ಕೋವಿಡ್-ಇನ್‌ಫ್ಲೂಯೆಂಜಾ ಪ್ರಕರಣಗಳ ಏರಿಕೆ; ಚುನಾವಣಾ ರ‍್ಯಾಲಿಗಳು ಸೂಪರ್ ಸ್ಪ್ರೆಡರ್ ಆಗುವ ಸಾಧ್ಯತೆ; ಆರೋಗ್ಯ ಇಲಾಖೆ

ಕರ್ನಾಟಕವು ಕೋವಿಡ್ ಮತ್ತು ಇನ್‌ಫ್ಲೂಯೆಂಜಾ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಈ ಉಲ್ಬಣವು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕರ್ನಾಟಕವು ಕೋವಿಡ್ ಮತ್ತು ಇನ್‌ಫ್ಲೂಯೆಂಜಾ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಈ ಉಲ್ಬಣವು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ.

ಎಲ್ಲಾ ರಾಜಕೀಯ ಪಕ್ಷಗಳು ರಾಜ್ಯದಾದ್ಯಂತ ಮೆಗಾ ರ‍್ಯಾಲಿಗಳನ್ನು ನಡೆಸುತ್ತಿರುವುದು ಆರೋಗ್ಯ ಇಲಾಖೆಯ ಕೆಲಸವನ್ನು ಹೆಚ್ಚು ಕಷ್ಟಕರವಾಗಿಸಿದೆ. ಇಲಾಖೆಯು ಸಲಹೆಗಳನ್ನು ನೀಡಲು ಮಾತ್ರ ಸಮರ್ಥರಾಗಿದ್ದಾರೆ. ಆದರೆ, ಜನರು ಅವುಗಳನ್ನು ಅನುಸರಿಸಬೇಕು ಎಂದು ಮೂಲಗಳು ತಿಳಿಸಿವೆ.

ಚುನಾವಣೆ ನಡೆಯುವ ಮೇ 10 ಮತ್ತು ಫಲಿತಾಂಶ ಪ್ರಕಟವಾಗುವ ಮೇ 13 ರವರೆಗೆ ಸಾರ್ವಜನಿಕರನ್ನು ನಿಯಂತ್ರಿಸಲು ಯಾವುದೇ ಕಟ್ಟುನಿಟ್ಟಿನ ಕ್ರಮವನ್ನು ಪ್ರಾರಂಭಿಸುವುದು ಅಸಾಧ್ಯ. 'ನಾವು ಉತ್ತಮವಾದದ್ದನ್ನು ಆಶಿಸುತ್ತಿದ್ದೇವೆ ಮತ್ತು ಸಾಧ್ಯವಾದಷ್ಟು ಇದನ್ನು ತಪ್ಪಿಸಲು ನೋಡುತ್ತೇವೆ' ಎಂದು ಮೂಲಗಳು ತಿಳಿಸಿವೆ.

ಸುದ್ದಿಸಂಸ್ಥೆ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಮಣಿಪಾಲ್ ಆಸ್ಪತ್ರೆಯ ಎಚ್‌ಒಡಿ ಮತ್ತು ಶ್ವಾಸಕೋಶದ ಸಲಹೆಗಾರ ಡಾ. ಸತ್ಯನಾರಾಯಣ ಮೈಸೂರು, 'ಕಳೆದ 3 ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದು ಸಮಸ್ಯೆಯ ಆರಂಭವಾಗಿದೆ. ವೈರಸ್ ಸೌಮ್ಯವಾಗಿರುವುದರಿಂದ ಮತ್ತು ರೋಗಲಕ್ಷಣಗಳು ಸೌಮ್ಯವಾಗಿರುವುದರಿಂದ ಹೆಚ್ಚಿನ ಜನರು ಪರೀಕ್ಷೆಗಳಿಗೆ ಒಳಗಾಗುವುದಿಲ್ಲ. ಅಂತಹ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟಕರವಾಗಿದೆ' ಎಂದು ಹೇಳುತ್ತಾರೆ.

'ಪರೀಕ್ಷೆಗಳು ಅಥವಾ ಚಿಕಿತ್ಸೆಗಾಗಿ ಬರುವ ನಿಜವಾದ ರೋಗಿಗಳ ಸಂಖ್ಯೆಗೆ ಹೋಲಿಸಿದರೆ, ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಈ ಸಮಯದ ಏಕೈಕ ಅವಶ್ಯಕತೆಯೆಂದರೆ ಕೋವಿಡ್-ಸೂಕ್ತ ನಿಯಮಗಳನ್ನು ಪಾಲಿಸುವುದು ಮತ್ತು ಮಾಸ್ಕ್‌ಗಳನ್ನು ಧರಿಸುವುದಾಗಿದೆ. ಭಯಪಡುವ ಅಗತ್ಯವಿಲ್ಲ' ಎಂದರು.

