ಅಂತಾರಾಷ್ಟ್ರೀಯ ಪುತ್ರಿಯರ ದಿನ: ತಮ್ಮ ಹೆಣ್ಣು ಮಕ್ಕಳ ಫೋಟೋ ಹಂಚಿಕೊಂಡು ಸಂಭ್ರಮಿಸಿದ ರಾಜಕೀಯ ನಾಯಕರು, ಗಣ್ಯರು

ಮನೆಯೊಂದು ನಗುತಿರಲು, ಮನೆಯಲ್ಲಿ ಬೆಳಕು ತುಂಬಿರಲು ಹೆಣ್ಣು ಮಗುವೊಂದು ಬೇಕು, ಮಗಳು ಎಂದರೆ ಮನೆಯ ಮಹಾಲಕ್ಷ್ಮೀ ಇದ್ದಂತೆ, ಮಗಳೆಂದರೆ ಮತ್ತೊಬ್ಬಳು ತಾಯಿ, ಅದರಲ್ಲೂ ಅಪ್ಪಂದಿರಿಗೆ ಹೆಣ್ಣು ಮಕ್ಕಳೆಂದರೆ ವಿಶೇಷ ಪ್ರೀತಿ, ಕಾಳಜಿ, ಹೆಣ್ಣು ಮಕ್ಕಳಿಗೂ ಅಷ್ಟೇ ಅಪ್ಪನೆಂದರೆ ಅಪಾರ ಪ್ರೀತಿ, ಗೌರವ, ಅಪ್ಪನೇ ಹೀರೋ.
ತಮ್ಮ ಪುತ್ರಿಯರ ಜೊತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರ ಪುತ್ರಿಯರ ದಿನ ಆಚರಿಸಲಾಗುತ್ತದೆ. ಮಗು ಹೆಣ್ಣಾಗಲಿ, ಗಂಡಾಗಲಿ ಮನೆಯೆಂದ ಮೇಲೆ ಮಕ್ಕಳಿರಬೇಕು, ಆಗ ಆ ಮನೆ ಕಳೆಕಟ್ಟಿರುತ್ತದೆ, ಸಂಸಾರ ಸಂತೋಷವಾಗಿ ಸುಖಮಯವಾಗಿರುತ್ತದೆ. ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಗಂಡು ಹೆಣ್ಣು ಮಕ್ಕಳಿಬ್ಬರೂ ಸಮಾನರು ಎಂಬುದನ್ನು ಸಾರುವ ದೃಷ್ಟಿಯಿಂದ ಶುರುವಾದ ಆಚರಣೆಯೇ ಮಗಳ ದಿನ. ಮಗಳೆಂದರೆ ಮಮಕಾರ, ಅಂತಃಕರಣ, ಸಹಾನುಭೂತಿ, ವಾತ್ಸಲ್ಯದ ಪ್ರತಿರೂಪ. ಇಂತಹ ಮುದ್ದು ಮಗಳೊಂದಿಗೆ ಪೋಷಕರು ಹೊಂದಿರುವ ವಿಶೇಷ ಸಂಬಂಧವನ್ನು ಆಚರಿಸುವ ದಿನ ಇದು. 

ಈ ಸುದಿನವನ್ನು ರಾಜಕೀಯ ನಾಯಕರು, ಗಣ್ಯರು, ಸೆಲೆಬ್ರಿಟಿಗಳು ತಮ್ಮ ಮತ್ತು ತಮ್ಮ ಪುತ್ರಿಯರ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ.ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮತ್ತು ಪುತ್ರಿಯರ ಫೋಟೋ ಹಂಚಿಕೊಂಡು, "ಹೆಣ್ಣು ಮಗುವಿಲ್ಲದ ಮನೆ, ಚಂದ್ರನಿಲ್ಲದ ಭಾನುವಿನಂತೆ." ಇಂದು ವಿಶ್ವ ಪುತ್ರಿಯರ ದಿನ. ನನ್ನ ಹೆಣ್ಣು ಮಕ್ಕಳಿಬ್ಬರೂ ನನ್ನ ಜೀವನದಲ್ಲಿ ಭಗವಂತ ನೀಡಿರುವ ಸಂತಸದ ಉಡುಗೊರೆಗಳು ಎಂದೇ ಹೇಳಬಹುದು. ಮನೆ ಬೆಳಗುವ ಎಲ್ಲಾ ಹೆಣ್ಣು ಮಕ್ಕಳಿಗೂ ವಿಶ್ವ ಪುತ್ರಿಯರ ದಿನದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಹೆಣ್ಣುಮಕ್ಕಳು ದೇವರ ವಿಶೇಷ ಕೊಡುಗೆ. ಅವರು ನಿಮ್ಮ ಜೀವನವನ್ನು ಸುಂದರವಾಗಿಸುವುದು ಮಾತ್ರವಲ್ಲ, ಅವರು ನಿಮಗೆ ವಿಶೇಷ ಭಾವನೆಯನ್ನುಂಟುಮಾಡುತ್ತಾರೆ. ಅವರು ತಂದೆಗೆ ಎಷ್ಟು ಅರ್ಥವನ್ನು ನೀಡುತ್ತಾರೆ ಎಂಬುದನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com