411 ಮರಗಳ ತೆರವಿಗೆ ಹೈಕೋರ್ಟ್ ಅನುಮತಿ: ಬೆಂಗಳೂರು ಮೆಟ್ರೋದ ವಿಮಾನ ನಿಲ್ದಾಣದ ಮಾರ್ಗದ ಅಡ್ಡಿ ನಿವಾರಣೆ

ಕೆಆರ್ ಪುರಂ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೂಲಸೌಕರ್ಯ ಕಾಮಗಾರಿಗೆ ಅಡ್ಡಿಯಾಗಿದ್ದ 411 ಮರಗಳನ್ನು ತೆರವುಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ಗೆ(ಬಿಎಂಆರ್‌ಸಿಎಲ್) ಹೈಕೋರ್ಟ್ ಒಪ್ಪಿಗೆ ನೀಡಿದೆ.
ಮೆಟ್ರೋ ಸಿಬ್ಬಂದಿ
ಮೆಟ್ರೋ ಸಿಬ್ಬಂದಿ

ಬೆಂಗಳೂರು: ಕೆಆರ್ ಪುರಂ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೂಲಸೌಕರ್ಯ ಕಾಮಗಾರಿಗೆ ಅಡ್ಡಿಯಾಗಿದ್ದ 411 ಮರಗಳನ್ನು ತೆರವುಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ಗೆ(ಬಿಎಂಆರ್‌ಸಿಎಲ್) ಹೈಕೋರ್ಟ್ ಒಪ್ಪಿಗೆ ನೀಡಿದೆ. 

ಇದೇ ವೇಳೆ ತೆರವುಗೊಳಿಸಿದ ಮರಗಳಿಗೆ ಪ್ರತಿಯಾಗಿ 4,110 ಸಸಿಗಳನ್ನು ಮಾರೇನಹಳ್ಳಿಯಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಏರೋ ಸ್ಪೇಸ್ ಪಾರ್ಕ್‌ನಲ್ಲಿ ನೆಡಲು ತೀರ್ಮಾನಿಸಲಾಗಿದೆ.

'ಕೆಂಪಾಪುರ ಮೆಟ್ರೋ ನಿಲ್ದಾಣ ಮತ್ತು ಬಾಗಲೂರು ಕ್ರಾಸ್(2ನೇ ಹಂತದ ಯೋಜನೆ) ನಡುವೆ 382 ಮರಗಳನ್ನು ಕಡಿಯಲು ಮತ್ತು ಅವುಗಳಲ್ಲಿ 29 ಮರಗಳನ್ನು ಸ್ಥಳಾಂತರಿಸಲು ನಮಗೆ ಹೈಕೋರ್ಟ್ ಅನುಮತಿ ನೀಡಿದೆ. ನಾವು ತೆರವುಗೊಳಿಸುವ ಮರಗಳ ಸಂಖ್ಯೆಗೆ ಹತ್ತು ಪಟ್ಟು ಸಸಿಗಳನ್ನು ನೆಡಲಾಗುವುದು ಎಂದು BMRCL ನ ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳು ಮತ್ತು IT ಜನರಲ್ ಮ್ಯಾನೇಜರ್ ದಿವ್ಯಾ ಹೊಸೂರ್ TNIEಗೆ ತಿಳಿಸಿದರು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಹೈಕೋರ್ಟ್ ಆದೇಶವು ಬಿಎಂಆರ್‌ಸಿಎಲ್ ಗೆ ತೆಗೆದುಹಾಕುವ ಮರಗಳ ಬದಲಿಗೆ ಸಾಕಷ್ಟು ಸಂಖ್ಯೆಯ ಮರಗಳನ್ನು ನೆಡವಂತೆ ಕರೆ ನೀಡಿದೆ. ಬಿಎಂಆರ್‌ಸಿಎಲ್‌ನ ವಿಮಾನ ನಿಲ್ದಾಣ ಯೋಜನೆಗೆ ಅಡ್ಡಿಯಾಗಿರುವ ಈ ಮರಗಳ ಕುರಿತು ಜುಲೈ 26ರಂದು ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಅಧಿಕೃತ ಜ್ಞಾಪಕ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಈ ಆದೇಶವಿದೆ ಎಂದು ದಿವ್ಯಾ ಹೇಳಿದರು.

ಮರಗಳಿರುವ ಕಾರಣ ಕೆಂಪಾಪುರ, ಹೆಬ್ಬಾಳ ಮತ್ತು ಬಾಗಲೂರು ಕ್ರಾಸ್ ನಿಲ್ದಾಣಗಳ ನಿರ್ಮಾಣದ ಮೇಲೆ ಪರಿಣಾಮ ಬೀರಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಂಪಾಪುರ ಇಂಟರ್ಚೇಂಜ್ ನಿಲ್ದಾಣವಾಗಿದ್ದು ಇಲ್ಲಿ ಕಾಮಗಾರಿಗೆ ತೊಂದರೆಯಾಗಿತ್ತು. ಅದು 3ನೇ ಹಂತ ಮತ್ತು ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತದೆ  ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com