ಮಣಿಪಾಲ್ ಆಸ್ಪತ್ರೆ ಮಲ್ಲೇಶ್ವರಂನ ಆಂತರಿಕ ಔಷಧ ವಿಭಾಗದ ಸಲಹೆಗಾರ ಡಾ. ಬಸವರಾಜ ಕುಂಟೋಜಿ ಮಾತನಾಡಿ, 'ಹೌದು, ಕಳೆದ 2-3 ವಾರಗಳಲ್ಲಿ ಕೋವಿಡ್-19 ಪಾಸಿಟಿವ್ ರೋಗಿಗಳು ಮತ್ತು ಕೆಲವು ಎಚ್3ಎನ್2 ರೋಗಿಗಳು ಮತ್ತು ಸಾಮಾನ್ಯ ಜ್ವರದಿಂದ ಬರುವ ರೋಗಿಗಳ ಸಂಖ್ಯೆಯಲ್ಲಿ ಬಹಳ ಕಡಿಮೆ ಹೆಚ್ಚಳವನ್ನು ನಾವು ನೋಡುತ್ತಿದ್ದೇವೆ. ನಾವು ನೋಡಿದ ಕೋವಿಡ್ ರೋಗಿಗಳೆಲ್ಲರೂ ಚೆನ್ನಾಗಿದ್ದಾರೆ. ಅವರು ಹೈಪೋಕ್ಸಿಯಾ ಅಥವಾ ತೀವ್ರವಾದ ಉಸಿರಾಟದ ತೊಂದರೆ ಅಥವಾ ಎಆರ್‌ಡಿಎಸ್‌ನಂತಹ ಯಾವುದೇ ತೊಡಕುಗಳನ್ನು ಹೊಂದಿಲ್ಲ. ಒಪಿಡಿ ಸಮಾಲೋಚನೆಯಿಂದ ಸುಧಾರಿಸಿಕೊಂಡಿದ್ದಾರೆ' ಎಂದು ಹೇಳಿದರು.

ಆದರೆ, ಇನ್‌ಫ್ಲೂಯೆಂಜಾ ವೈರಸ್ ಟೈಪ್ ಎ ಮತ್ತು ಟೈಪ್ ಬಿ ಹೊಂದಿರುವ ರೋಗಿಗಳು ಅಥವಾ ನಾವು ಸಾಮಾನ್ಯ ಜ್ವರ ಎಂದು ಕರೆಯುವ ರೋಗಿಗಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅಂತವರಿಗೆ ಆಸ್ಪತ್ರೆ ಅಗತ್ಯವಿರುತ್ತದೆ. ಈ ಇನ್‌ಫ್ಲೂಯೆಂಜಾ ವೈರಸ್ ಸೋಂಕಿತರಲ್ಲಿ ಕೆಲವೇ ಕೆಲವು ಜನರಿಗೆ ಆಮ್ಲಜನಕದ ಬೆಂಬಲದ ಅಗತ್ಯವಿರುತ್ತದೆ ಎಂದು ಅವರು ಹೇಳಿದರು.

H3N2 ರೋಗಿಗಳು 2 ರಿಂದ 3 ದಿನಗಳ ನಂತರ ತಮ್ಮ ಮನೆಯಲ್ಲಿ ತಾವಾಗಿಯೇ ಸುಧಾರಿಸಿಕೊಳ್ಳುತ್ತಾರೆ. ಕೆಲವು ರೋಗಿಗಳಿಗೆ ಒಪಿಡಿ ಚಿಕಿತ್ಸೆಯ ಅಗತ್ಯವಿರುತ್ತದೆ ಮತ್ತು ಅವರಲ್ಲಿ ಒಬ್ಬರು ಅಥವಾ 2 ರೋಗಿಗಳಿಗೆ ಆಸ್ಪತ್ರೆಗೆ ದಾಖಲು ಮತ್ತು ಆಮ್ಲಜನಕದ ಬೆಂಬಲದ ಅಗತ್ಯವಿರುತ್ತದೆ. ಅವರೆಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಕುಂಟೋಜಿ ಹೇಳಿದರು.

ಸದ್ಯ, ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,596 ಕ್ಕೆ ತಲುಪಿದೆ. ವಾರದ ಪಾಸಿಟಿವಿಟಿ ದರ ಶೇ 3.53 ಕ್ಕೆ ಏರಿದೆ. ಆರೋಗ್ಯ ಇಲಾಖೆ ರಾಜ್ಯದಾದ್ಯಂತ ಪ್ರತಿದಿನ 12,000ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದೆ.

ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಇದುವರೆಗೆ ಒಟ್ಟು 40,288 ಕೋವಿಡ್ ಸಾವುಗಳು ವರದಿಯಾಗಿವೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ 979 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ, ಮೈಸೂರು, ಚಾಮರಾಜನಗರ ಮತ್ತು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com