ನಟಿ ಶ್ರೀಲೀಲಾ ತಾಯಿ ವಿರುದ್ಧ ಎಫ್ಐಆರ್: ಡಾ.ಸ್ವರ್ಣಲತಾ ಪರಾರಿ; ಬಂಧನಕ್ಕಾಗಿ ಬಲೆ ಬೀಸಿದ ಪೊಲೀಸರು

ಖ್ಯಾತ ರಾಜಕಾರಣಿಯೊಬ್ಬರಿಗೆ ಅಲಯನ್ಸ್ ಯೂನಿವರ್ಸಿಟಿಯ ವಿವಾದಿತ ಆಸ್ತಿ ಮಾರಾಟ ಮಾಡಲು ಯತ್ನಿಸಿ, ಯೂನಿವರ್ಸಿಟಿಯಲ್ಲಿ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡಿದ ಆರೋಪದ ಮೇಲೆ ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.
ಡಾ.ಸ್ವರ್ಣಲತಾ
ಡಾ.ಸ್ವರ್ಣಲತಾ

ಆನೇಕಲ್: ಖ್ಯಾತ ರಾಜಕಾರಣಿಯೊಬ್ಬರಿಗೆ ಅಲಯನ್ಸ್ ಯೂನಿವರ್ಸಿಟಿಯ ವಿವಾದಿತ ಆಸ್ತಿ ಮಾರಾಟ ಮಾಡಲು ಯತ್ನಿಸಿ, ಯೂನಿವರ್ಸಿಟಿಯಲ್ಲಿ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡಿದ ಆರೋಪದ ಮೇಲೆ ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ನೂರಾರು ಕೋಟಿ ರೂಪಾಯಿ ವ್ಯವಹಾರ ಮಾಡಲು ಹೋದ ಸ್ವರ್ಣಲತಾ ಅವರು ಇದೀಗ ಪೊಲೀಸ್​ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಸ್ವರ್ಣಲತಾ ಅವರು ಖ್ಯಾತ ರಾಜಕಾರಣಿಗೆ ಅಲಯನ್ಸ್ ವಿವಿ ಮಾರಾಟ ಮಾಡಿಸಲು ಮುಂದಾಗಿದ್ದರು.

ಈಗಾಗಲೇ ಯೂನಿವರ್ಸಿಟಿಯಿಂದ ಹೊರಬಿದ್ದಿರುವ ಮಧುಕರ್ ಅಂಗೂರ್​ರಿಂದ ಯುನಿವರ್ಸಿಟಿ ಮಾರಾಟಕ್ಕೆ ಸ್ವರ್ಣಲತಾ ಡೀಲ್ ಕುದುರಿಸಿದ್ದರು. ಆದ್ರೆ, ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಮಧುಕರ್​ರನ್ನು ಯೂನಿವರ್ಸಿಟಿಯಿಂದ ಹೊರಹಾಕಲಾಗಿದೆ

ಮಧುಕರ್ ಅಂಗೂರ್ ಅವರಿಂದ ಯುನಿವರ್ಸಿಟಿ ಮಾರಾಟಕ್ಕೆ ಸ್ವರ್ಣಲತಾ ಡೀಲ್ ಕುದುರಿಸಿದ್ದರು ಎಂದು ಹೇಳಲಾಗಿದ್ದು, ಮಧುಕರ್ ಮತ್ತು ಸ್ವರ್ಣಲತಾ ಗೂಂಡಾಗಳ ಜೊತೆ ವಿವಿಗೆ ನುಗ್ಗಿ ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಸೆ.10ರಂದು ಬಂದೂಕು ಹಿಡಿದ ಗೂಂಡಾಗಳ ಜೊತೆ ಸ್ವರ್ಣಲತಾ ವಿವಿಗೆ ನುಗ್ಗಿದ್ದರು ಎನ್ನಲಾಗುತ್ತಿದೆ.

ಈ ಕುರಿತು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿರುವ ವಿವಿ ರಿಜಿಸ್ಟಾರ್ ಡಾ. ನಿವೇದಿತಾ ಮಿಶ್ರಾ, ಸೆ.10 ರಂದು ಸ್ವರ್ಣಲತಾ ಮತ್ತು ಮಧುಕರ್ ಅಂಗೂರು ಜೊತೆಯಾಗಿ ಗೂಂಡಾಗಳ ಜೊತೆ ವಿವಿಗೆ ನುಗ್ಗಿದ್ದಾರೆ.

ಗೂಂಡಾಗಳ ಬಳಿ ಬಂದೂಕು ಕೂಡ ಇದ್ದವು. ವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಹೆದರಿಸುವಂತಹ ಮತ್ತು ಬಂದೂಕಿನಿಂದ ಶೂಟ್ ಮಾಡುವುದಾಗಿ ಹೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಮಧುಕರ್ ಬಂಧನವಾಗಿದ್ದು, ಆರೋಪಿ ನಂಬರ್ 2 ಆಗಿರುವ ಡಾ.ಸ್ವರ್ಣಲತಾ ಮಾತ್ರ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com