ಮಕ್ಕಳ ಶಿಕ್ಷಣ ಪಡೆಯುವ ಹಕ್ಕು ಕಸಿಯಲಾಗದು, ಸರ್ಕಾರ 4 ತಿಂಗಳಲ್ಲಿ ಶಾಲೆಗೆ ಕಟ್ಟಡ ನಿರ್ಮಿಸಬೇಕು: ಹೈಕೋರ್ಟ್ ಆದೇಶ

ಸಂವಿಧಾನದ 21-ಎ ಪರಿಚ್ಛೇದದ ಅಡಿಯಲ್ಲಿ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಂಡ್ಯದ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಸಂವಿಧಾನದ 21-ಎ ಪರಿಚ್ಛೇದದ ಅಡಿಯಲ್ಲಿ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್  ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಂಡ್ಯದ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಜೂನ್ 1 ರಿಂದ ನಾಲ್ಕು ತಿಂಗಳೊಳಗೆ ಅಗರಲಿಂಗನ ದೊಡ್ಡಿ ಗ್ರಾಮದಲ್ಲಿ ಜಮೀನು ಗುರುತಿಸಿ ಹೊಸ ಕಿರಿಯ ಪ್ರಾಥಮಿಕ ಶಾಲೆ ನಿರ್ಮಿಸಬೇಕು ಎಂದು ಆದೇಶ ನೀಡಿದೆ. 

35 ವರ್ಷಗಳ ಹಿಂದೆ ಗ್ರಾಮಸ್ಥರು ನೀಡಿದ ಜಮೀನಿನಲ್ಲಿ ಇಲ್ಲಿ ಶಾಲೆ ನಿರ್ಮಿಸಿ ಪಾಠ-ಪ್ರವಚನಗಳು ನಡೆಯುತ್ತಿದ್ದವು. ಆದರೆ 2018ರಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಗೆ ರಸ್ತೆ ಅಗಲೀಕರಣಕ್ಕಾಗಿ ಶಾಲೆಯ ಕಟ್ಟಡ ಧ್ವಂಸಗೊಳಿಸಬೇಕಾಗಿ ಬಂದಿದ್ದರಿಂದ ಶಾಲೆಯ 25 ಮಕ್ಕಳು ಇಂದು ಸಣ್ಣ ಕೊಠಡಿಯಲ್ಲಿ ಓದುವ ದುಸ್ಥಿತಿ ಬಂದಿದೆ.

“ಪ್ರತಿಯೊಬ್ಬ ನಾಗರಿಕನ ಹಕ್ಕು ಮುಖ್ಯ ಮತ್ತು ಯಾವುದೇ ಮಗುವನ್ನು ಶಿಕ್ಷಣದಿಂದ ವಂಚಿಸಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯದ ಅಧಿಕಾರಿಗಳು ನೆನಪಿನಲ್ಲಿಡಬೇಕು. ಈ ನ್ಯಾಯಾಲಯದ ಮುಂದಿರುವ ಸಮಸ್ಯೆ ಕೇವಲ ಒಂದು ಶಾಲೆ ಅಲ್ಲ, ಇದು ಒಂದು ಶಾಲೆ ಕೂಡ ಮಕ್ಕಳ ಮೂಲಭೂತ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದರು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಂ.ಎಚ್. ಪ್ರಕಾಶ್, ಶಾಲಾ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿ (SDMC) - ಶಾಲೆಯನ್ನು ಸಣ್ಣ ಕೊಠಡಿಯಿಂದ ನಡೆಸಲಾಗುತ್ತಿದೆ, ಅಲ್ಲಿ ಬೆಂಚುಗಳಿಲ್ಲ, ಅಡುಗೆ ಮಾಡಲು ಸ್ಥಳವಿಲ್ಲ, ಶೌಚಾಲಯ, ಬಾತ್ ರೂಂ ವ್ಯವಸ್ಥೆಯಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. 

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 66.95 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದರೂ, ಎಸ್‌ಡಿಎಂಸಿ ಮಾರ್ಚ್ 2020 ರಿಂದ ಅಧಿಕಾರಿಗಳಿಗೆ ಹಲವು ನಿರೂಪಣೆಗಳನ್ನು ಸಲ್ಲಿಸಿದ್ದರೂ, ರಾಜ್ಯವು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಪರಿಹಾರದ ಮೊತ್ತವನ್ನು ಮೊದಲು ರಾಜ್ಯದ ಕ್ರೋಢೀಕೃತ ನಿಧಿಗೆ ಬರಬೇಕು. ನಂತರವೇ ಹೊಸ ಶಾಲಾ ಕಟ್ಟಡಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com