14,762 ಕೋಟಿ ರೂ. ಪೂರಕ ಅಂದಾಜು ಮಂಡಿಸಿದ ಸಿಎಂ ಬೊಮ್ಮಾಯಿ, ಮಠಗಳಿಗೆ 400 ಕೋಟಿ ಹಂಚಿಕೆ
2022-23ನೇ ಸಾಲಿನ ಪೂರಕ ಅಂದಾಜನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ಮಠಗಳಿಗೆ ಬರೋಬ್ಬರಿ 400 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದಾರೆ.
Published: 22nd September 2022 07:11 PM | Last Updated: 22nd September 2022 07:11 PM | A+A A-

ಬಸವರಾಜ ಬೊಮ್ಮಾಯಿ
ಬೆಂಗಳೂರು: 2022-23ನೇ ಸಾಲಿನ ಪೂರಕ ಅಂದಾಜನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ಮಠಗಳಿಗೆ ಬರೋಬ್ಬರಿ 400 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದಾರೆ.
ಇಂದು ವಿಧಾನಸಭೆಯಲ್ಲಿ ಈ ಸಾಲಿನ ಮೊದಲ ಪೂರಕ ಅಂದಾಜು ಮಂಡಿಸಿದ ಸಿಎಂ ಬೊಮ್ಮಾಯಿ ಅವರು, ಸುಮಾರು 14,762 ಕೋಟಿ ರೂ.ಗಳ ಬೇಡಿಕೆ ಇದಾಗಿದ್ದು, ಯಾವ ಇಲಾಖೆಗೆ ಎಷ್ಟು ಮೊತ್ತ ಎಂಬ ವಿವರಣೆ ನೀಡಿದರು.
ಇದನ್ನು ಓದಿ: ಪೇ ಸಿಎಂ ಅಭಿಯಾನ: ನನ್ನ ಮತ್ತು ರಾಜ್ಯದ ಹೆಸರು ಕೆಡಿಸಲು ಷಡ್ಯಂತ್ರ ಎಂದ ಸಿಎಂ ಬೊಮ್ಮಾಯಿ
‘ರೈತ ವಿದ್ಯಾನಿಧಿ’ ಯೋಜನೆಗೆ 810 ಕೋಟಿ ರೂಪಾಯಿ, ಟ್ರಸ್ಟ್ ಮತ್ತು ಮಠಗಳಿಗೆ 400 ಕೋಟಿ ರೂಪಾಯಿ, ಟ್ಯಾಕ್ಸಿ ಚಾಲಕರ ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆ ವಿಸ್ತರಿಸಲು ಮತ್ತು ಆರೋಗ್ಯ ಸೌಲಭ್ಯಕ್ಕಾಗಿ ವಿಶೇಷ ಯೋಜನೆ ರೂಪಿಸಲು 10 ಕೋಟಿ ಒದಗಿಸಲಾಗಿದೆ.
ಯಾವ ಇಲಾಖೆಗೆ ಎಷ್ಟು ಮೊತ್ತ ಇಲ್ಲಿದೆ ಮಾಹಿತಿ
* ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 188 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 97 ಕೋಟಿ ರೂ..,
* ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 478 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 101 ಕೋಟಿ..,
* ಆರ್ಥಿಕ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 302, ಬಂಡವಾಳ ಲೆಕ್ಕದಲ್ಲಿ 1 ಕೋಟಿ ರೂ..
* ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 14.48 ಬಂಡವಾಳ ಲೆಕ್ಕದಲ್ಲಿ 3.37 ಕೋಟಿ ರೂ..
* ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 2673 ಕೋಟಿ, ಬಂಡವಾಳ ಲೆಕ್ಕದಲ್ಲಿ 1228 ಕೋಟಿ ರೂ..,
* ಮೂಲಸೌಕರ್ಯ ಅಭಿವೃದ್ಧಿಗೆ 73 ಕೋಟಿ..
* ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 1111 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 144 ಕೋಟಿ ರೂ..
* ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರಕ್ಕೆ ಸಂಬಂಧಿಸಿದ ವೆಚ್ಚಗಳಿಗೆ ರಾಜಸ್ವ ಲೆಕ್ಕದಲ್ಲಿ 120.98 ಕೋಟಿ ರೂ..
* ಸಹಕಾರಕ್ಕೆ ರಾಜಸ್ವ ಲೆಕ್ಕದಲ್ಲಿ 1.52 ಕೋಟಿ, ಬಂಡವಾಳ ಲೆಕ್ಕದಲ್ಲಿ 88.38 ಕೋಟಿ ರೂ..
