ಆರ್ ಎಸ್ ಎಸ್ ನಿಷೇಧಿಸಬೇಕೆಂದು ಕೇಳುವುದೇ ದುರ್ದೈವ, ಸಿದ್ದರಾಮಯ್ಯರ ಈ ಮಟ್ಟಕ್ಕೆ ಇಳಿಯಬಾರದಾಗಿತ್ತು: ಸಿಎಂ ಬೊಮ್ಮಾಯಿ

ಆರ್​ಎಸ್​ಎಸ್​ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ದೊಡ್ಡ ದುರ್ದೈವ, ಅವರ ಹೇಳಿಕೆಗೆ ಆಧಾರಗಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಆರ್​ಎಸ್​ಎಸ್​ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ದೊಡ್ಡ ದುರ್ದೈವ, ಅವರ ಹೇಳಿಕೆಗೆ ಆಧಾರಗಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿಯಾಗಿ, ವಿಪಕ್ಷ ನಾಯಕರಾಗಿ ಈ ಮಟ್ಟಕ್ಕೆ ಇಳಿಯಬಾರದಿತ್ತು. ಪಿಎಫ್​ಐ ಏಕೆ ನಿಷೇಧಿಸಿದರು ಎಂದು ಕೇಳಲು ಅವರಲ್ಲಿ ಆಧಾರಗಳಿಲ್ಲ. ಹಿಂದೆ ಅವರೇ ಪಿಎಫ್​ಐ ಮೇಲಿದ್ದ ಪ್ರಕರಣಗಳನ್ನು ಇವರೇ ಹಿಂಪಡೆದಿದ್ದರು. ಅದನ್ನು ಮರೆಮಾಚಲು ಆರ್​ಎಸ್​ಎಸ್​ ನಿಷೇಧಿಸಿ ಎಂದು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ದೇಶಪ್ರೇಮಿಗಳು ಹಾಗೂ ಬಡವರಿಗೆ ನೆರವಾಗುತ್ತಿರುವ ಸಂಘಟನೆ ಆರ್​ಎಸ್​ಎಸ್​. ದೇಶವು ಸಮಸ್ಯೆಗಳಿಗೆ ಸಿಲುಕಿದಾಗ ಆರ್​ಎಸ್​ಎಸ್​ ಹಲವು ರೀತಿಯಲ್ಲಿ ನೆರವಿಗೆ ಬಂದಿದೆ. ದೇಶದಲ್ಲಿ ದೇಶಪ್ರೇಮ ಜಾಗೃತಿ ಮಾಡುತ್ತಿರುವ ಸಂಘಟನೆಯನ್ನು, ದೀನದಲಿತರು, ಬಡಮಕ್ಕಳಿಗೆ, ಅನಾಥರಿಗೆ, ದೇಶದಲ್ಲಿ ಪ್ರಕೃತಿ ವಿಕೋಪವಾಗುವಾಗ ನಿಲ್ಲುವ ಸಂಘಟನೆಯನ್ನು ನಿಷೇಧಿಸಬೇಕು ಎನ್ನುವುದು ದುರ್ದೈವ ಎಂದರು.

ನಂತರ ಮುಖ್ಯಮಂತ್ರಿಗಳು ಕೃಷ್ಣಾ ನದಿಗೆ ಕಟ್ಟಿರುವ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com