ಕರ್ನಾಟಕದ ಹಂಪಿಗೆ ಶೀಘ್ರ ಪ್ರವಾಸೋದ್ಯಮ ವಿವರಣಾ ಕೇಂದ್ರ!

ವಿಜಯನಗರ ಜಿಲ್ಲಾಡಳಿತ ಹಂಪಿಯಲ್ಲಿ ಶೀಘ್ರ ಅತ್ಯಾಧುನಿಕ ಪ್ರವಾಸಿ ವ್ಯಾಖ್ಯಾನ ಅಥವಾ ವಿವರಣಾ ಕೇಂದ್ರ ನಿರ್ಮಿಸಲು ಮುಂದಾಗಿದೆ. 
ಹಂಪಿ ಮತ್ತು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಪಿ
ಹಂಪಿ ಮತ್ತು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಪಿ

ಹೊಸಪೇಟೆ: ವಿಜಯನಗರ ಜಿಲ್ಲಾಡಳಿತ ಹಂಪಿಯಲ್ಲಿ ಶೀಘ್ರ ಅತ್ಯಾಧುನಿಕ ಪ್ರವಾಸಿ ವ್ಯಾಖ್ಯಾನ ಅಥವಾ ವಿವರಣಾ ಕೇಂದ್ರ ನಿರ್ಮಿಸಲು ಮುಂದಾಗಿದೆ. 

ಹೌದು.. ಕರ್ನಾಟಕದ ವಿಶ್ವ ವಿಖ್ಯಾತ ಐತಿಹಾಸಿಕ ಪ್ರವಾಸಿ ತಾಣ ಹಂಪಿಯಲ್ಲಿ ಶೀಘ್ರ ಪ್ರವಾಸೋದ್ಯಮ ವಿವರಣಾ ಕೇಂದ್ರ ಸ್ಥಾಪಿಸಲು ಜಿಲ್ಲಾಡಳಿತ ಮುಂದಾಗಿದ್ದು, ಯೋಜನೆಗೆ ಸ್ಥಳೀಯ ಅಧಿಕಾರಿಗಳು ಅನುಮೋದನೆ ನೀಡಿದೆ. ಹೊಸ ಕಟ್ಟಡಕ್ಕೆ ಸ್ಥಳವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತ ತೊಡಗಿಸಿಕೊಂಡಿದೆ ಎನ್ನಲಾಗಿದೆ.

ಹಂಪಿಯ ವ್ಯಾಖ್ಯಾನ ಕೇಂದ್ರವು ಬಹುಕಾಲದ ಬೇಡಿಕೆಯಾಗಿತ್ತು. ಅಂತಹ ಒಂದು ಕಟ್ಟಡವನ್ನು ನಿರ್ಮಿಸಲು ಈ ಹಿಂದೆ ಸೂಕ್ತ ಪ್ರಯತ್ನಗಳು ರೂಪುಗೊಂಡಿರಲಿಲ್ಲ. ಆದರೆ ಈ ಬಾರಿ ಜಿಲ್ಲಾಡಳಿತವು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ಹಣವನ್ನು ಮೀಸಲಿಟ್ಟಿದ್ದು, ಶೀಘ್ರದಲ್ಲೇ ಕಟ್ಟಡದ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಈ ಕೇಂದ್ರವು ಹಂಪಿಯನ್ನು ಆಳಿದ ವಿಜಯನಗರ ಸಾಮ್ರಾಜ್ಯದ ವಿವರವಾದ ಇತಿಹಾಸವನ್ನು ಹೊಂದಿರುತ್ತದೆ ಮತ್ತು ಪ್ರಸ್ತುತ ಪ್ರವಾಸಿ ಆಕರ್ಷಣೆಗಳು, ಪ್ಯಾಕೇಜ್‌ಗಳು ಮತ್ತು ತುರ್ತು ಸಂಪರ್ಕಗಳ ಬಗ್ಗೆ ಮಾಹಿತಿಯನ್ನು ಹೊಂದಿರುತ್ತದೆ. ಈ ಹಿಂದೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಅಂತಹ ಒಂದು ವ್ಯಾಖ್ಯಾ ಅಥವಾ ವಿವರಣಾ ಕೇಂದ್ರವನ್ನು ತರಲು ಪ್ರಯತ್ನಗಳು ನಡೆದಿದ್ದವು. ಆದರೆ ಯೋಜನೆಯು ರೂಪುಗೊಂಡಿರಲಿಲ್ಲ. ಇದೀಗ ಕಮಲಾಪುರ ಹಾಗೂ ಹಂಪಿಯ ಇತರ ಪ್ರದೇಶಗಳಲ್ಲಿ ಸೂಕ್ತ ನಿವೇಶನಗಳಿಗಾಗಿ ಜಿಲ್ಲಾಡಳಿತ ಶೋಧ ನಡೆಸುತ್ತಿದೆ. 

