ಅಕ್ಟೋಬರ್‌ನಲ್ಲಿ ನೈತಿಕ ಶಿಕ್ಷಣ ಕುರಿತು ಸಮಿತಿ ರಚನೆ: ಸಚಿವ ಬಿ.ಸಿ.ನಾಗೇಶ್
ನೈತಿಕ ಶಿಕ್ಷಣ ವಿಷಯದಲ್ಲಿ ಭಗವದ್ಗೀತೆ ಅಳವಡಿಸಲಾಗುತ್ತಿದೆ ಎಂಬ ವಿವಾದದ ಹೊರತಾಗಿ, ಪ್ರಸ್ತಕ ಶೈಕ್ಷಣಿಕ ವರ್ಷದಲ್ಲೇ ನೈತಿಕ ಶಿಕ್ಷಣವನ್ನು ಹೇಗೆ ಜಾರಿಗೆ ತರಬೇಕು ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
Published: 21st September 2022 03:29 PM | Last Updated: 21st September 2022 03:29 PM | A+A A-

ಬಿ.ಸಿ ನಾಗೇಶ್
ಬೆಂಗಳೂರು: ನೈತಿಕ ಶಿಕ್ಷಣ ವಿಷಯದಲ್ಲಿ ಭಗವದ್ಗೀತೆ ಅಳವಡಿಸಲಾಗುತ್ತಿದೆ ಎಂಬ ವಿವಾದದ ಹೊರತಾಗಿ, ಪ್ರಸ್ತಕ ಶೈಕ್ಷಣಿಕ ವರ್ಷದಲ್ಲೇ ನೈತಿಕ ಶಿಕ್ಷಣವನ್ನು ಹೇಗೆ ಜಾರಿಗೆ ತರಬೇಕು ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ಸಂಬಂಧ ಅಕ್ಟೋಬರ್‌ನಲ್ಲಿ ಸಮಿತಿ ರಚಿಸಲು ನಿರ್ಧರಿಸಿದೆ.
ನೈತಿಕ ಶಿಕ್ಷಣದ ಬಗ್ಗೆ ಶಿಫಾರಸು ಮಾಡುವ ತಜ್ಞರ ಸಮಿತಿಯನ್ನು ನಾವು ಅಕ್ಟೋಬರ್ ನಲ್ಲಿ ರಚಿಸುತ್ತೇವೆ. ಈ ಸಮಿತಿಯ ವರದಿಯ ಆಧಾರದ ಮೇಲೆ, ನೈತಿಕ ಶಿಕ್ಷಣದ ಅಡಿಯಲ್ಲಿ ಏನನ್ನು ಕಲಿಸಬೇಕು ಎಂಬುದರ ಬಗ್ಗೆ ನಾವು ನಿರ್ಧರಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರು ಹೇಳಿದ್ದಾರೆ.
ಇದನ್ನು ಓದಿ: 2,500 ಪ್ರೌಢ ಶಾಲಾ ಶಿಕ್ಷಕರ ನೇಮಕ- ಸಚಿವ ಬಿ.ಸಿ.ನಾಗೇಶ್
ನೈತಿಕ ಶಿಕ್ಷಣದ ಕುರಿತು ಅಕ್ಟೋಬರ್ ಮೊದಲ ವಾರದಲ್ಲಿ ವಿಚಾರ ಸಂಕಿರಣ ನಡೆಸಿ ಎಲ್ಲವನ್ನೂ ಅಂತಿಮಗೊಳಿಸಲಾಗುವುದು. ಇದರ ಫಲಿತಾಂಶದ ಮೇಲೆ, ತರಗತಿಗಳಲ್ಲಿ ಏನು ಕಲಿಸಬೇಕು ಎಂಬುದನ್ನು ನಿರ್ಧರಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಈ ಹಿಂದಿನ ವರ್ಷಗಳಲ್ಲಿ ನೈತಿಕ ಶಿಕ್ಷಣವನ್ನು ಕಲಿಸಲಾಗುತ್ತಿತ್ತು. ಶಿಕ್ಷಣದ ಮುಖ್ಯ ಉದ್ದೇಶ ಮಗುವಿನ ವ್ಯಕ್ತಿತ್ವ ನಿರ್ಮಾಣವಾಗಿದೆ. ಪೋಷಕರು ಸಹ ನೈತಿಕ ಶಿಕ್ಷಣದ ತರಗತಿಗಳನ್ನು ಬಯಸುತ್ತಾರೆ ಎಂದು ಸಚಿವರು ಹೇಳಿದ್ದಾರೆ.