ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿಗೆ ಸೇರಿದ ಇನೋವಾ ಕಾರನ್ನು ಫ್ಲೈಯಿಂಗ್ ಸ್ಕ್ವಾಡ್ ಹಾಗೂ ತಿಲಕನಗರ ಪೊಲೀರು ಗುರುವಾರ ವಶಕ್ಕೆ ಪಡೆದಿದ್ದಾರೆ.
ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ ಮೊಬೈಲ್ ಫೋನ್‌ಗಳು, ಸೀರೆಗಳು ಮತ್ತು ಬ್ಲೌಸ್ ಪೀಸ್‌ಗಳು ಪತ್ತೆಯಾಗಿವೆ.
ಇದರಂತೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರನ್ನು ಜಪ್ತಿ ಮಾಡಿದ್ದು, ಸದ್ಯ ಕಾರನ್ನು ತಿಲಕನಗರ ಠಾಣೆ ಆವರಣದಲ್ಲಿ ನಿಲುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಅಧಿಕಾರಿಗಳು ಇದೂವರೆಗೆ ರೂ.27,38,21,221 ನಗದು, ರೂ.26,38,67,100 ಮೌಲ್ಯದ 4,25,127 ಲೀಟರ್ ಮದ್ಯ, ರೂ.9,87,01,791 ಮೌಲ್ಯದ 25.24 ಕೆಜಿ ಚಿನ್ನ, ರೂ.12,48,57,991 ಮೌಲ್ಯದ ಇತರೆ ವಸ್ತುಗಳು ಸೇರಿ ಒಟ್ಟಾರೆ ರೂ.77,93,28,993 ಮೌಲ್ಯದ ವಸ್ತು, ನಗದುಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement