ರಾಷ್ಟ್ರೀಯ ಶಿಕ್ಷಣ ನೀತಿ NEP ಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ: ಸಂಸ್ಕೃತ, ಗಣಿತಕ್ಕೆ ಒತ್ತು

ರಾಷ್ಟ್ರೀಯ ಶಿಕ್ಷಣ ನೀತಿ (NEP)ಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳಿಗೆ (IKS) ಒತ್ತು ನೀಡುವುದರೊಂದಿಗೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಐಕೆಎಸ್ ನ್ನು ಪಿಜಿ ಮತ್ತು ಯುಜಿ ಕೋರ್ಸ್‌ಗಳಿಗೆ ಸೇರಿಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಕಡ್ಡಾಯವಾಗಿ ಪ್ರಾಥಮಿಕ ಕೋರ್ಸ್ ನ್ನು ಸೇರಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (NEP)ಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳಿಗೆ (IKS) ಒತ್ತು ನೀಡುವುದರೊಂದಿಗೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಐಕೆಎಸ್ ನ್ನು ಪಿಜಿ ಮತ್ತು ಯುಜಿ ಕೋರ್ಸ್‌ಗಳಿಗೆ ಸೇರಿಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಕಡ್ಡಾಯವಾಗಿ ಪ್ರಾಥಮಿಕ ಕೋರ್ಸ್ ನ್ನು ಸೇರಿಸಲಾಗುತ್ತಿದೆ.

ಯುಜಿಸಿಯು ‘ಉನ್ನತ ಶಿಕ್ಷಣ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಸೇರಿಸಲು ಕರಡು ಮಾರ್ಗಸೂಚಿಗಳನ್ನು’ ಬಿಡುಗಡೆ ಮಾಡಿದೆ, ಇದರಲ್ಲಿ ಆಯೋಗವು ಏಪ್ರಿಲ್ 30 ರವರೆಗೆ ಸಾರ್ವಜನಿಕರಿಂದ ಅಭಿಪ್ರಾಯ. ಸಲಹೆಗಳನ್ನು ಕೋರಿದೆ. ನಿನ್ನೆ ಯುಜಿಸಿಯು ‘ಭಾರತೀಯ ಜ್ಞಾನ ವ್ಯವಸ್ಥೆಗಳ ಕುರಿತು ಅಧ್ಯಾಪಕರ ತರಬೇತಿ/ಕಾರ್ಯಾಗಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮಾರ್ಗಸೂಚಿಗಳು 'ಸಂಶೋಧನೆ ಮತ್ತು ಸಾಮಾಜಿಕ ಅನ್ವಯಗಳಿಗೆ ಭಾರತೀಯ ಜ್ಞಾನ ವ್ಯವಸ್ಥೆಯ ಮಾಹಿತಿಯ ಕೇಂದ್ರೀಕರಿಸುತ್ತವೆ. ಈಗ ಇರುವ ಶೈಕ್ಷಣಿಕ ಚೌಕಟ್ಟಿನೊಳಗೆ ಐಕೆಎಸ್ ನ್ನು ಸಂಯೋಜಿಸುವುದು ಹೆಚ್ಚಿನ ಸಂಶೋಧನೆ ಮತ್ತು ಸಾಮಾಜಿಕ ಅನ್ವಯಿಕೆಗಳಿಗಾಗಿ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಸಂರಕ್ಷಿಸಲು ಮತ್ತು ಪ್ರಸಾರ ಮಾಡಲು ಸಹಾಯ ಮಾಡುತ್ತದೆ. ವಿಶ್ವವಿದ್ಯಾಲಯಗಳು / ಸಂಸ್ಥೆಗಳು ಮಾರ್ಗಸೂಚಿಗಳ ಪ್ರಕಾರ ಕೋರ್ಸ್‌ಗಳು ಮತ್ತು ಕಾರ್ಯಕ್ರಮಗಳನ್ನು ಸಿದ್ಧಪಡಿಸಬಹುದು. ಇದನ್ನು ಪಠ್ಯಕ್ರಮದಲ್ಲಿ ಸೇರಿಸುವ ಮೂಲಕ ಭಾರತದ ಪ್ರಾಚೀನ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ಯುಜಿಸಿ ಹೇಳಿದೆ.

ಮಾರ್ಗಸೂಚಿಗಳ ಪ್ರಕಾರ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಐಕೆಎಸ್ ಕುರಿತು ಪ್ರಾಥಮಿಕ ಕೋರ್ಸ್ ಅಳವಡಿಸಬಹುದು. "ಎಲ್ಲಾ ವಿದ್ಯಾರ್ಥಿಗಳು ಭಾರತೀಯ ಜ್ಞಾನ ವ್ಯವಸ್ಥೆಗಳಲ್ಲಿ ಪ್ರಾರ್ಥಮಿಕ ಕೋರ್ಸ್ ನ್ನು ತೆಗೆದುಕೊಳ್ಳಬೇಕು, ಇದು ಯುಜಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಐಕೆಎಸ್ ನ ಎಲ್ಲಾ ಸ್ಟ್ರೀಮ್‌ಗಳಿಗೆ ಒಟ್ಟಾರೆ ಪರಿಚಯವನ್ನು ಪ್ರಸ್ತುತಪಡಿಸಲು ವಿನ್ಯಾಸಗೊಳಿಸಲಾಗಿದೆ. 

ಮಾರ್ಗಸೂಚಿಗಳು ಸ್ವತಃ ಐಕೆಎಸ್ ಗೆ ಸಂಬಂಧಿಸಿದ ಎಲ್ಲದರ ಮೇಲೆ ಕೇಂದ್ರೀಕರಿಸುತ್ತವೆ, ಸಂಸ್ಕೃತ ಪಠ್ಯಗಳಿಂದ ಹಿಡಿದು ಆಯುರ್ವೇದದವರೆಗೆ, ಹಾಗೆಯೇ 'ಉಪಪಟ್ಟಿಗಳು' ಅಥವಾ ಭಾರತೀಯ ಗಣಿತಶಾಸ್ತ್ರದಲ್ಲಿನ ಪುರಾವೆಗಳ ಮಾಹಿತಿ, ಮಾರ್ಗದರ್ಶಿ ಸೂತ್ರಗಳು ಐಕೆಎಸ್‌ನಲ್ಲಿನ ಪ್ರಾಥಮಿಕ ಕೋರ್ಸ್ ನಲ್ಲಿ ಇರುತ್ತವೆ. ಭಾರತೀಯ ನಾಗರಿಕತೆ, ಶಿಕ್ಷಣ, ಸಾಹಿತ್ಯ, ಅರ್ಥಶಾಸ್ತ್ರ, ಜವಳಿ, ಲೋಹಶಾಸ್ತ್ರ, ಲಲಿತಕಲೆಗಳು ಮತ್ತು ವಾಸ್ತುಶಿಲ್ಪದ ವಿವರಗಳನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಭಾರತೀಯ ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರಕ್ಕೂ ಗಮನ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com