ದೊಡ್ಡಬಳ್ಳಾಪುರ: ತನ್ನ ನೋಡಿ ನಾಯಿ ಬೊಗಳಿದ್ದಕ್ಕೆ ಆಕ್ರೋಶ; ಅಟ್ಟಾಡಿಸಿಕೊಂಡು ಹೋಗಿ ಗುಂಡಿಟ್ಟು ಕೊಂದ ಉದ್ಯಮಿ
ನಾಯಿ ತನ್ನ ನೋಡಿ ಬೊಗಳಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ ಏರ್ ಗನ್‍ನಿಂದ ಶೂಟ್ ಮಾಡಿದ್ದರಿಂದ ನಾಯಿ ಸಾವನ್ನಪ್ಪಿದೆ.
Published: 19th September 2022 08:41 AM | Last Updated: 19th September 2022 02:26 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಾಯಿ ತನ್ನ ನೋಡಿ ಬೊಗಳಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ ಏರ್ ಗನ್‍ನಿಂದ ಶೂಟ್ ಮಾಡಿದ್ದರಿಂದ ನಾಯಿ ಸಾವನ್ನಪ್ಪಿದೆ.
ಹಂದಿ ಸಾಕಣೆ ಮಾಡುವ ಕೃಷ್ಣಪ್ಪ ನಾಯಿ ಹಂತಕ. ದೊಡ್ಡ ಬಳ್ಳಾಪುರದ ಮಾದಗೊಂಡನಹಳ್ಳಿ ಗ್ರಾಮದ ಅಶೋಕ್ ಎಂಬುವರಿಗೆ ಸೇರಿದ ನಾಯಿ ‘ರಾಕಿ’ ಭಾನುವಾರ ಸಂಜೆ ನಡೆದುಕೊಂಡು ಹೋಗುತ್ತಿದ್ದ ಕೃಷ್ಣಪ್ಪನನ್ನು ನೋಡಿ ಬೊಗಳಿದೆ.
ಇದರಿಂದ ಕೋಪಗೊಂಡ ಕೃಷ್ಣಪ್ಪಮನೆಗೆ ಹೋಗಿ ಏರ್ ಗನ್ ತಂದು ನಾಯಿಗೆ 5 ಬಾರಿ ಗುಂಡು ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಡೆದ ನಂತರ ಆರೋಪಿ ಕೃಷ್ಣಪ್ಪ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: 7 ವರ್ಷದ ಬಾಲಕನ ಮೇಲೆ ಪಿಟ್ಬುಲ್ಸ್ ನಾಯಿಗಳ ದಾಳಿ; ತೀವ್ರ ಗಾಯ, ಮಾಲೀಕರಿಗೆ ಬಂಧನ ಭೀತಿ
ಈ ಸಂಬಂಧ ನಾಯಿ ಮಾಲೀಕ ಅಶೋಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ, ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಮತ್ತು ಐಪಿಸಿ ಸೆಕ್ಷನ್ 429 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.