ಹೆದ್ದಾರಿಗಳ ಉದ್ದಕ್ಕೂ ಮರಗಳನ್ನು ನೆಡಲಾಗುತ್ತದೆ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಗಡ್ಕರಿ ಮಾಹಿತಿ ನೀಡಿದರು.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಖಾತೆ ಸಚಿವ ಜನರಲ್ ಡಾ. ವಿ.ಕೆ. ಸಿಂಗ್, ಟೋಲ್ ಸಂಗ್ರಹಣೆ ಬೂತ್‌ಗಳನ್ನು ತೆಗೆದುಹಾಕುವ ಬಗ್ಗೆ ಸುಳಿವು ನೀಡಿದರು. ಬುದ್ಧಿವಂತ ಮತ್ತು ಸಮಗ್ರ ವ್ಯವಸ್ಥೆಯು ನಂಬರ್ ಪ್ಲೇಟ್‌ಗಳನ್ನು ಓದಬಹುದು ಮತ್ತು ಟೋಲ್ ಅನ್ನು ಕಿಲೋಮೀಟರ್ ಆಧಾರದ ಮೇಲೆ ವಿಧಿಸಬಹುದು' ಎಂದರು.

NHAI ಅಧ್ಯಕ್ಷೆ ಅಲ್ಕಾ ಉಪಾಧ್ಯಾಯ ಮಾತನಾಡಿ, 'ಮಂಥನ್, ರಸ್ತೆ ಸಾರಿಗೆ ಭವಿಷ್ಯವನ್ನು ಚರ್ಚಿಸುವ ಮತ್ತು ದೃಶ್ಯೀಕರಿಸುವ ವೇದಿಕೆಯಾಗಿದೆ. ಜೊತೆಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮತ್ತು ಉದ್ಯಮದ ನಡುವಿನ ಸಹಯೋಗವನ್ನು ಹುಟ್ಟುಹಾಕುತ್ತದೆ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com