ವಿಜಯನಗರ ಸಾಮ್ರಾಜ್ಯ ಮತ್ತು ಹಂಪಿ ಸ್ಮಾರಕಗಳ ನಿಖರ ಮಾಹಿತಿಯನ್ನು ಈ ಕೇಂದ್ರವು ನೀಡಲಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಪಿ ಹೇಳಿದ್ದಾರೆ. ವಿಜಯನಗರ ಸಾಮ್ರಾಜ್ಯದ ಜೊತೆಗೆ, ಹಂಪಿ ಸುತ್ತ ಆಳಿದ ಇತರ ರಾಜರ ಕಥೆಗಳನ್ನು ಸಹ ಪ್ರವಾಸಿಗರಿಗೆ ಒದಗಿಸಲಾಗುವುದು ಎಂದು ಅವರು ಹೇಳಿದರು.

"ವ್ಯಾಖ್ಯಾನ ಕೇಂದ್ರದ ನಿರ್ಮಾಣಕ್ಕಾಗಿ ನಾವು ಕೆಕೆಆರ್‌ಡಿಬಿ ಅಡಿಯಲ್ಲಿ 1 ಕೋಟಿ ರೂ ಹಣವನ್ನು ಕಾಯ್ದಿರಿಸಿದ್ದೇವೆ. ಜಿಲ್ಲಾಡಳಿತದ ತಂಡವು ಈಗಾಗಲೇ ಕಟ್ಟಡವನ್ನು ನಿರ್ಮಿಸಲು ಸೂಕ್ತ ಸ್ಥಳವನ್ನು ಹುಡುಕುತ್ತಿದೆ. ಕೇಂದ್ರವು ಸಂದರ್ಶಕರು ಪ್ರವಾಸಿಗರಿಗೆ ಪ್ರವೇಶವನ್ನು ಪಡೆಯಲು ಸಹಾಯ ಮಾಡುತ್ತದೆ. ಹಂಪಿ ಮತ್ತು ಅದರ ಆಡಳಿತಗಾರರ ಬಗ್ಗೆ ನಿಖರವಾದ ಮಾಹಿತಿ ನೀಡಲಿದೆ. ಹಂಪಿ ಸ್ಮಾರಕಗಳ ಸುತ್ತಲೂ ರಮಣೀಯವಾದ ಟ್ರೆಕ್ಕಿಂಗ್ ಮಾರ್ಗಗಳಿವೆ. ಅವುಗಳನ್ನು ಆಡಳಿತದ ತಂಡವು ಅನ್ವೇಷಿಸುತ್ತಿದೆ. ಈ ಎಲ್ಲಾ ಮಾಹಿತಿಯನ್ನು ಕೇಂದ್ರವು ಹೊಂದಿರುತ್ತದೆ ಎಂದು ಅವರು ಹೇಳಿದರು.

ಇನ್ನು ಹಂಪಿ ಪ್ರವಾಸಿ ಮಾರ್ಗದರ್ಶಕರು ವ್ಯಾಖ್ಯಾನ ಕೇಂದ್ರದ ಯೋಜನೆಯನ್ನು ಸ್ವಾಗತಿಸಿದ್ದು, ‘ಹಲವು ವರ್ಷಗಳಿಂದ ಹಂಪಿಗೆ ಭೇಟಿ ನೀಡುವ ಪ್ರವಾಸಿಗರು ಸರ್ಕಾರಿ ಕಚೇರಿಗಳನ್ನು ಮಾಹಿತಿಗಾಗಿ ವಿಚಾರಿಸುತ್ತಿದ್ದಾರೆ. ಹೊಸ ಕಟ್ಟಡವು ಪ್ರವಾಸಿಗರಿಗೆ ಸರಿಯಾದ ಮಾಹಿತಿ ಪಡೆಯಲು ಮತ್ತು ಹಂಪಿ ಪ್ರವಾಸಕ್ಕೆ ಕಾನೂನು ಮಾರ್ಗದರ್ಶಕರನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ ಎಂದು ಹಂಪಿಯ ಹಿರಿಯ ಪ್ರವಾಸಿ ಮಾರ್ಗದರ್ಶಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com