ಪಾಳೇಗಾರಿಕೆಯ ನ್ಯಾಯ ಪಂಚಾಯಿತಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ ಸಿಪಿಎಂ ಆಗ್ರಹ

ಗ್ರಾಮೀಮ ಪ್ರದೇಶಗಳಲ್ಲಿ ಸಂವಿಧಾನ ಬಾಹಿರವಾಗಿ ಕೆಲಸ ಮಾಡುತ್ತಾ ದಲಿತರು ಮತ್ತು ಬಲಹೀನರ ಮೇಲೆ ದೌರ್ಜನ್ಯ ನಡೆಸುತ್ತಿರುವ ಪಾಳೇಗಾರಿಕೆಯ ನ್ಯಾಯ ಪಂಚಾಯ್ತಿಗಳನ್ನು ರದ್ದುಪಡಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಅವರು ಆಗ್ರಹಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಗ್ರಾಮೀಮ ಪ್ರದೇಶಗಳಲ್ಲಿ ಸಂವಿಧಾನ ಬಾಹಿರವಾಗಿ ಕೆಲಸ ಮಾಡುತ್ತಾ ದಲಿತರು ಮತ್ತು ಬಲಹೀನರ ಮೇಲೆ ದೌರ್ಜನ್ಯ ನಡೆಸುತ್ತಿರುವ ಪಾಳೇಗಾರಿಕೆಯ ನ್ಯಾಯ ಪಂಚಾಯ್ತಿಗಳನ್ನು ರದ್ದುಪಡಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಅವರು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗ್ರಾಮಗಳ ಪಂಚಾಯಿತಿಗಳಿಗೆ ಮೇಲ್ವರ್ಗದ ನಾಯಕರು ನೇತೃತ್ವ ವಹಿಸಿದ್ದು, ಇದರಿಂದ ಸಂವಿಧಾನ ಬಾಹಿರ ಆದೇಶ ಹಾಗೂ ಪ್ರಜಾಪ್ರಭುತ್ವ ವಿರೋಧಿ ವಾತಾವರಣ ನಿರ್ಮಾಣವಾಗಿದೆ. ಈ ಪಂಚಾಯತಿಗಳು ಉತ್ತರ ಭಾರತದ ಜಾಟ್ ಮತ್ತು ಖಾಪ್ ಪಂಚಾಯತಿಗಳನ್ನು ಹೋಲುತ್ತವೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಉಪ್ಪಾರ ಜನಾಂಗಕ್ಕೆ ಸೇರಿದ ಗೋವಿಂದರಾಜು 2018ರಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೂವಿನಕೊಪ್ಪಲು ಗ್ರಾಮದ ದಲಿತ ಮಹಿಳೆ ಶ್ವೇತಾ ಪಿ ಅವರನ್ನು ವಿವಾಹವಾಗಿದ್ದ ಘಟನೆಯನ್ನು ಕೃಷ್ಣೇಗೌಡ ಅವರು ಸ್ಮರಿಸಿದರು.

''ಕುಣಗಳ್ಳಿ ಗ್ರಾಮ ಪಂಚಾಯಿತಿ ಮುಖಂಡರು ಗೋವಿಂದರಾಜು ಕುಟುಂಬಕ್ಕೆ ಬಹಿಷ್ಕಾರ ಹಾಕಿ 3 ಲಕ್ಷ ರೂ ದಂಡ ವಿಧಿಸಿದ್ದರು. ನಂತರ ಕುಟುಂಬದವರು ನ್ಯಾಯಾಲಯದ ಮೊರೆ ಹೋದಾಗ, ಪೊಲೀಸರು ಗ್ರಾಮದ 15 ಜನರನ್ನು ಬಂಧನಕ್ಕೊಳಪಡಿಸಿದ್ದರು. ಇದೇ ಗ್ರಾಮದಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳಿದ್ದು, ದಂಪತಿಗಳು ಪಂಚಾಯತಿಗೆ ಹೆದರಿ ಗ್ರಾಮ ತೊರೆದು ಬೆಂಗಳೂರಿನಲ್ಲಿ ನೆಲೆಸಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com