* ಸಮಾಜ ಕಲ್ಯಾಣಕ್ಕೆ ರಾಜಸ್ವ ಲೆಕ್ಕದಲ್ಲಿ 1145 ಕೋಟಿ, ಬಂಡವಾಳ ಲೆಕ್ಕದಲ್ಲಿ 79 ಕೋಟಿ ರೂ..,
* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ರಾಜಸ್ವ ಲೆಕ್ಕದಲ್ಲಿ 843 ಕೋಟಿ, ಬಂಡವಾಳ ಲೆಕ್ಕದಲ್ಲಿ 21.33 ಕೋಟಿ ರೂ.ಗಳ..
* ಪ್ರವಾಸೋದ್ಯಮ ಮತ್ತು ಯುವ ಜನ ಸೇವೆಗಳಿಗೆ ರಾಜಸ್ವ ಲೆಕ್ಕದಲ್ಲಿ 43.92 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 10.42 ಕೋಟಿ ರೂ..
* ಆಹಾರ ಮತ್ತು ನಾಗರಿಕ ಸರಬರಾಜಿಗೆ ರಾಜಸ್ವ ಲೆಕ್ಕದಲ್ಲಿ 1.16 ಕೋಟಿ..,
* ಕಂದಾಯಕ್ಕೆ ರಾಜಸ್ವ ಲೆಕ್ಕದಲ್ಲಿ 836 ಕೋಟಿ, ಒಂಡವಾಳ ಲೆಕ್ಕದಲ್ಲಿ 20 ಕೋಟಿ ರೂ..
* ವಸತಿಗೆ ರಾಜಸ್ವ ಲೆಕ್ಕದದಲ್ಲಿ 350 ಕೋಟಿ ರೂ. ಮಂಜೂರು..
* ಶಿಕ್ಷಣಕ್ಕೆ ರಾಜಸ್ವ ಲೆಕ್ಕದಲ್ಲಿ 1261 ಕೋಟಿ, ಬಂಡವಾಳ ಲೆಕ್ಕದಲ್ಲಿ 111 ಕೋಟಿ ರೂ..
* ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ 53.79 ಕೋಟಿ ರೂಪಾಯಿಗಳನ್ನು ರಾಜಸ್ವ ಲೆಕ್ಕದಡಿ ಹಾಗೂ 37.59 ಕೋಟಿ ರೂಪಾಯಿಗಳನ್ನು ಬಂಡವಾಳ ಲೆಕ್ಕದಡಿ ಮಂಜೂರು..
* ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವೆಚ್ಚಗಳ ಸಂದಾಯಕ್ಕೆ ರಾಜಸ್ವ ಲೆಕ್ಕದಲ್ಲಿ 392.08 ಕೋಟಿ ರೂ..
* ಲೋಕೋಪಯೋಗಿ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 200 ಕೋಟಿ ರೂ..
* ಆರೋಗ್ಯ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 41.61 ಕೋಟಿ ರೂ. ಬಂಡವಾಳ ಲೆಕ್ಷದಲ್ಲಿ 45.62 ಕೋಟಿ..,
* ಕಾರ್ಮಿಕ ಮತ್ತು ಕೌಸಲ್ಯ ಅಭಿವೃದ್ಧಿಗೆ ರಾಜಸ್ವ ಲೆಕ್ಕದಲ್ಲಿ 207.47 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 4.30 ಕೋಟಿ ರೂ..
* ಇಂಧನಕ್ಕೆ 10 ಕೋಟಿ, ಕನ್ನಡ ಮತ್ತು ಸಂಸ್ಕೃತಿಗೆ ರಾಜಸ್ವ ಲೆಕ್ಕದಲ್ಲಿ 27.44 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 28 ಕೋಟಿ ರೂ..
* ಯೋಜನೆ ಸಾಂಖ್ಯಿಕ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ರಾಜಸ್ವ ಲೆಕ್ಕದಲ್ಲಿ 17.61 ಕೋಟಿ, ಬಂಡವಾಳ ಲೆಕ್ಕದಲ್ಲಿ 131.70 ಕೋಟಿ ರೂ..
* ಕಾನೂನಿಗೆ ರಾಜಸ್ವ ಲೆಕ್ಕದಲ್ಲಿ 32.41 ಕೋಟಿ, ಬಂಡವಾಳದ ಲೆಕ್ಕದಲ್ಲಿ 6.92 ಕೋಟಿ ರೂ..
* ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆಗೆ ರಾಜಸ್ವ ಲೆಕ್ಕದಲ್ಲಿ 58.50 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 1 ಕೋಟಿ ರೂ. ಮಂಜೂರು ಮಾಡಲಾಗಿದೆ.