'ದಸರಾ ಜನ್ಮಸ್ಥಳವಾದ ಐತಿಹಾಸಿಕ ಹಂಪಿ ಮಹಾನವಮಿ ದಿಬ್ಬದ ಮೂಲ ಸ್ಮಾರಕ ನಿರ್ಲಕ್ಷ್ಯ'
ನಾಡಹಬ್ಬ ಎಂದೇ ಖ್ಯಾತವಾಗಿರುವ ಮೈಸೂರು ದಸರಾ ಆರಂಭವಾಗಿದ್ದು ಹಂಪಿಯಲ್ಲಿ , ಆದರೆ ಮೂಲ ದಸರಾ ಆರಂಭವಾದ ಮೂಲ ನಿವೇಶನವನ್ನೇ ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
Published: 27th September 2022 11:37 AM | Last Updated: 27th September 2022 02:06 PM | A+A A-

ಹಂಪಿಯ ಮಹಾನವಮಿ ದಿಬ್ಬ
ಹುಬ್ಬಳ್ಳಿ: ನಾಡಹಬ್ಬ ಎಂದೇ ಖ್ಯಾತವಾಗಿರುವ ಮೈಸೂರು ದಸರಾ ಆರಂಭವಾಗಿದ್ದು ಹಂಪಿಯಲ್ಲಿ , ಆದರೆ ಮೂಲ ದಸರಾ ಆರಂಭವಾದ ಮೂಲ ನಿವೇಶನವನ್ನೇ ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಮಹಾನವಮಿ ದಿಬ್ಬದ ಸ್ಮಾರಕವನ್ನು ಬೆಳಗಿಸಬೇಕು ಮತ್ತು ಅದರ ಹಿಂದಿನ ವೈಭವದ ಬಗ್ಗೆ ಜಾಗೃತಿ ಫಲಕಗಳನ್ನು ಪ್ರದರ್ಶಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ, 16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜರಿಂದ ನಿರ್ಮಿಸಲ್ಪಟ್ಟ ಮಹಾನವಮಿ ದಿಬ್ಬವು ರಾಜ ಮತ್ತು ಅವರ ಕುಟುಂಬವು ದಸರಾ ಮೆರವಣಿಗೆಯನ್ನು ವೀಕ್ಷಿಸುವ ಆಕರ್ಷಣೆಯ ಕೇಂದ್ರವಾಗಿತ್ತು.
ರಾಜ ತನ್ನ ಆನೆಯಿಂದ ರಾಜಮನೆತನದ ಇತರ ಸದಸ್ಯರು ದಸರಾ ಮೆರವಣಿಗೆಯನ್ನು ವೀಕ್ಷಿಸಲು ಈ ಮಹಾನವವಿ ದಿಬ್ಬದ ಮೇಲೆ ಸೇರುತ್ತಿದ್ದರು. ಹಂಪಿಯ ದಸರಾ ಮೆರವಣಿಗೆಯು ಇಂದಿನ ದಸರಾವನ್ನು ಹೋಲುತ್ತಿತ್ತು,
1565 ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ, ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದ ಮೈಸೂರಿನ ಒಡೆಯರು, ಮೈಸೂರಿನಲ್ಲಿ ಸಂಪ್ರದಾಯವನ್ನು ಮುಂದುವರೆಸಿದರು, ಇದನ್ನು ನಾಡ ಹಬ್ಬ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಕರ್ನಾಟಕದ ಹಂಪಿಗೆ ಶೀಘ್ರ ಪ್ರವಾಸೋದ್ಯಮ ವಿವರಣಾ ಕೇಂದ್ರ!
10 ದಿನಗಳ ಕಾಲ ದಸರಾ ನಡೆಯುವ ಮೈಸೂರಿಗೆ ಪ್ರತಿ ವರ್ಷ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಹಂಪಿಯ ಪುರಾತನ ಸಂಪ್ರದಾಯವನ್ನು ಜೀವಂತವಾಗಿಡಲು ಸರ್ಕಾರ ನವರಾತ್ರಿಯ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಂಪಿ ಕಾರ್ಯಕರ್ತರು ಹೇಳುತ್ತಾರೆ.
ಹಂಪಿಯ ಮಹಾನವಮಿ ದಿಬ್ಬ ದಸರಾ ಮೂಲ ಸ್ಥಳವಾಗಿರುವುದರಿಂದ ಸರ್ಕಾರ ಗುರುತಿಸಿ ಆಚರಿಸಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ವಿಜಯನಗರದ ಅರಸರ ಸಂಪ್ರದಾಯವನ್ನು ಮೈಸೂರು ಅರಸರು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ’ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದರು.
ಇದನ್ನೂ ಓದಿ: ಹಂಪಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಸ ಮಾಸ್ಟರ್ ಪ್ಲಾನ್: ಪ್ರತಿ ಗ್ರಾಮದಲ್ಲಿ 10 ಹೋಂ ಸ್ಟೇ!
ಈ ಹಿಂದೆ ದಸರಾ ಸಂದರ್ಭದಲ್ಲಿ ಸ್ಮಾರಕದಲ್ಲಿ ಆಚರಣೆಗಳನ್ನು ಆಯೋಜಿಸಲು ಯೋಜಿಸಲಾಗಿತ್ತು. ಆದರೆ 1513 ರಲ್ಲಿ ನಿರ್ಮಿಸಲಾದ ಸ್ಮಾರಕದ ಸೂಕ್ಷ್ಮ ರಚನೆಯಿಂದಾಗಿ ಇತಿಹಾಸಕಾರರ ಒಂದು ನಿರ್ದಿಷ್ಟ ವಿಭಾಗವು ಈ ಕಲ್ಪನೆಯನ್ನು ವಿರೋಧಿಸಿತು.
ಆದರೆ, ರಾಜ್ಯದಲ್ಲಿ ದಸರಾಕ್ಕೆ ಜನ್ಮ ನೀಡಿದ ಸ್ಮಾರಕವನ್ನು ಜನಪ್ರಿಯಗೊಳಿಸಲು ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳನ್ನು ಒಳಗೊಂಡ ಕಾರ್ಯಕ್ರಮಗಳು ಆಗಬೇಕು' ಎಂದು ಹಂಪಿ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.